ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಭಾರಿ ಪೈಪೋಟಿ; ಹೊಸ ಶಾಸಕರ ಅಖಾಡದಲ್ಲಿ ಹಳಬರು, ಸಚಿವ ಸ್ಥಾನ ಸಿಗದಿದ್ದರೆ ಮತ್ತೆ ರಾಜೀನಾಮೆ??

0
168

ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಕಡ್ದ ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರಕ್ಕೆ ದೊಡ್ಡ ತಲೆ ನೋವು ಶುರುವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಬಿಜೆಪಿಯಲ್ಲಿವೂ ಅತೃಪ್ತರು ಹುಟ್ಟುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದ 15 ಶಾಸಕರು ಒಟ್ಟಿಗೆ ಇದ್ದು, ಈಗಾಗಲೇ ಅದರಲ್ಲಿ 12 ಜನರು ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ತೀವ್ರ ಪೈಪೋಟಿ ನಡೆಯುತ್ತಿದ್ದು, ಹೊಸ ಶಾಸಕರ ಜೊತೆ ಮೂಲ ಬಿಜೆಪಿ ಶಾಸಕರು ತಮಗೂ ಇದೇ ಖಾತೆ ಬೇಕೆಂದು ಪಟ್ಟು ಹಿಡಿದಿದ್ದಾರೆ. ಎನ್ನಲಾಗುತ್ತಿದೆ.

Also read: ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವೇನು? ಯಾಕೆ ಹೀಗಾಯ್ತು ಎಂಬ ಬಗ್ಗೆ ಶೀಘ್ರದಲ್ಲಿಯೇ ನಾಡಿನ ಜನರಿಗೆ ತಿಳಿಸುತ್ತೇನೆ; ಡಿಕೆ ಶಿವಕುಮಾರ್​​

ಈಗಾಗಲೇ ಹೊಸ ಶಾಸಕರು ಮತ್ತು ಹಳೆಯ ಶಾಸಕರಿಂದ ಸಿಎಂ ಭೇಟಿ ನಿರಂತರವಾಗಿ ಮುಂದುವರಿದಿದೆ. ಮೂಲ ಶಾಸಕರಾದ ಉಮೇಶ್ ಕತ್ತಿ, ಎಸ್ ಎ ರಾಮದಾಸ್, ಮುರುಗೇಶ್ ನಿರಾಣಿ, ರಾಜುಗೌಡ, ದತ್ತಾತ್ರೇಯ ಪಾಟೀಲ ರೇವೂರ, ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ಎಂ.ಪಿ. ಕುಮಾರಸ್ವಾಮಿ, ಅರಗ ಜ್ಞಾನೇಂದ್ರ, ಪೂರ್ಣಿಮಾ ಶ್ರೀನಿವಾಸ್, ಎಸ್ ಆರ್ ವಿಶ್ವನಾಥ್, ಸತೀಶ್ ರೆಡ್ಡಿ, ಮಾಡಾಳ್ ವೀರೂಪಾಕ್ಷಪ್ಪ, ಸುಭಾಷ್ ಗುತ್ತೇದಾರ್, ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಸೇರಿ ಹಲವರು ಸಚಿವ ಸ್ಥಾನಕ್ಕೆ ಒತ್ತಡ ಹೇರಲಾರಂಭಿದ್ದಾರೆ ಎನ್ನಲಾಗಿದೆ.

Also read: ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪಾಸ್; ಅಮಿತ್ ಶಾ ಸೇರಿ ಪ್ರಮುಖ ನಾಯಕರ ಮೇಲೆ ನಿರ್ಬಂಧ ವಿಧಿಸಲು ಅಮೆರಿಕದಲ್ಲಿ ಒತ್ತಾಯ.!

ನಗರಾಭಿವೃದ್ಧಿ ಖಾತೆಗೆ 6 ಶಾಸಕರ ಕಣ್ಣು?

