ಯೋಧ ಗುರುವಿಗೆ ಸಹಾಯ ಧನವಾಗಿ ಬಂದ ಹಣವೇ ಕುಟುಂಬದ ಜಗಳಕ್ಕೆ ಕಾರಣವಾವಾಯಿತ್ತ? ಹಣಕ್ಕಾಗಿ ಕಚ್ಚಾಡುತ್ತಿದ್ದರೇ ಹುತಾತ್ಮ ಯೋಧನ ವರ್ಚಸ್ಸು ಏನಾಗುತ್ತೆ??

0
396

ಸಮಾಜದಲ್ಲಿ ವ್ಯಕ್ತಿಗಿಂತ ಹಣವು ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ ಎನ್ನುವುದಕ್ಕೆ ಹಲವು ಸಾಕ್ಷಿಗಳು ಕೇಳ ಬರುತ್ತಿವೆ. ಆದರೆ ಇಡಿ ದೇಶವೇ ಮೆಚ್ಚಿದ ಒಬ್ಬ ವ್ಯಕ್ತಿಯ ಗೌರವಕ್ಕಿಂತ ಹಣವೇ ಮುಖ್ಯವೆನ್ನುವ ಜನರಿಗೆ ಏನು ಹೇಳಬೇಕು? ಎಂದು ಮಂಡ್ಯದ ಜನರು ಆಡಿಕೊಳ್ಳುತ್ತಿದ್ದಾರೆ. ಇದೆಲ್ಲ ಯಾಕೆ ಅಂದ್ರೆ ಫೆಬ್ರುವರಿ 14 ರಂದು ನಡೆದ ಪುಲ್ವಾಮ ದಾಳಿಯಲ್ಲಿ ಕನ್ನಡಿಗ ವೀರ ಯೋಧ ಗುರು ಹುತಾತ್ಮರಾದ ಸುದ್ದಿ ಇಡಿ ದೇಶವನ್ನೇ ಶೋಕದಲ್ಲಿ ಮುಳುಗಿಸಿತ್ತು, ದೇಶಕ್ಕಾಗಿ ಪ್ರಾಣಬಿಟ್ಟ ಗುರುವಿಗೆ ಎಷ್ಟೇ ಹೊಗಳಿದರು ಕಡಿಮೇನೆ ಅನ್ನುವ ರೀತಿಯಲ್ಲಿ ಜನರು ನಮನ ಸಲ್ಲಿಸಿದರು ಬೆಂಗಳೂರಿನಿಂದ ಹಿಡಿದು ಮಂಡ್ಯದ ವರಗೆ ರಸ್ತೆ ತುಂಬೆಲ್ಲ ಹೊವಿನ ಹಾಸಿಗೆಯಲ್ಲೇ ಗುರುವಿನ ಮೃತದೇಹವನ್ನು ಸಾಗಿಸಲಾಗಿತ್ತು.

Also read: ಹುತಾತ್ಮ ಯೋಧ ಗುರು ಅವರ ಗರ್ಭಿಣಿ ಪತ್ನಿ ಕಲಾವತಿಯ ಹೊಟ್ಟೆಯಲ್ಲಿ ಗಂಡು ಮಗು ಹುಟ್ಟಿದರೆ ಸೈನ್ಯೆಕ್ಕೆ ಕಳುಹಿಸುತ್ತಾರೆ ಅಂತೆ ಈ ಮಾಹಾತಾಯಿ..

