ಮದುವೆ ಸಮಾರಂಭಕ್ಕೆ ೫೦೦ ಹಾಗು ನಿಶಿತಾರ್ಥಕ್ಕೆ ೧೦೦ ಜನ ಮೀರಿದರೆ ದಂಡ!!

0
995

ಏ.1ರಿಂದ ಜಮ್ಮುವಿನಲ್ಲಿ ಬರಲಿದೆ ಮಾದರಿ ಕಾನೂನು

ಮದುವೆಗೆ 500ಕ್ಕಿಂತ ಹೆಚ್ಚಿನ ಜರನ್ನು ಕರೆದರೆ ಜೋಕೆ

ನಮ್ಮ ದೇಶದಲ್ಲಿ ಮದುವೆಗೆ ಪ್ರಶ್ಯಸ್ತವನ್ನು ಕೊಡಲಾಗಿದೆ. ಮದುವೆಯ ಕರೆಯೋಲೆ ಹಿಡಿದು ಸಂಬಂಧಿಕರ ಮನೆಗೆ ಹೋಗಿ, ನಮ್ಮ ಮನೆಯಲ್ಲಿ ಮದುವೆ ಕಾರ್ಯವನ್ನು ಏರ್ಪಡಿಸಲಾಗಿದೆ ತವೆಲ್ಲಾ ಸಹ ಕುಟುಂಬ ಪರಿವಾರ ಸಮೇತ ಬಂದು ವಧು ವರರಿಗೆ ಆರ್ಶಿವದಿಸಬೇಕು ಎಂದು ಕೇಳಿ ಕೊಳ್ಳುವುದುವಾಡಿಕೆ.

ಇನ್ನು ಮುಂದೆ ಶ್ರೀನಗರದಲ್ಲಿ ಮದುವೆಯ ಮಮತೆಯ ಕರೆಯೋಲೆ ಕರೆಯುವ ಪದ್ಧತಿ ಬದಲಾಗಬಹುದು. ಕಾರಣ ಜಮ್ಮು ಕಾಶ್ಮೀರ್ ದಲ್ಲಿ ಹೊಸ ಕಾನೂನು ತರಲು ಚಿಂತನೆ ನಡೆಸಿದ. ಇದರ ಸಂಪೂರ್ಣ ಪರಿಣಾಮ ಮದುವೇಯ ಮೇಲೆ ಬೀಳಲಿದೆ.

Image result for indian huge marriage

ಈ ಮೂಲಕ ಜಮ್ಮು-ಕಾಶ್ಮೀರ್ ಮಾದರಿಯ ಕಾನೂನು ತರಲು ಮುಂದಾಗಿದ್ದು, ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿದೆ. ಮದುವೆ ಕಾರ್ಯಕ್ಕಮಕ್ಕೆ ಜನರ ಸಂಖ್ಯೆಗೆ ನಿರ್ಭಂಧ ಹೇರಲು ಮುಂದಾಗಿದೆ. ಪುತ್ರಿಯ ಮದುವೇ ಇದ್ದಲ್ಲಿ 500 ಹಾಗೂ ಪುತ್ರನ ಬದಿಯಲ್ಲಿ 400 ಜನರಿಗೆ ಮಾತ್ರ ಅವಕಾಶವನ್ನು ಕೋಡಲಾಗುವುದು. ಅಲ್ಲದೆ ಎಂಗೇಜ್‍ ಮೆಂಟ್‍ ಮುಂತಾದ ಸಣ್ಣ ಸಮಾರಂಭಕ್ಕೆ 100 ಜನ ಮೀರದಂತೆ ಸಂಬಂಧಿಕರನ್ನು ಆಹ್ವಾನಿಸಬೇಕಿದೆ. ಅಲ್ಲದೆ ಮದುವೆಯ ಕರೆಯೋಲೆ ಜೊತೆಗೆ ಸಿಹಿ ತಿಂಡಿ, ಡ್ರೈ ಫ್ರೂಟ್ಸ್‍ ಗಳನ್ನು ನೀಡದಂತೆ ಕಾನೂನು ತರಲಾಗಿದೆ. ಈ ಬದಲಾವಣೆಗಳು ಜಮ್ಮುವಿನಲ್ಲಿ ಏಪ್ರಿಲ್ 1ರಿಂದ ಜಾರಿಯಾಗಲಿವೆ.

Image result for indian huge marriage

ಅಲ್ಲದೆ ಮತ್ತೊಂದು ಕಾನೂನು ಜಾರಿಗೆ ತರಲು ಜಮ್ಮ ಸರ್ಕಾ ಮುಂದಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಧ್ವನಿ ವರ್ಧಕ ಹಾಗೂ ಪಟಾಕಿ ಸಿಡಿಸುವುದಕ್ಕೆ ಇನ್ನು ಮುಂದೆ ಸರ್ಕಾರ ಅನುಮತಿ ನೀಡದು ಎಂದು ತಿಳಿಸಿದೆ.

ದುಬಾರಿ ಮದುವೆಗೆ ಬ್ರೇಕ್ ಹಾಕಲು ರಾಜ್ಯಗಳು ಚಿಂತನೆ ನಡೆಸಿದ ಸಂದರ್ಭದಲ್ಲಿ, ಜಮ್ಮು ಸರ್ಕಾರ ಕೈಗೊಂಡ ತೀರ್ಮಾನ ದೇಶದ ಇತರೆ ರಾಜ್ಯಗಳಿಗೂ ಮಾದರಿ.