ಮದುವೆ ಮಾಡಲು ಸಿದ್ಧತೆ ನಡೆಸಿದ್ದೀರಾ…? ಹಾಗಾದರೆ ಈ ಪಟ್ಟಿಯನೊಮ್ಮೆ ಓದಿ…

0
1137

ಮದುವೆ ಮಾಡುವವರು 2.5 ಲಕ್ಷ ರೂ.ವರೆಗೆ ಹಣವನ್ನು ಖಾತೆಯಿಂದ ಪಡೆದುಕೊಳ್ಳಬಹುದೆಂದು ಹೇಳಿದ್ದ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಬಿಗ್ ಶಾಕ್ ನೀಡಿದೆ. 500ರೂ., 1000ರೂ, ನೋಟು ಚಲಾವಣೆ ನಿಷೇಧ ಹಿನ್ನೆಲೆಯಲ್ಲಿ ವಿವಾಹ ಸಮಾರಂಭಕ್ಕೆ ಮದುವೆ ಮಾಡುವವರು ಒಂದೇ ಬಾರಿಗೆ 2.5ರೂ. ಲಕ್ಷ ಡ್ರಾ ಮಾಡಬಹುದು ಎಂದು ಹೇಳಿದ್ದ RBI, 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ, ದೇಶದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಮನಗಂಡು ಕೆಲವರಿಗೆ ಈ ವಿನಾಯಿತಿ ನೀಡಲಾಗಿತ್ತು.

ವಧು-ವರರ, ತಂದೆ-ತಾಯಿ, ಸಹೋದರ-ಸಹೋದರಿ ಖಾತೆಯಿಂದ ಹಣ ಡ್ರಾ ಮಾಡಬಹುದು ಆದರೆ ನಿಮ್ಮ ಖಾತೆಯಲ್ಲಿ ನವೆಂಬರ್ 8 ರ ಒಳಗೆ ಖಾತೆಗೆ ಜಮಾ ಆಗಿದ್ದರೆ ಮಾತ್ರ ಎಂದು ಕಂಡೀಷನ್ ಹಾಕಿದೆ. ಹಳೆ ನೋಟನ್ನು ಖಾತೆಗೆ ಹಾಕಿ ಮದುವೆ ಮಾಡಲು ಮುಂದಾಗಿದ್ದವರು ಈಗ ಅಡಕತ್ತರಿಗೆ ಸಿಲುಕಿದ್ದಾರೆ. ಡಿಸೆಂಬರ್ 31 ರ ಒಳಗೆ ನಡೆಯುವ ಮದುವೆಗಳಿಗೆ ಮಾತ್ರ 2.5 ಲಕ್ಷ ರೂ. ಪಡೆದುಕೊಳ್ಳುವ ಅವಕಾಶ ಇದೆ.

ಇದರೊಂದಿಗೆ ಮದುವೆಗೆ ಹಣ ಪಡೆಯುವವರು ತಮ್ಮ ವಿಳಾಸ, ವಧು, ವರರ ಮಾಹಿತಿ, ಆಹ್ವಾನ ಪತ್ರಿಕೆ, ಕಲ್ಯಾಣ ಮಂದಿರ ಬುಕ್ ಮಾಡಿದ ರಶೀದಿ, ಕೆಟರಿಂಗ್ ಗೆ ನೀಡಿದ ಮುಂಗಡ ಮತ್ತು ನೀವು ಹಣ ಪಡೆದುಕೊಂಡು ಯಾರಿಗೆಲ್ಲಾ ಪೇಮೆಂಟ್ ಮಾಡುತ್ತೀರಿ ಎಂಬುದನ್ನೆಲ್ಲಾ ಸಂಪೂರ್ಣವಾಗಿ ದಾಖಲೆ ಸಮೇತ ತಿಳಿಸಬೇಕಿದೆ, ಹೀಗೆ ಅನೇಕ ಕಂಡೀಷನ್ ಹಾಕುವ ಮೂಲಕ ಆರ್.ಬಿ.ಐ. ಮದುವೆ ಮಾಡುವವರನ್ನು ಸಂಕಷ್ಟಕ್ಕೆ ದೂಡಿದೆ.

ಹಾಗೆಯೇ ರೈತರು, ಕೃಷಿಕರು 1 ವಾರದಲ್ಲಿ 25 ಸಾವಿರ ರೂಪಾಯಿವರೆಗೆ ಡ್ರಾ ಮಾಡಬಹುದು. ಬೆಳೆಸಾಲ ಖಾತೆಗೆ ಬಂದ ಹಣವನ್ನು ವಾರಕ್ಕೆ 25 ಸಾವಿರದವರೆಗೆ ಡ್ರಾ ಮಾಡಬಹುದು. ಹಣ ಪಡೆಯುವ ರೈತ ತನ್ನದೇ ಖಾತೆಗೆ, ಸಾಲದ ಹಣ ಬಂದದ್ದನ್ನ ಮಾತ್ರ ಪಡೆಯಬಹುದು ಎಂದು ತಿಳಿಸಿದೆ.