ಅದೇರೀತಿ ರಾಜ್ಯ ಸರ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಗುರುವಿನ ಅಂತ್ಯಸಂಸ್ಕಾರ ನಡೆಸಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಗುಡಿಗೆರೆಗೆ ಆಗಮಿಸಿ ಗುರು ಕುಟುಂಬಕ್ಕೆ ಸಾಂತ್ವನ ಹೇಳಿ, ಪರಿಹಾರವನ್ನು ದೊರಕಿಸಿದ್ದರು. ಇದಲ್ಲದೆ ಅನೇಕ ಕಂಪೆನಿ, ಸಂಘ-ಸಂಸ್ಥೆಗಳಿಂದ ನೆರವಿನ ಮಹಾಪೂರವೇ ಹರಿದುಬಂದಿತ್ತು. ಇದೆ ಹಣಕ್ಕಾಗಿ ವೀರಯೋಧ ಗುರು ಅವರ ಕುಟುಂಬದಲ್ಲಿ ಜಗಳ ಶುರುವಾಗಿದೆ. ಇದು ಗೋಡೆಗಳ ನಡುವೆ ಇದ್ದ ಜಗಳ ಇದೀಗ ಬೀದಿಗೆ ಬಂದಿದೆ.

ಏನಿದು ಜಗಳ?

ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಮತ್ತು ತಾಯಿ ಚಿಕ್ಕೋಳಮ್ಮ ಹಣಕ್ಕಾಗಿ ಜಗಳ ಮಾಡಿಕೊಂಡಿದ್ದಾರೆ, ಗುರು ಹೆಸರಿನಲ್ಲಿ ಬಂದಿರುವ ಪರಿಹಾರದ ಹಣದ ಚೆಕ್ ಕಲಾವತಿ ಅಕೌಂಟ್ ನಲ್ಲಿದೆ, ಗುರು ತಮ್ಮನನ್ನ ಮದುವೆಯಾಗಲು ಕಲಾವತಿ ನಿರಾಕರಿಸಿದ ಕಾರಣ ಹಣ ತೆಗೆದುಕೊಳ್ಳಲು ಗುರು ತಾಯಿ ಚಿಕ್ಕೋಳಮ್ಮ ಮುಂದಾಗಿದ್ದಾರೆ, ಹೀಗಾಗಿ ಕಲಾವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಚಿಕ್ಕೋಳಮ್ಮ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ತನಗೆ ಗುರುವಿನ ತಾಯಿ ಕಿರುಕುಳ ನೀಡುತ್ತಿದ್ದಾರೆ ಎಂದು ಕಲಾವತಿ ಆರೋಪಿಸಿದ್ದಾರೆ, ಇದೇ ವೇಳೆ ಸಚಿವ ಡಿ,ಸಿ ತಮ್ಮಣ್ಣ ಮತ್ತು ಅವರ ಬೆಂಬಲಿಗರು ಮಧ್ಯ ಪ್ರವೇಶಿಸಿ ಬುದ್ದಿವಾದ ಹೇಳಿದ್ದಾರೆ. ಆದಾಗ್ಯೂ ಅತ್ತೆ-ಸೊಸೆ ನಡುವಿನ ಜಗಳದ ಸುದ್ದಿ ಬಹಿರಂಗವಾಗಿತ್ತು. ಆದರೀಗ ಪುನಃ ಅತ್ತೆ-ಸೊಸೆ ಜಗಳ ನಡೆದು, ಕಲಾವತಿ ಅವರು ತವರು ಮನೆ ಸೇರಿದ್ದಾರೆ ಎಂದು ತಿಳಿದು ಬಂದಿದೆ.

Also read: ಇನ್ಮುಂದೆ ಯೋಧರು ತಮಗೆ ಇಷ್ಟ ಬಂದ ಫ್ಲೈಟ್​ನಲ್ಲಿ ಫ್ರೀಯಾಗಿ ಪ್ರಯಾಣಿಸಬಹುದು..

