ಲೈಂಗಿಕ ಕಿರುಕುಳದಿಂದ ಈಗ ಪುರುಷರೂ ಭಯಬೀಳಬೇಕಿದೆ ಸೆಕ್ಸ್ ನಿರಾಕರಿಸಿದ್ದಕ್ಕೆ ಇಬ್ಬರು ಪುರುಷರು ತಮ್ಮ ಮರ್ಮಾಂಗ ಕಳೆದುಕೊಂಡಿದ್ದಾರೆ!!

0
714

ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದ್ದು ನೀಜ. ಆದರೆ ಇಂತಹ ಮನಸ್ಥಿತಿಯುಳ್ಳ ಕಾಮಿಗಳು ಸಮಾಜದಲ್ಲಿ ವಿಕೃತ ಮನಸ್ಥಿತಿಯನ್ನು ಹೊದ್ದಿದ್ದಾರೆ ಎನ್ನುವುದಕ್ಕೆ ಈಗ ನಡೆಯುತ್ತಿರುವ ಘಟನೆಗಳೇ ಕಾರಣವಾಗಿವೆ. ಈ ಪದ್ದತಿಯನ್ನು ಕೆಲವರು ಅಸಹ್ಯವಾಗಿ ಕಂಡು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದರು. ಆದರೆ ಕೋರ್ಟ್ ಒಪ್ಪಿಗೆ ಸೂಚಿಸಿದೆ ತಡ, ಎಂದು ಕೆಳಲಾರದ ಘಟನೆಗಳು ನಡೆಯುತ್ತಿವೆ. ನಿನ್ನೆ ಇಂತಹದೆ ಘಟನೆಯೊಂದು ನಡೆದಿದ್ದು, ಸಲಿಂಗಕಾಮಿಯೊಬ್ಬ ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ಇಬ್ಬರು ಪುರುಷರ ಮರ್ಮಾಂಗವನ್ನು ಕತ್ತರಿಸಿರುವ ಘಟನೆ ನಡೆದಿದೆ.

Also read: ಟಿಕ್‍ಟಾಕ್ ಹುಚ್ಚಿಗೆ ಗೃಹಿಣಿ ಬಲಿ; ವಿಷ ಕುಡಿಯುವುದನ್ನೂ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ..

ಹೌದು ಚೆನ್ನೈನ ರೆಟ್ಟೇರಿಯ ಫ್ಲೈಓವರ್ ಅಡಿಯಲ್ಲಿ ನಡೆದುಕೊಂಡು ಹೋಗುವರ ಮೇಲೆ ಈ ಕೃತ್ಯ ನಡೆಸಿದ್ದು, ಆರೋಪಿಯನ್ನು ಮನಾಮಧುರೈನ ನಿವಾಸಿ ಮುನುಸ್ವಾಮಿ ಎಂದು ಗುರುತಿಸಲಾಗಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಇಬ್ಬರು ಪುರುಷರ ಜೊತೆ ಸೆಕ್ಸ್ ಮಾಡಲು ಯತ್ನಿಸಿದ್ದಾನೆ. ಇದಕ್ಕೆ ಇಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಇಬ್ಬರ ಮೇಲೆ ದಾಳಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Also read: ಈ ಸ್ಟೋರಿ ನೋಡಿದ ಬಳಿಕ ಕೃಷಿಕ ಯುವಕರನ್ನು ಮದುವೆಯಾಗಲು ಒಪ್ಪದ ಯುವತಿಯರು ಕ್ಯೂ ನಿಂತರೂ ಅಚ್ಚರಿ ಇಲ್ಲ..

