ಮಂತ್ರಿ ಮಾಲ್-ನಲ್ಲಿ ಮತ್ತೊಂದು ಅವಘಡ ಸಂಭವಿಸಿದೆ; ಮಂತ್ರಿಮಾಲ್-ನಲ್ಲಿ ಜನರು ಎಷ್ಟು ಸುರಕ್ಷಿತ??

0
815

ಮಾನವೀಯತೆ ಮರೆತ ಜನ..!

ಎಷ್ಟೊಂದು ಕ್ರೂರಿಗಳಿರುತ್ತಾರೆ ನೋಡಿ.. ತೀವ್ರ ಗಾಯದಿಂದ ರಕ್ತ ಸೋರಿ ಮಹಿಳೆಯೊಬ್ಬರು ಕುಸಿದು ಬಿದ್ದರೂ ಯಾರೊಬ್ಬರೂ ಎತ್ತದಷ್ಟು ಕ್ರೂರತೆ..! ಎತ್ತ ಸಾಗುತ್ತಿದೆ ನಾಗರಿಕ ಸಮಾಜ..? ಅದೂ ವಿದ್ಯಾವಂತ ಡಿಗ್ನಿಫೈಡ್ ಜನರೇ ತುಂಬಿಕೊಂಡ ಜನಗಳ ನಡುವೆ..

ಹೌದು ಇದು ನಡೆದಿರೋದು.. ಬೆಂಗಳೂರಿನ ಪ್ರತಿಷ್ಠಿತ ಮಂತ್ರ ಮಾಲ್ ನಲ್ಲಿ.. ಶಾಪಿಂಗ್ ಗೆಂದು ತೆರಳಿದ್ದ ಮಹಿಳೆಯೋರ್ವಳ ಮೇಲೆ ಬೃಹದಾಕಾರದ ಬೋರ್ಡ್ ಒಂದು ಕುಸಿದು ಬಿದ್ದು ಅನಾಹುತಕಾರಿ ಘಟನೆ ಮೊನ್ನೆ ಮೊನ್ನೆಯಷ್ಟೇ ನಡೆದಿದೆ. ಮಂತ್ರಿಮಾಲ್ ನಲ್ಲಿ ಇಂತಹ ಎಡವಟ್ಟುಗಳು ಸರ್ವೇ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಆದರೆ ಡಿಗ್ನಿಫೈಡ್ ಜನ?

ಯಲಹಂಕ ನಿವಾಸಿ ಗುಣಶೀಲ ಎಂಬವರು ಗುರುವಾರ ಮಂತ್ರಮಾಲ್ ಗೆ ಶಾಪಿಂಗ್ ಗೆಂದು ತೆರಳಿದ್ದರು. ಈ ಸಂದರ್ಭ ಬಟ್ಟೆಯ ಆಫರ್ ಪ್ರದರ್ಶಿಸಿ ಜನರನ್ನು ತಮ್ಮ ಶಾಪ್ ನೊಳಕ್ಕೆ ಆಹ್ವಾನಿಸಲೋಸುಗ ಅಳವಡಿಸಿದ್ದ ಬೋರ್ಡ್ ಗುಣಶೀಲರ ತಲೆಯ ಮೇಲೆ ಬಿದ್ದಿತ್ತು.. ಅಪಘಾತದಿಂದ ಗುಣಶೀಲರ ತಲೆ ಒಡೆದು ನೆತ್ತರು ಹರಿಯುತ್ತಿದ್ದರೂ ಯಾರೊಬ್ಬರೂ ನೆರೆದವರಲ್ಲಿ ಮನುಷ್ಯರೇ ಇರಲಿಲ್ಲ.. ಯಾರೊಬ್ಬರೂ ಅವರನ್ನು ಎತ್ತಿ ಆಸ್ಪತ್ರೆಗೆ ಸೇರಿಸುವುದಕ್ಕೂ ಮುಂದೆ ಬಂದಿರಲಿಲ್ಲ; ಮಂತ್ರಿ ಮಾಲ್ ಗೆ ಸಂಬಂಧಿಸಿದವರು; ಪ್ರಥಮ ಚಿಕಿತ್ಸೆ ಕೊಡಿಸಿ ಕೈ ತೊಳೆದುಕೊಂಡರೆ; ಆಸ್ಪತ್ರೆಗೆ ಸೇರಿಸುವ ಔದಾರ್ಯ ಮೆರೆದಿಲ್ಲ. ತಮ್ಮದೇ ತಪ್ಪಿರುವಾಗಲೂ ಸಬೂಬುಗಳನ್ನ ಹೇಳಿ ನುಣುಚಿಕೊಂಡು ಸಣ್ಣತನ ಮೆರೆದಿದ್ದಾರೆ..

ಕೊನೆಗೆ ಗುಣಶೀಲರ ಪತಿ ಬರುವವರೆಗೂ ಗುಣಶೀಲರೂ ರಕ್ತ ಸುರಿಸಿಕೊಂಡೇ ನಿಲ್ಲುವಂತಾಗಿತ್ತು. ಕೊನೆಗೆ ಪತಿಯ ಆಗಮನದ ನಂತರ; ಗುಣಶೀಲರನ್ನು ಆಸ್ಪತ್ರೆಗೆ ಸೇರಿಸಿದ್ದರು. ಗುಣಶೀಲರಿಗೆ ತಲೆಯ ಮುಂಭಾಗದಲ್ಲಿ ಕೀವ್ರ ಗಾಯಗಳಾಗಿದ್ದು 7ಸ್ಟಿಚ್ ಹಾಕಲಾಗಿದೆ. ಇನ್ನು… ಎರಡು ದಿನದ ನಂತರ ಎಂಆರ್ಐ ಸ್ಕ್ಯಾನಿಂಗ್ ಮಾಡಿಸುವಂತೆ ವೈದ್ಯರು ಸೂಚಿಸಿದ್ದಾರೆ.