ಈ ಮಧ್ಯೆ ಮಂಗಳವಾರ ಚಿಕ್ಕರಸಿನಕೆರೆಯ ಶ್ರೀಕಾಲಭೈರವೇಶ್ವರ ಸ್ವಾಮಿ ಜಾತ್ರೆಗೆ ಬಂದಿದ್ದ ಕಲಾವತಿ, ತನ್ನ ಶೈಕ್ಷಣಿಕ ದಾಖಲೆಗಳು ಹಾಗೂ ಪುಸ್ತಕಗಳನ್ನು ಕೊಂಡೊಯ್ಯಲು ಪತಿಯ ಮನೆಗೆ ತೆರಳಿದ್ದಾರೆ. ಈ ವೇಳೆ ಕಲಾವತಿಯೊಂದಿಗೆ ಅತ್ತೆ ಚಿಕ್ಕತಾಯಮ್ಮ ಜಗಳವಾಡಿದ್ದಾರೆ. ನಗದು ರೂಪದಲ್ಲಿ 18 ಲಕ್ಷ ರೂ. ಮಾತ್ರವೇ ಬಂದಿದೆ ಎಂದು ಚಿಕ್ಕತಾಯಮ್ಮ ತಿಳಿಸಿದ್ದಾರೆ. ಆಗ ಕಲಾವತಿಯ ಕಡೆಯವರು ಹಾಲು ಮುಟ್ಟಿ ಪ್ರಮಾಣ ಮಾಡುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಗಳ ಇನ್ನಷ್ಟು ತಾರಕಕ್ಕೇರಿದೆ. ಕೊನೆಗೆ ಸಂಬಂಧಿಕರು ಹಾಗೂ ಅಕ್ಕಪಕ್ಕದವರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಕಡೆಗೆ 9 ಲಕ್ಷ ರೂ.ಗಳನ್ನು ತೆಗೆದುಕೊಂಡು ಹೋಗುವಂತೆ ಕಲಾವತಿ ಅವರಿಗೆ ನೀಡಿದ್ದಾರೆ. ಆದರೆ, ಆ ಹಣವನ್ನು ತಿರಸ್ಕರಿಸಿ ಕಲಾವತಿ ತವರು ಮನೆಗೆ ವಾಪಸಾಗಿದ್ದಾರೆ ಎನ್ನಲಾಗಿದೆ.

ಕೋಟಿ ಕೋಟಿ ಹಣವೇ ಜಗಳಕ್ಕೆ ಕಾರಣ:

Also read: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ CRPF ಯೋಧರ ಸಾಲ ಮನ್ನಾ ಮಾಡಿದ ಭಾರತೀಯ ಸ್ಟೇಟ್‌ ಬ್ಯಾಂಕ್‌..

ಯೋಧ ಗುರು ಪತ್ನಿ ಕಲಾವತಿ ಅವರ ಬ್ಯಾಂಕ್ ಖಾತೆ ವಿವರ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಹರಿದಾಡಿದ ನಂತರ ಜನರು ಸಹಜವಾಗಿ ಸ್ಪಂದಿಸಿದರು. ಇದರ ಮೊತ್ತವೇ ಸುಮಾರು 15 ಕೋಟಿ ರೂ. ಎನ್ನಲಾಗಿದೆ. ವಿದೇಶಿ ಉದ್ಯಮಿಯೊಬ್ಬರು 1 ಕೋಟಿ ಹಣ ರೂ., ರಾಜ್ಯ ಸರ್ಕಾರ 25 ಲಕ್ಷ ರೂ., ಅಂಬಾನಿ ಕಂಪನಿಯಿಂದ 25 ಲಕ್ಷ, ಇನ್ಫೊಸಿಸ್ ಫೌಂಡೇಷನ್‍ನಿಂದ 10 ಲಕ್ಷ, ನ್ಯಾಷನಲ್ ಟ್ರ್ಯಾವಲ್ಸ್‍ನ ಮಾಲಕ, ಸಚಿವ ಝಮೀರ್ ಅಹ್ಮದ್‍ ಖಾನ್ 10 ಲಕ್ಷ, ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ 10 ಲಕ್ಷ, ಕಾಂಗ್ರೆಸ್, ಜಾ.ದಳ, ಬಿಜೆಪಿ ನಾಯಕರು ಸೇರಿದಂತೆ ದಾನಿಗಳು ಸಾಕಷ್ಟು ಪರಿಹಾರ ನೀಡಿದ್ದಾರೆ. ಇದೆ ಹಣ ಕಣ್ಣಕೆಸರಾಗಿ ಜಗಳಕ್ಕೆ ನಾಂದಿಯಾಗಿದೆ.