ಹೌದು 2018ರ ಚುನಾವಣೆ ಚುನಾವಣೆಯಲ್ಲಿ ಬಿಜೆಪಿ 11 ಶಾಸಕರು ಬಿಜೆಪಿ ಗೆದ್ದಿದ್ದರು. ಸೋಮವಾರ ಬಂದ ಫಲಿತಾಂಶದಿಂದಾಗಿ ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಸಂಖ್ಯೆ 14 ಆಗಿದೆ. ಮೊದಲು ಯಡಿಯೂರಪ್ಪಅವರು ಪ್ರಮಾಣ ವಚನ ಸ್ವೀಕರಿಸಿದಾಗ 17 ಮಂದಿ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಇದರಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ್ , ಆರ್. ಅಶೋಕ್ , ವಿ ಸೋಮಣ್ಣ ಹಾಗೂ ಸುರೇಶ್ ಕುಮಾರ್ ಸಂಪುಟ ಸೇರಿದ್ದರು ಕೆ.ಆರ್ ಪುರಂ ನ ಬೈರತಿ ಬಸವರಾಜ್ ಹಾಗೂ ಮಹಾಲಕ್ಷ್ಮಿ ಲೇಔಟ್ ಗೋಪಾಲಯ್ಯ ಅತಿ ಹೆಚ್ಚಿನ ಮತ ಪಡೆದು ಗೆದ್ದಿದ್ದರು. ಈ ಇಬ್ಬರೂ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಲಾಬಿ ನಡೆಸಿದ್ದಾರೆ.

ನಾನು ಬೆಂಗಳೂರಿನ ಬಗ್ಗೆ ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದೇನೆ, ಕೆಆರ್ ಪುರಂ ನಲ್ಲಿ ಪಂಚಾಯತ್ ನಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ನಂತರ ಬಿಬಿಎಂಪಿ ಕೌನ್ಸಿಲರ್ ಆಗಿದ್ದವರು, ಅದಾದ ನಂತರ ಶಾಸಕರಾಗಿ ಆಯ್ಕೆಯಾಗಿದ್ದರು, ಇನ್ನೂ ಗೋಪಾಲಯ್ಯ ಕೂಡ ಇದೇ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ನಾನು ಮಹಾಲಕ್ಷ್ಮಿ ಲೇಔಟ್ ನ ಶಾಸಕನಾಗಿ ಆಯ್ಕೆಯಾದ ಮೇಲೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದೇನೆ, ಒಂದು ವೇಳೆ ನನಗೆ ಅವಕಾಶ ನೀಡಿದರೇ ನನ್ನ ನಗರಕ್ಕಾಗಿ ಉತ್ತಮವಾದದ್ದನ್ನು ಮಾಡುತ್ತೇನೆ, ಎಂದು ಹೇಳಿದ್ದಾರೆ, ಎಸ್ ಟಿ ಸೋಮಶೇಖರ್ ಕೂಡ ಇದೇ ಖಾತೆ ಮೇಲೆ ಕಣ್ಣಿಟ್ಟದ್ದಾರೆ.

ಗೊಂದಲ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರ ಟೆನ್ಷನ್ ಕೂಡ ಹೆಚ್ಚಾಗುತ್ತಿದೆ. ಗೊಂದಲ ನಿವಾರಣೆ ಹೇಗೆಂಬ ಆತಂಕದಲ್ಲಿ ಸಿಎಂ ಇದ್ದು, ಹೈಕಮಾಂಡ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗುವ ಸಾಧ್ಯತೆ ಇದೆ. ಇದನ್ನೂ ಓದಿ: ಸಿಎಂ ಭೇಟಿಯಾಗಿ ಬೇಡಿಕೆಗಳನ್ನು ಮುಂದಿಟ್ಟ ನೂತನ ಶಾಸಕರು ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ಬಳಿ ಸಿಎಂ ಚರ್ಚಿಸಲಿದ್ದು ಗೊಂದಲ, ಅಸಮಾಧಾನ ಬಗೆಹರಿಸಲಿದ್ದಾರೆ. ಆದರೆ ಈ ಸಲವೂ ಸಚಿವ ಸ್ಥಾನ ಸಿಗದಿದ್ದರೆ ಪಕ್ಷದ ಮೂಲ ಶಾಸಕರು ಮೈತ್ರಿ ಶಾಸಕರ ಹಾದಿ ಹಿಡಿಯುತ್ತಾರೆ ಎನ್ನುವ ಅನುಮಾನ ಮೂಡಿದೆ.

Also read: ಮಹಿಳೆಯರ ಸುರಕ್ಷತೆಗಾಗಿ ಪಿಕಪ್, ಡ್ರಾಪ್ ಸೇವೆ ಪ್ರಾರಂಭಿಸಿದ ಗದಗ್ ಪೊಲೀಸರು; ಈ ನೂತನ ಕೆಲಸಕ್ಕೆ ಭಾರಿ ಮೆಚ್ಚುಗೆ.!