ಕಂಡವರ ಜಾಗದಲ್ಲಿ ಬೇಲಿ : ಮಂತ್ರಿ ಮಾಲ್ ಗೋಡೆ ಕುಸಿತದ ಹಿಂದಿರುವ ನಿಜವಾದ ಕಥೆ

0
2196

ಮಲ್ಲೇಶ್ವರಂನ ಮಂತ್ರಿ ಮಾಲ್ ಹಿಂಬದಿಯ ಗೋಡೆ ಕುಸಿತ

ಪ್ರತಿಷ್ಠಿತ ಮಂತ್ರಿ ಬಿಲ್ಡರ್ಸ್ ಮಾಲೀಕತ್ವದ ‘ಮಂತ್ರಿ ಮಾಲ್’ ನ ಹಿಂಬದಿಯ ಗೋಡೆ ಕುಸಿದಿದೆ. ಘಟನೆಯಲ್ಲಿ ಓರ್ವ ಕೆಲಸಗಾರರಾದ ಲಕ್ಷ್ಮಮ್ಮ ಎಂಬುವವರಿಗೆ ಸಣ್ಣ ಗಾಯಗಳಾಗಿದ್ದು; ಅವರಿಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ, ಅಲ್ಲೇ ಕೆಲಸ ಮಾಡುತ್ತಿದ್ದ 3 ಹೌಸೆಕೀಪಿಂಗ್ ಸಿಬ್ಬಂದಿನಿಗೆ ಸಣ್ಣ ಪುಟ್ಟ ಗಾಯಗಳು ಸಂಭವಿಸಿದೆ.

೨:೩೦ ಕ್ಕೆ ಧಿಡೀರ್ ಕುಸಿತ !

ಮಲ್ಲೇಶ್ವರಂ ನಲ್ಲಿರುವ ಮಂತ್ರಿ ಮಾಲ್ ಮಧ್ಯಾಹ್ನದ ವೇಳೆ ಈ ಘಟನೆ ಸಂಭವಿಸಿದೆಯೆಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಮೂರನೇ ಮಹಡಿಯ ಗೋಡೆ ಕುಸಿದಿದ್ದು, ಹೆಚ್ಚಿನ ಅವಘಡವಾಗಿಲ್ಲ. ಒಂದರಿಂದ ಮೂರನೇ ಅಂತಸ್ತಿನ ಹವಾನಿಯಂತ್ರಿತ ಪೈಪ್ [A/C pipe] ತುಂಡಾಗಿರುವ ಕಾರಣದಿಂದ ನೀರು ಶೇಖರಣೆಯಾಗಿ ಅದರಿಂದ ಗೋಡೆಯ ಹಂತ ಹಂತವಾಗಿ structural weakening ಆಗಿದ್ದು ಕುಸಿತವಾಗಿದೆ.

ಕಂಡವರ ಜಾಗದಲ್ಲಿ ಬೇಲಿ – ಏನ್.ಆರ್.ರಮೇಶ್ ಲೇವಡಿ !

ಬಿ.ಜೆ.ಪಿ ನಗರ ವಕ್ತಾರರಾದ ಶ್ರೀ ಏನ್.ಆರ್.ರಮೇಶ್ ಮತ್ತು ಈ ಹಿಂದೆ ರಾಜಕಾಲುವೆ ಒತ್ತುವರಿಯಾಗಿದೆಯೆಂದು ಮಂತ್ರಿ ವಿರುದ್ಧ ದೂರು ನೀಡಿದ್ದ ಎನ್.ಆರ್.ರಮೇಶ್ -ರವರು “ಇಂದು ಆಗಿರುವ ಘಟನೆಗೆ ಮಂತ್ರಿ ಬಿಲ್ಡರ್ಸ್ ರವರು ನೈತಿಕ ಹೊಣೆ ಹೊರಬೇಕು. ಕಂಡವರ ಜಾಗದಲ್ಲಿ ಬೇಲಿ ಹಾಕಿ, ರಾಜಕಾಲುವೆ ಒತ್ತುವರಿ, ‘ಬಿ’ ಖರಾಬ್ ಲ್ಯಾಂಡ್ ಒತ್ತುವರಿ ಮಾಡಿ ಮಂತ್ರಿ ಮಾಲ್ ನಿರ್ಮಿಸಲಾಗಿದೆಯೆಂದು ರಮೇಶ್ ಕಿಡಿಕಾರಿದ್ದಾರೆ.

“ಕಟ್ಟಡ ಕಾಮಗಾರಿ ಕಳಪೆ ಮಟ್ಟದ್ದಾಗಿದೆ, ಸಾರ್ವಜನಿಕ ಕಟ್ಟಡವಾದ್ದರಿಂದ ಈ ರೀತಿ ಕಟ್ಟಿದ್ದಾರೆ; ಇದೆ ಅವರ ಖಾಸಗಿ ಮನೆ ಆಗಿದ್ದರೆ, ಕಳಪೆ ಕಾಮಗಾರಿಗೆ ಅವಕಾಶ ಮಾಡುತ್ತಿದ್ದರೆ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.

ಅದು ಜಕ್ಕರಾಯನ ಕೆರೆ !

ಬೆಂಗಳೂರು ಬಗ್ಗೆ ಅಪಾರ ಕಾಳಜಿಯಿದ್ದ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಇದೆ ಜಾಗದಲ್ಲಿ ಜಕ್ಕರಾಯನ ಕೆರೆ ನಿರ್ಮಾಣ ಮಾಡಿದ್ದರು. ಆದರೆ, ಕ್ರಮೇಣ ನಗರೀಕರಣ ಮತ್ತು ಅನಿಯಂತ್ರಿತ ವಲಸೆ, ಬಿಲ್ದರ್ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ಕೆರೆ ಜಾಗವನ್ನೇ ಒತ್ತುವರಿ ಮಾಡಿಕೊಂಡು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿರುವುದು ವಿಪರ್ಯಾಸ.

