ಮಾರ್ಕ್ ಜುಕರ್ ಬರ್ಗ್ ರಚನಕಾರ. ಅವನು ತನ್ನ ಕೊಠಡಿಯಿಂದ ಹೇಗೆ ಫೇಸ್ಬುಕ್ ಅನ್ನು ರಚಿಸಿದನೆಂಬುವುದು ನಮಗೆಲ್ಲ ಗೊತ್ತಿದೆ. ಮಾರ್ಕ್ ಜುಕರ್ ಬರ್ಗ್ ಅವನ ಸಾಧನೆಯ ಹಿಂದೆ ಇರುವ ತ್ಯಾಗಗಳ ಬಗ್ಗೆ ನಿಮಗೆ ತಿಳಿದಿದೆಯೇ?

ಫೇಸ್ ಬುಕ್ 2004 ರಲ್ಲಿ ಮಾರ್ಕ್ ಫೇಸ್ ಬುಕ್ ಅನ್ನು ಪ್ರಾರಂಭಿಸಿದರು. ಆದರೆ 2005 ರಲ್ಲಿ ಅವನು ತನ್ನ ಜೀವನದ ಅತ್ಯಂತ ಪ್ರಮುಖ ನಿರ್ಧಾರವನ್ನು ಎದುರಿಸಿದರು.
ಹಾರ್ವರ್ಡ್ನಲ್ಲಿ ಓದುತ್ತಿದ್ದ ಮಾರ್ಕ ಅಲ್ಲಿಯೇ ಉಳಿಯಲು ಮತ್ತು ನಮ್ಮ ಅದ್ಯಾನವನ್ನು ಕೈ ಬಿಡಬೇಕಾಯಿತು.
“ಹಾರ್ವರ್ಡ್ನಲ್ಲಿ ತಮ್ಮ ಆದ್ಯವನ್ನು ಕೈ ಬಿಡಲು ಕೇವಲ ೫ ನಿಮಿಷ ತೆಗೆದುಕೊಳ್ಳಬೇಕಾಯಿತು” – ಮಾರ್ಕ

ಈ ಸವಾಲು ಅಷ್ಟೇಅಲ್ಲ ಮುಂಬರುವ ದಿನಗಳಲ್ಲಿ ಅವರು ರಚಿಸಿದ ಫೇಸ್ ಬುಕ್ ಅನ್ನು “ಗೈನ್ಟ್ ಯಾಹೂ” 100ಕೋಟಿ ಡಾಲರ್ ಗೆ ಕೊಂಡುಕೊಳ್ಳಲು ಮುಂದಾಯಿತು. ಇಷ್ಟಾದರೂ ಮಾರ್ಕ ಅವರು ತಮ್ಮ ಐಡಿಯಾ ವನ್ನು ನಂಬಿದ್ದರು. ಏಕೇದರೆ ಅವರಿಗೆ ಗೊತ್ತಿತ್ತು ತಾವು ರಚಿಸಿದ ಫೇಸ್ಬುಕ್ ಇದಕ್ಕಿಂತ ಜಾಸ್ತಿ ಬೆಲೆ ಬರುತ್ತದೆ ಅಂತ.
ಹಾಗಾಗಿ ಅವರು ಸಂದರ್ಭದ ಬಗ್ಗೆ ಅರಿವಿದ್ದರಿಂದ ಫೇಸ್ ಬುಕ್ ಮಾರಲು ನಿರಾಕರಿಸಿದರು. ಮಾರ್ಕ ಅವರ ತಂಡದ ಬಹುಪಾಲು ಸದಸ್ಯರು ಅವರ ಈ ನಿರ್ಧಾರದಿಂದ ಅವರ ಐಡಿಯಾ ವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು.
ಒಂದು ವರ್ಷದ ಒಳಗೆ ಫೇಸ್ಬುಕ್ ನ ಸಂಪೂರ್ಣ ನಿರ್ವಹಣೆ ತಂಡ ಫೇಸ್ ಬುಕ್ ಕಂಪನಿಯನ್ನು ಬಿಟ್ಟು ಹೋದರು.
ಇಂತಹ ಸಂದರ್ಭದಲ್ಲಿ ಮಾರ್ಕ ಅವರು ತಕ್ಷಣ ಫೇಸ್ ಬುಕ್ ಐಡಿಯಾವನ್ನು ಬಿಡಬಹುದಿತ್ತು ಆದರೆ ಮಾರ್ಕ ಅವರು ತಮ್ಮ ಐಡಿಯಾ ವನ್ನು ಇನ್ನು ನಂಬುವುದನ್ನು ಬಿಡಲಿಲ್ಲ, ಹೊಸದಾದ ಟೀಮ್ ಅನ್ನು ನೇಮಕ ಮಾಡಿಕೊಂಡರು.

ಇದೀಗ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ವಿಶ್ವದಾದ್ಯಂತ 500 ಮಿಲಿಯನ್ ಬಳಕೆದಾರರ ಸೇರ್ಪಡೆಯೊಂದಿಗೆ ನೂತನ ದಾಖಲೆಯನ್ನು ಸ್ಥಾಪಿಸಲು ಮುಂದಾಗಿದೆ. ಪ್ರತಿ ತಿಂಗಳು 30 ಬಿಲಿಯನ್ ಛಾಯಾ ಚಿತ್ರಗಳು, ವೆಬ್ಸೈಟ್ಗಳಿಗೆ ಲಿಂಕ್ಗಳು ಮತ್ತು ಸುದ್ದಿ ವಿವರಗಳನ್ನು ಫೇಸ್ಬುಕ್ ಮೂಲಕ ಹಂಚಿಕೊಳ್ಳಲಾಗುತ್ತದೆ. ಫೇಸ್ಬುಕ್ ಸದಸ್ಯರು ತಿಂಗಳಿಗೆ ಕನಿಷ್ಠ 700 ಬಿಲಿಯನ್ ನಿಮಿಷಗಳನ್ನು ಚಾಟ್ ಮಾಡುವುದರಲ್ಲಿ ಕಳೆಯುತ್ತಾರೆ.

ಮಾರ್ಕ್ ಜುಕರ್ ಬರ್ಗ್ ಇದೀಗ ವಿಶ್ವದ ೫ ನೇ ಶ್ರೀಮಂತ ವ್ಯಕ್ತಿ.
ಅವರ ಕಥೆ ನಮಗೆ ಕಲಿಸುವುದೇನೆಂದರೆ?
ಜನರು ಹೇಳುವ ವಿಷವನ್ನು ನಂಬುವುದನ್ನು ಬಿಟ್ಟು ತಮ್ಮ ಮೇಲೆ ತಾವು ನಂಬಿಕೆ ವಿಶ್ವಾಸ ಇರಿಸಿಕೊಳ್ಳುವುದನ್ನು ಎಂದಿಗೂ ನಿಲ್ಲಿಸಬಾರದು ಅಂತ ಅರ್ಥವಾಗುತ್ತೆ.