ಬೆಂಗಳೂರು ದಕ್ಷಿಣದ ನೈಜ ಮತದಾರರು ಬಿ.ಜೆ.ಪಿ.ಗೆ ಮತ ಹಾಕುವುದನ್ನು ತಪ್ಪಿಸಲು ಅವರ ಹೆಸರನ್ನು ಪಾಲಿಕೆಯವರು ಕೈ ಬಿಟ್ಟಿದ್ದಾರೆ: ಗಂಭೀರ ಆರೋಪ ಮಾಡಿರುವ ಬಿ.ಜೆ.ಪಿ.!!

0
318

ಮತದಾನ ಮಾಡಲು ಎಷ್ಟೋ ದೂರದಿಂದ ಟ್ರಾಪಿಕ್ ಜಾಮ್ ನಲ್ಲಿ ಪ್ರಯಾಣ ಮಾಡಿ ಬಂದು ಕುಷಿಯಿಂದ ತಮ್ಮ ಹಕ್ಕು ಚಲಾಯಿಸಲು ಬಂದ ಬೆಂಗಳೂರಿನ ನಾಗರಿಕರಿಗೆ ಶಾಕ್ ಆಗಿದೆ. ತಾಸುಗಟ್ಟಲೇ ಸರದಿಯಲ್ಲಿ ನಿಂತು ಮತಗಟ್ಟೆ ಹೋದಾಗ, ಅಲ್ಲಿನ ಸಿಬ್ಬಂದಿಯು ನಿಮ್ಮ ಹೆಸರನ್ನು ಕೈಬಿಡಲಾಗಿದೆ ಎಂದಾಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆಗಳು ಬೆಂಗಳೂರಿನ ಹಲವು ಕಡೆಯಲ್ಲಿ ನಡೆದಿದ್ದು. ಮತಗಟ್ಟೆ ಸಿಬ್ಬಂದಿಯೊಂದಿಗೆ ವಾಗ್ವಾದ ಕೂಡ ನಡೆಸಿದ ಮತದಾರರು ತೀವ್ರ ವಿರೋಧ ವ್ಯಕ್ತಪಡಿಸಿದ ಕೆಲಕಾಲ ಪ್ರತಿಭಟನೆ ನಡೆಸಿದರು.

ಹೌದು ಬೆಂಗಳೂರು ಕೇಂದ್ರ, ಉತ್ತರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳ ಕೆಲ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಹಲವು ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಕೆಲವರು ಮತಗಟ್ಟೆ ಸಿಬ್ಬಂದಿಯೊಂದಿಗೆ ವಾಗ್ವಾದ ಕೂಡ ನಡೆಸಿದರು. ಮತಗಟ್ಟೆಗಳಿಗೆ ಧಾವಿಸಿ ಬಂದಿದ್ದವರು ಮತದಾರರ ಪಟ್ಟಿಯಲ್ಲಿ ಹೆಸರು ಮಾಯವಾಗಿರುವುದು ತಿಳಿಯುತ್ತಿದ್ದಂತೆಯೇ ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕಿದರು. ತಾಸುಗಟ್ಟಲೇ ಸರದಿಯಲ್ಲಿ ನಿಂತು ಮತಗಟ್ಟೆ ಹೋದಾಗ, ಅಲ್ಲಿನ ಸಿಬ್ಬಂದಿಯು ನಿಮ್ಮ ಹೆಸರನ್ನು ಕೈಬಿಡಲಾಗಿದೆ ಎಂದಾಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆಗಳು ನಡೆದಿವೆ.

ಶಾಂತಿನಗರದ ವ್ಯಾಪ್ತಿಯ 119 ಬೂತ್ ನಲ್ಲಿ 1000 ಕ್ಕೂ ಹೆಚ್ಚು ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿವೆ. ಮೌಂಟ್‌ ಕಾರ್ಮೆಲ್‌ ಕಾಲೇಜು, ಬಸವನಗುಡಿಯ ಮೂಕಾಂಬಿಕಾ ಶಾಲೆಯ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಹಲವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಹಾಗೆಯೇ, ಸಿ.ವಿ.ರಾಮನ್‌ನಗರದ ಕೇಂದ್ರೀಯ ವಿದ್ಯಾಲಯದ ಮತಗಟ್ಟೆಯಲ್ಲಿ ಮೊದಲಿಗೆ ಪಟ್ಟಿಯಲ್ಲಿ ಹೆಸರಿಲ್ಲವೆಂದು ಮತದಾನ ಮಾಡಲು ಅವಕಾಶ ಕೊಡಲಿಲ್ಲ. ಮತದಾರರು ಜೋರು ಮಾಡಿದಾಗ ಪಟ್ಟಿಯಲ್ಲಿ ಹೆಸರು ಇರುವುದನ್ನು ಹುಡುಕಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಹೆಬ್ಬಾಳದ ಸರಕಾರಿ ಶಾಲೆ, ಮಹಾಲಕ್ಷ್ಮಿ ಲೇಔಟ್‌ನ ಮತಗಟ್ಟೆಗಳಲ್ಲಿ ಹಲವರ ಹೆಸರು ಪಟ್ಟಿಯಲ್ಲಿರಲಿಲ್ಲ.

ಹೀಗಾಗಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕಾಮಾಕ್ಯ ಚಿತ್ರಮಂದಿರ ಬಳಿಯ ವಿಕಾಸ್‌ ಶಾಲೆಯ ಮತಗಟ್ಟೆಯಲ್ಲಿ ಮತದಾರರ ಪಟ್ಟಿಯಿಂದ ಹಲವರ ಹೆಸರನ್ನು ಕೈಬಿಟ್ಟಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಮತದಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ಅಷ್ಟೇ ಅಲ್ಲದೆ ಮತಚಲಾಯಿಸಲು ಬಂದ ಸುಮಾರು 367 ಮತದಾರರು ತಮ್ಮ ಹೆಸರಿಲ್ಲದೇ ಕಂಗಾಲಾದ ಘಟನೆ ರಾಜಾಜಿ ನಗರದ ಕೆಎಲ್‍ಇ ಕಾಲೇಜಿನ ಮತಗಟ್ಟೆಯಲ್ಲಿ ನಡೆದಿದೆ. ಬೆಂಗಳೂರು ಗ್ರಾಮಂತರ ಲೋಕಸಭಾ ಕ್ಷೇತ್ರದ ವ್ತಾಪ್ತಿಗೆ ಬರುವ ಮತಗಟ್ಟೆಗೆ ತೆರಳಿದ 367 ಮಂದಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದನ್ನು ನೋಡಿ ಕಂಗಾಲಾಗಿದ್ದಾರೆ.

ಮತದಾರರು ಮತಗಟ್ಟೆ ಮುಂದೆ ಜಮಾಯಿಸಿ ಚುನಾವಣೆ ನಿಲ್ಲಿಸುವಂತೆ ಪ್ರತಿಭಟನೆ ನಡೆಸಿದರು. ಬೆಳಗ್ಗೆಯಿಂದಲೇ ಮತದಾರರು ಸಾಲುಗಟ್ಟಿ ಮತಗಟ್ಟೆಗೆ ಆಗಮಿಸಿದರು. ಆದರೆ ಮತ ಹಾಕಲು ಆಗದೇ ಮತದಾರರು ಅಸಹಾಯಕತೆ ವ್ಯಕ್ತಪಡಿಸಿದ ಅಲ್ಲಿಂದ ಮರಳಿದರು. ಮತದಾರರ ಪಟ್ಟಿ ಪರಿಶೀಲಿಸಿದಾಗ ಅದರಲ್ಲಿ ಹೆಸರು ರದ್ದುಪಡಿಸಿದೆ ಎಂದು ತೋರಿಸುತ್ತಿದೆ. ಈ ಬಗ್ಗೆ ಪರಿಶೀಲನೆ ಮಾಡಿ ಎಂದು ಅಧಿಕಾರಿಗಳ ಬಳಿ ಮತದಾರರು ಮನವಿ ಮಾಡಿದರು. ಆದರೆ ಅಧಿಕಾರಿಗಳು ಪರಿಶೀಲಿಸುವುದಾಗಿ ಸಬೂಬು ಹೇಳುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಮತದಾರರು ಚುನಾವಣೆ ಪ್ರಕ್ರಿಯೆ ನಿಲ್ಲಿಸುವಂತೆ ಆಗ್ರಹಿಸಿದರು. ಪರಿಶೀಲನೆ ನಡೆಸಿದ ನಂತರ ಚುನಾವಣೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚುನಾವಣಾ ಅಧಿಕಾರಿಗಳು ಡ್ರಾಫ್ಟ್ ರೋಲ್- ಗಳನ್ನು ಮೊದಲು ಅಕ್ಟೋಬರ್ 2018 ರಲ್ಲಿ ಪ್ರಕಟಿಸಲಾಯಿತು. ಅಂದಿನಿಂದ, ನಾವು ಅವರ ಹೆಸರುಗಳನ್ನು ಪರೀಕ್ಷಿಸಲು ಮತದಾರರಿಗೆ ಹೇಳುತ್ತಿದ್ದೆವು. ಅಂತಿಮ ಸುರುಳಿಗಳನ್ನು ಜನವರಿ 15 ರಂದು ಪ್ರಕಟಿಸಲಾಯಿತು, ನಂತರ ನಾವು ಜನರಿಗೆ, ‘ದಯವಿಟ್ಟು ನಿಮ್ಮ ಹೆಸರನ್ನು ಪರೀಕ್ಷಿಸಿ’ ಎಂದು ಹೇಳಿದ್ದೇವೆ. ಕೆಲವರು ಇದಕ್ಕೆ ಪ್ರತಿಕ್ರಿಯೆ ನೀಡಿದರು ಇನ್ನೂ ಕೆಲವರಿಗೆ ಮಾರ್ಚ್ 16 ರವರೆಗೆ ಸಮಯ ನೀಡಲಾಗಿತ್ತು. ಇದರಲ್ಲಿ ನಮ್ಮ ಗಮನಕ್ಕೆ ಬಂದಿರುವ ಹಲವು ದೂರುಗಳನ್ನು ಸರಿಪಡಿಸಿದ್ದೇವೆ. ನಮ್ಮ ಅಧಿಕಾರಿಗಳು ಮನೆಯಿಂದ ಮನೆಗೆ ಹೋಗುತ್ತಾರೆ. ಈ ಸಮಯದಲ್ಲಿ ವ್ಯಕ್ತಿಯು ಈ ಸ್ಥಳದಲ್ಲಿ ವಾಸಿಸುತ್ತಿಲ್ಲ ಎನ್ನುವುದು ತಿಳಿದಿದೆ ಎಂದು ಹೇಳಿದ್ದಾರೆ.