ಮಾರಮ್ಮನ ಪ್ರಸಾದ ಬಲಿ ತೆಗೆದುಕೊಂಡಿರುವುದು ಕೇವಲ ಭಕ್ತರನ್ನು ಅಷ್ಟೇಅಲ್ಲ; ಏನು ಅರಿಯದ ಪಕ್ಷಿಗಳನ್ನು ಕೂಡ ಬಲಿ ತೆಗೆದುಕೊಂಡಿದೆ…

0
422

ಚಾಮರಾಜ ನಗರದ ಸುಳ್ವಾಡಿ ಗ್ರಾಮದಲ್ಲಿ ಶುಕ್ರವಾರ ಮಾರಮ್ಮ ದೇವಿಯ ಪ್ರಸಾದ ತಿಂದು 11 ಜನರು ಮಾರಣ ಹೋಮವಾಗಿದ್ದು ಸುಮಾರು 80 ಕ್ಕೂ ಹೆಚ್ಚು ಜನರು ಸಾವು ಬದುಕಿನ ಮದ್ಯ ಹೋರಾಟ ನಡೆಸಿದ್ದಾರೆ. ಇದರಲ್ಲಿ ಬರಿ ಮನುಷ್ಯರು ಮಾತ್ರವಲ್ಲದೆ 70 ಪಕ್ಷಿಗಳು ಕೂಡ ಸತ್ತಿದ್ದು. ಇನ್ನೂ ಉಳಿದ ಕಾಗೆಗಳು ಸಾವುತ್ತಿವೆ. ಈ ಘಟನೆಗೆ ಇಡಿ ರಾಜ್ಯವೇ ನಡುಗಿ ಹೋಗಿದೆ. ಸ್ವಲ್ಪ ದಿನಗಳ ಹಿಂದೆಯೇ ಮಂಡ್ಯದ ಬಸ್ ದುರಂತ ಮಾಸುವ ಮುನ್ನವೇ ಈ ಘಟನೆ ನಡೆದಿದ್ದು ರಾಜ್ಯದ ತುಂಬೆಲ್ಲ ದುಃಖ ಆವರಿಸಿದೆ.

ಪಕ್ಷಿಗಳು ಇನ್ನೂ ತಿನ್ನುತಿವೆ ವಿಷ ಪ್ರಸಾದವನ್ನು:

ರಾಸಾಯನಿಕ ಅಥವಾ ಕ್ರಿಮಿನಾಶಕದ ವಾಸನೆ ಬಂದಿದ್ದರಿಂದ ಕೆಲವರು ಅಲ್ಲಿಯೇ ಪ್ರಸಾದ ಬೀಸಾಡಿದ್ದಾರೆ. ಪರಿಣಾಮ ಅದನ್ನು ತಿಂದ ಪಕ್ಷಿಗಳು ಕೂಡ ಒದ್ದಾಡಿ, ಒದ್ದಾಡಿ ಪ್ರಾಣ ಬಿಟ್ಟಿವೆ. ಕಾಗೆ, ಗೊರವಂಕಗಳು ಸೇರಿದಂತೆ ವಿವಿಧ ಪಕ್ಷಿಗಳ ಸಾವಿನ ಸಂಖ್ಯೆ70 ಗಡಿ ದಾಟುತ್ತಿದೆ. ಅನೇಕ ಪಕ್ಷಿಗಳು ದೇವಸ್ಥಾನ ಹೊರಗಿನ ಆವರಣದಲ್ಲಿ, ಮರದ ಕೆಳಗೆ, ಪೊದೆಯ ಒಳಗೆ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಬಿದ್ದು ಪ್ರಾಣ ಬಿಟ್ಟಿವೆ. ಪಕ್ಷಿಗಳ ಸಾವಿನ ಸಂಖ್ಯೆ ಹೆಚ್ಚುವುದಕ್ಕೂ ಮುನ್ನ ದೇವಸ್ಥಾನದ ಸುತ್ತಲೂ ಬಿದ್ದಿರುವ ವಿಷಯುಕ್ತ ಆಹಾರವನ್ನು ತೆಗೆದು ಹಾಕದೇ ಇದ್ದರೆ ಮತ್ತಷ್ಟು ಪಕ್ಷಿಗಳು ಜೀವ ಕಳೆದುಕೊಳ್ಳುವ ಸಾಧ್ಯತೆಗಳಿದೆ. ಹೀಗಾಗಿ ಸ್ಥಳೀಯ ಆಡಳಿತಾಧಿಕಾರಿಗಳು, ನಾಯಕರು ದೇವಸ್ಥಾನದ ಸುತ್ತಮುತ್ತ ಬಿದ್ದಿರುವ ವಿಷಯುಕ್ತ ಆಹಾರವನ್ನು ತೆಗೆದು ಹಾಕಲು ಮುಂದಾಗಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಅಧಿಕಾರದ ಆಸೆಗೆ ವಿಷ ಹಾಕಿದ್ರಾ?