ಆರೋಪಿ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದು, ಇವನಿಗೆ ಈಗಾಗಲೇ ಮದುವೆ ಕೂಡ ಆಗಿ, ಇಬ್ಬರ ಮಕ್ಕಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಜೂನ್ 11 ರಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು ರೆಟ್ಟೇರಿಯ ಫ್ಲೈಓವರ್ ನಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯೊಬ್ಬರು ಕಂಡು ಬಂದರು. ತಕ್ಷಣ ನಾವು ಆತನನ್ನು ಆಸ್ಪತ್ರೆಗೆ ದಾಖಲಿಸಿ ತನಿಖೆ ಶುರು ಮಾಡಿದೇವು. ಸ್ವಲ್ಪ ಸಮಯದ ನಂತರ ಇನ್ನೊಬ್ಬ ವ್ಯಕ್ತಿಯೂ ಗಾಯಗೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆದರೆ ಇಬ್ಬರಿಗೂ ಒಂದೇ ಗಾಯವಾಗಿತ್ತು. ಆಗ ನಾವು ಈ ಕೃತ್ಯವನ್ನು ಆರೋಪಿಯೊಬ್ಬನೆ ಎಸಗಿದ್ದಾನೆ ಎಂದು ತಿಳಿದು ಬಂದಿತ್ತು.

ಸದ್ಯಕ್ಕೆ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದು, ಆರೋಪಿ ಇಬ್ಬರ ಮೇಲೆ ದಾಳಿ ಮಾಡಲು ಮದ್ಯ ಬಾಟಲಿ ಮತ್ತು ಬ್ಲೇಡ್ ಅನ್ನು ಉಪಯೋಗಿಸಿದ್ದಾನೆ ಎಂದು ತನಿಖೆ ಸಂದರ್ಭದಲ್ಲಿ ತಿಳಿದು ಬಂದಿದೆ. ಆರೋಪಿ ರೆಟ್ಟೇರಿಯ ಫ್ಲೈಓವರ್ ನಲ್ಲಿ ಓಡಾಡುತ್ತಾ ಇಬ್ಬರನ್ನು ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಆಮಿಷವೊಡ್ಡಿದ್ದಾನೆ. ಆದರೆ ಇಬ್ಬರು ವ್ಯಕ್ತಿಗಳು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡು ಅವರ ಮರ್ಮಾಂಗವನ್ನು ಕಟ್ ಮಾಡಿದ್ದಾನೆ. ಆರೋಪಿ ಆಗಾಗ ರೆಟ್ಟೇರಿ ಫ್ಲೈಓವರ್ ಹೋಗುತ್ತಿದ್ದನು ಎಂದು ತಿಳಿದು ಬಂದಿದೆ.

Also read: ಈ ಊರಿನಲ್ಲಿ ಮದುಮಗ ಶೃಂಗಾರಗೊಂಡು ಮನೆಯಲ್ಲೇ ಇರಬೇಕು; ಏಕೆಂದರೆ ವಧುವಿಗೆ ತಾಳಿ ಕಟ್ಟಿ ಮದುವೆಯಾಗುವುದು ವರನ ಸಹೋದರಿ ಅಂತೆ..

ಇದೆ ತರಹದ ಘಟನೆ ಕಳೆದ ವರ್ಷ ನ್ಯೂಯಾರ್ಕ್‌ನ ಲಿವಿಂಗ್‌ಸ್ಟನ್‌ನಲ್ಲಿ ನಡೆದಿದ್ದು, ಸಲಿಂಗಕಾಮಿ ಸಂಗಾತಿ ಜತೆ ಸೇರಿ ತಾಯಿಯೋರ್ವಳು ತನ್ನ ಎರಡು ವರ್ಷದ ಮಗುವಿನ ಹೃದಯವನ್ನು ಛಿದ್ರ ಮಾಡಿ ಕೊಲೆ ಮಾಡಿದ್ದ ಹೃದಯ ವಿದ್ರಾವಕ ಘಟನೆ ನಡೆದಿತ್ತು, ಇಂತಹ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿದ್ದರೆ ಜನರು ಜನರನ್ನು ನೋಡಿ ಹೆದರುವ ಪರಿಸ್ಥಿತಿ ಬರುವುದರಲ್ಲಿ ಅನುಮಾನವಿಲ್ಲ.