ಷರತ್ತುಗಳ ವಿವರ :

 • ನೋಟು ರದ್ದು ಆದೇಶ ಹೊರಬಿದ್ದ ದಿನವಾದ ನ.8ರಂದು ಅಥವಾ ಅದಕ್ಕೂ ಮುನ್ನವೇ ಖಾತೆಯಲ್ಲಿ 2.5 ಲಕ್ಷ ರೂ. ಬ್ಯಾಲೆನ್ಸ್ ಹೊಂದಿರಬೇಕು.
  ನ.8ರ ಬಳಿಕ ಜಮೆ ಮಾಡಲಾದ ಹಣ ತೆಗೆಯಲು ಅವಕಾಶವಿಲ್ಲ.
 • ಅರ್ಜಿಯಲ್ಲಿ ವರ ಮತ್ತು ವಧುವಿನ ಹೆಸರನ್ನು ನಮೂದಿಸಬೇಕು.
 • ಐಡಿ ಪ್ರೂಫ್, ವಿಳಾಸ ದಾಖಲೆ ಹಾಗೂ ಮದುವೆ ದಿನಾಂಕವನ್ನು ಒದಗಿಸಬೇಕು.
 • ಅರ್ಜಿ ಜತೆಗೆ ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕು.
 • ಇದರ ಭಾಗವಾಗಿ ವಿವಾಹ ಆಹ್ವಾನ ಪತ್ರಿಕೆ, ಕಲ್ಯಾಣ ಮಂಟಪ, ಕೆಟರಿಂಗ್ ಇತ್ಯಾದಿ ಸೇವೆಗಳಿಗೆ ಅಡ್ವಾನ್ಸ್ ಹಣ ಪಾವತಿಸಿರುವ ಬಗ್ಗೆ ರಸೀದಿ ಒದಗಿಸಬಹುದು.
 • ವಿತ್ಡ್ರಾ ಮಾಡಲಾದ ನಗದನ್ನು ಬ್ಯಾಂಕ್ ಖಾತೆ ಹೊಂದಿರದ ವ್ಯಕ್ತಿಗಳಿಗಷ್ಟೇ ಪಾವತಿಸಬೇಕು
 • ಹಣ ಪಡೆದ ವ್ಯಕ್ತಿಗಳ ಹೆಸರನ್ನು ಕ್ಯಾಶ್ ವಿತ್ ಡ್ರಾಗಾಗಿ ಸಲ್ಲಿಸುವ ಅರ್ಜಿಯಲ್ಲಿ ನಮೂದಿಸಬೇಕು.
 • ತಾವು ಹಣ ಪಾವತಿಸುತ್ತಿರುವ ವ್ಯಕ್ತಿಗಳಿಗೆ ಬ್ಯಾಂಕ್ ಖಾತೆ ಇಲ್ಲವೆಂಬುದನ್ನು ಅರ್ಜಿದಾರರು ಪ್ರಮಾಣೀಕರಿಸಿ ಸಹಿ ಹಾಕಬೇಕು.
 • ಬ್ಯಾಂಕ್ ಖಾತೆ ಹೊಂದಿರುವ ವ್ಯಕ್ತಿಗಳಿಗೆ ನಗದು ರೂಪದಲ್ಲಿ ಹಣ ಪಾವತಿಸಲು ಅವಕಾಶವಿಲ್ಲ.
 • ಅಂಥವರಿಗೆ ಚೆಕ್, ಆನ್ಲೈನ್ ಪೇಮೆಂಟ್ ಇಲ್ಲವೇ ಡೆಬಿಟ್ ಕಾರ್ಡ್ ಮೂಲಕ ಹಣ ಟ್ರಾನ್ಸ್ಫರ್ ಮಾಡಬಹುದು.
 • ಡಿ.30, 2016ರ ಒಳಗೆ ಮದುವೆ ನಡೆಯುವಂತಿದ್ದರೆ ಮಾತ್ರ ಹಣ ವಿತ್ಡ್ರಾ ಮಾಡಬಹುದು.
 • ವಧು, ವರ ಅಥವಾ ಅವರ ತಂದೆ-ತಾಯಿ ಪೈಕಿ ಯಾರಾದರೂ ಒಬ್ಬರಿಗೆ ಮಾತ್ರ ಹಣ ವಿತ್ಡ್ರಾ ಮಾಡಲು ಅವಕಾಶ.
 • ಚೆಕ್, ಡ್ರಾಫ್ಟ್, ಕ್ರೆಡಿಟ್/ಡೆಬಿಟ್ ಕಾರ್ಡ್, ಎನ್‌ಇಎಫ್ಟಿ/ಆರ್ಟಿಜಿಎಸ್ನಂತಹ ಕ್ಯಾಶ್ಲೆಸ್ ಮಾರ್ಗಗಳ ಮೂಲಕ ಹಣ ಪಾವತಿಸುವಂತೆ ಬ್ಯಾಂಕ್ಗಳು ಗ್ರಾಹಕರಿಗೆ ಉತ್ತೇಜಿಸಬೇಕು.
 • ಬ್ಯಾಂಕ್ಗಳು ಗ್ರಾಹಕರಿಂದ ಪಡೆದ ದಾಖಲೆಗಳನ್ನು ಸಂಗ್ರಹಿಸಿ, ಅಗತ್ಯಬಿದ್ದಾಗ ತೆರಿಗೆ ಅಧಿಕಾರಿಗಳಿಗೆ ಒದಗಿಸಬೇಕು.