ಬೆಂಗಳೂರು ಮಂತ್ರಿ ಮಾಲ್ ನಲ್ಲಿ ಗೋಡೆ ಕುಸಿತ

0
820

ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪ್ರತಿಷ್ಠಿತ ಮಂತ್ರಿಮಾಲ್ ನ ಹಿಂಭಾಗದ ಗೋಡೆ ಕುಸಿದು ಇಬ್ಬರು ಸಿಬ್ಬಂದಿ ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಮಾಲ್ ನ ಹಿಂಬದಿ ಗೋಡೆ ಕುಸಿದ ಕಾರಣದಿಂದಾಗಿ, ಲಕ್ಷ್ಮಮ್ಮ (45) ಎಂಬುವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಅವರು ಹೌಸ್ ಕೀಪಿಂಗ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

mantri mall

ಇಂದು ಬೆಳಗ್ಗೆ ಎಂದಿನಂತೆ ಮಂತ್ರಿ ಮಾಲ್ ಆರಂಭಗೊಂಡಿದ್ದು, ಜನರಿಂದ ತುಂಬಿ ತುಳುಕುತ್ತಿತ್ತು. ಆದರೆ, ಮಧ್ಯಾಹ್ನದ ಹೊತ್ತಿಗೆ ಮಾಲ್ ನ ಹಿಂಬದಿಯಲ್ಲಿರುವ ಗೋಡೆ ಕುಸಿದು ಅಲ್ಲಿದ್ದ ಕೆಲವರ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಇವರಲ್ಲಿ ಲಕ್ಷ್ಮಮ್ಮ ಎಂಬುವರ ಬಗ್ಗೆ ಮಾತ್ರ ಮಹಿತಿ ಲಭ್ಯವಾಗಿದ್ದು, ಇತರರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಲಕ್ಷ್ಮಮ್ಮ ಹೊರತುಪಡಿಸಿದಂತೆ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿರಬಹುದೆಂದು ಶಂಕಿಸಲಾಗಿದೆ.

ಗೋಡೆ ಕುಸಿತಕ್ಕೆ ನಿಖರ ಕಾರಣ ಸಿಕ್ಕಿಲ್ಲ. ಇಡೀ ಮಾಲ್ ನಲ್ಲಿ ಅಳವಡಿಸಲಾಗಿರುವ ಸೆಂಟ್ರಲ್ ಎಸಿಯ ಪೈಪ್ ತುಂಡಾಗಿದ್ದು, ಅದರಲ್ಲಿ ನೀರು ಸೋರಿಕೆಯಾಗಿದ್ದರಿಂದಾಗಿ ಗೋಡೆಯು ನೀರಿನಲ್ಲಿ ನೆನೆದಿದ್ದರಿಂದ ಕುಸಿಯಿತು ಎಂದು ಅಂದಾಜಿಸಲಾಗಿದೆ.