ಈ ಪ್ರಕರಣಕ್ಕೆ ಸಂಬಧಿಸಿದಂತೆ ಈಗಾಗಲೇ ಇಬ್ಬರನ್ನು ಬಂದಿಸಿದ್ದು ತನಿಖೆ ನಡೆಯುತ್ತಿದ್ದು. ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಮಾರಮ್ಮ ದೇಗುಲದ ಆಡಳಿತ ಮಂಡಳಿಯಲ್ಲಿ 2 ಬಣಗಳಿದ್ದು, ಇಬ್ಬರ ನಡುವಿನ ಕಿತ್ತಾಟದಿಂದಲೇ ಉದ್ದೇಶಪೂರ್ವಕವಾಗಿ ವಿಷ ಬೆರೆಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾಗಿರುವ ಚೆನ್ನಪ್ಪಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ಚೆನ್ನಪ್ಪಿ ಅವರ ಮಗ ಲೊಕೇಶ್, ದೇವಸ್ಥಾನದ ಕಮಿಟಿ ವಿಷಯದ ಸಂಬಂಧ ವಿಷ ಬೆರೆಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಸಾದದಲ್ಲಿ ವಿಷ ಬೆರೆಸಿದ್ದು ತಮಿಳುನಾಡಿನವರಂತೆ:

ತನಿಖೆಯ ವೇಳೆ ದೇವಸ್ಥಾನದ ಸದ್ಯಸ್ಯ ಚೆನ್ನಪ್ಪಿ ಹೇಳಿಕೆ ನೀಡಿದ್ದು. ನನ್ನ ತಂದೆಯವರು ಈ ದೇವಾಲಯದ ಟ್ರಸ್ಟಿ ಆಗಿದ್ದವರು. 10 ಜನರ ಸದಸ್ಯರೊಂದಿಗೆ ದೇವಾಲಯದ ಲೆಕ್ಕ ಪತ್ರಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ತಮಿಳುನಾಡು ಮೂಲದ ಭ್ರಹ್ಮೇಶ್ವರಿ ದೇವಾಲಯದ ಕಾಳಪ್ಪ ಎಂಬವರಿಗೂ ನನ್ನ ತಂದೆಗೂ ಆಗಿ ಬರುತ್ತಿರಲಿಲ್ಲ. ಅವರು ನಮ್ಮನ್ನೆಲ್ಲಾ ಕೊಲ್ಲಲು ವಿಷ ಹಾಕಿದ್ದಾರೆ’ ಎಂದು ಲೊಕೇಶ್ ಆರೋಪಿಸಿದ್ದಾರೆ.

ಒಟ್ಟಾರೆಯಾಗಿ ತಮ್ಮ ಬೆಳೆಬೇಯಿಸಿಕೊಳ್ಳಲು ಹೋಗಿ ಅಮಾಯಕ ಜನರ ಪ್ರಾಣವನ್ನೇ ಬಲಿ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಏನು ತಿಳಿಯ ಪಕ್ಷಿ -ಪ್ರಾಣಿಗಳ ಸಾವಿಗೆ ಕಾರಣರಾಗಿದ್ದಾರೆ. ಇಂತಹ ವಿಕೃತ ಕೃತ್ಯ ಮಾಡಿದ ಜನರು ಜಗತ್ತಿನ ಯಾವ ಮೂಲೆಯಲ್ಲಿ ಸಿಗಲು ಸಾದ್ಯವಿಲ್ಲ. ಅವರಿಗೆ ಸರಿಯಾದ ಶಿಕ್ಷೆಯಾಗಲೇಬೇಕು ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.