ಇದು ಭೂಗಳ್ಳರ ಕಳ್ಳಾಟ – ಸಾವಿರದ ನಾನೂರು ಕೋಟಿ ಮೌಲ್ಯದ ಕೆರೆ ಜಾಗ ಗುಳುಂ ಸ್ವಾಹ !

ರಾಜಕಾಲುವೆ, ಬಂಡಿ ದಾರಿ, ಸರ್ಕಾರಿ ‘ಬಿ’ ಖರಾಬ್ ಲ್ಯಾಂಡ್ ಸೇರಿದಂತೆ -19 ಎಕರೆ, 3 ಗುಂಟೆ ಜಾಗ ಒತ್ತುವರಿ ಮಾಡಿ ಕಟ್ಟಿರುವುದೇ ಮಂತ್ರಿ ಮಾಲ್.

ಒಡೆದು ಬಿಸಾಕಿ ಅಂದರು ಸಿದ್ದಯ್ಯ !

ಈ ಹಿಂದೆ ಬಿ.ಬಿ.ಎಂ.ಪಿ ಆಯುಕ್ತರಾಗಿದ್ದ ಸಿದ್ದಯ್ಯ – ನವರು ಹಲವು ಸಮಿತಿಗಳನ್ನು ರಚಿಸಿ, ತನಿಖೆ ಕೈಗೊಂಡು ಮಂತ್ರಿ ಕಟ್ಟಡವನ್ನು ತೆರವು ಮಾಡುವ ಸೂಚನೆ ನೀಡಿದ್ದರು. ೩ ಜನ ಜಂಟಿ ನಿರ್ದೇಶಕರು, ಜಂಟಿ ಆಯುಕ್ತರು, ಬಿ.ಬಿ.ಎಂ.ಪಿ (ಪಶ್ಚಿಮ ವಲಯ), ಉಪ ಆಯುಕ್ತರು ಬಿ.ಬಿ.ಎಂ.ಪಿ.(ಕಂದಾಯ), ಭೂಮಾಪನ ಇಲಾಖೆಯ ನಿರ್ದೇಶಕರ್ಗಳನ್ನೊಳಗೊಂಡ ಜಂಟಿ ತನಿಖಾ ಸಮಿತಿಯನ್ನು ರಚಿಸಿದ್ದರು. ಜಂಟಿ ಸಮಿತಿಯು ವರದಿ ನೀಡಿ ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಲು ಸೂಚಿಸಿದ್ದರು.

ಅದು ಕಳಪೆ ಕಾಮಗಾರಿ – ತನಿಖೆಗೆ ಆದೇಶ

ಘಟನೆ ನೀಡಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರಿನ ಮೇಯರ್ ಶ್ರೀಮತಿ ಪದ್ಮಾವತಿಯವರು – ಮಂತ್ರಿ ಮಾಲ್ ಗೆ ನೀಡಿರುವ ಒಕ್ಕುಪ್ಯಾನ್ಸಿ ಸರ್ಟಿಫಿಕೇಟ್ [O.C] ಅನ್ನು ಈ ಕೂಡಲೇ ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೂ ಯಾವುದೇ ಮಳಿಗೆ/ವ್ಯವಹಾರಗಳು ನಡೆಯುವಂತಿಲ್ಲವೆಂದು ಮೇಯರ್ ಆದೇಶಿಸಿದ್ದಾರೆ.

ಹಣದಾಸೆಯಿಂದ, ಜಕ್ಕರಾಯನ ಕೆರೆಯನ್ನು ಒತ್ತುವರಿ ಮಾಡಿದ್ದು ಅಲ್ಲದೆ; ದಿನಕ್ಕೆ ಸಾವಿರಾರು ಜನ ಶಾಪಿಂಗ್ ಗಾಗಿ, ಸಿನೆಮಾ ವೀಕ್ಷಿಸುವುದಕ್ಕಾಗಿ ಬರುವ ಮಂತ್ರಿ ಮಾಲ್ ನಲ್ಲಿ ಕಳಪೆ ಕಾಮಗಾರಿಯಿಂದ ಗೋಡೆ ಕುಸಿದಿರುವುದು ನಮ್ಮ ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಸಿದ್ದಯ್ಯ ನವರು ರಚಿಸಿದ ತನಿಖಾ ತಂಡದ ವರದಿಯನ್ನು ಈ ಕೂಡಲೇ ಅನುಷ್ಠಾನಗೊಳಿಸಿ; ಸಾರ್ವಜನಿಕ ಸುರಕ್ಶತೆಗೆ ಧಕ್ಕೆಯಾಗಿರುವ; ಕೆರೆ ಜಾಗ ಒತ್ತುವರಿ ಮಾಡಿಕೊಂಡಿರುವ ಮಂತ್ರಿ ಮಾಲ್ ಕಟ್ಟಡವನ್ನು ಈ ಕೂಡಲೇ ತೆರವು ಗೊಳಿಸಬೇಕು. ಉತ್ಸಾಹಿ, ಯುವ-ನಾಯಕರು; ಕ್ಷೇತ್ರದ ಶಾಸಕರಾಗಿರುವ ದಿನೇಶ್ ಗುಂಡು ರಾವ್ ರವರು, ಇದರ ಮುಂದಾಳತ್ವ ವಹಿಸಿ ನಿಕ್ಷ್ಪಕ್ಷವಾದ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಜರುಗಿಸಬೇಕೆಂದು ಮನವಿ ಮಾಡಿಕೊಳ್ಳುತೇವೆ.