ಅನಿಲ್ ಮತ್ತು ಉದಯ್ ದಾರುಣ ಅಂತ್ಯ ಕಂಡ “ಮಾಸ್ತಿಗುಡಿ” ಚಿತ್ರದ ಟ್ರೈಲರ್ ರಿಲೀಸ್!

0
910

ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಟ್ರೈಬರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಗಶೇಖರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಖಳನಟರಾಗಿ ಅಭಿನಯಿಸಿದ್ದ ಅನಿಲ್ ಮತ್ತು ಉದಯ್ ಅವರು ತಿಪ್ಪಗೊಂಡನಹಳ್ಳಿ ಡ್ಯಾಂನಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ವೇಳೆ ನದಿಯಲ್ಲಿ ಮುಳುಗಿ ದಾರುಣ ಅಂತ್ಯಕಂಡಿದ್ದರು.

mastigudi1

 

ದುನಿಯಾ ವಿಜಯ್ ಸ್ವತಃ ಈ ಚಿತ್ರಕ್ಕೆ ಕಥೆ ಬರೆದಿದ್ದು, ನಾಗಶೇಖರ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಸುಹಾಸಿನಿ, ದೇವರಾಜ್, ಶೋಭರಾಜ್ ಸೇರಿದಂತೆ ‘ಮಾಸ್ತಿ ಗುಡಿ’ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಗೋಲ್ಡನ್ ಕ್ವೀನ್ ಅಮೂಲ್ಯ ಮೊದಲ. ಎರಡನೇ ನಾಯಕಿಯಾಗಿ ಕೃತಿ ಖರಬಂಧ ಅಭಿನಯಿಸಿದ್ದಾರೆ. ಹಾಗೂ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ.

mastigudi

ಮಾಸ್ತಿಗುಡಿ ಚಿತ್ರದ ಟ್ರೆಲರ್ ವಿಭಿನ್ನವಾಗಿದ್ದು ಈ ಚಿತ್ತದಲ್ಲಿ ದುನಿಯಾ ವಿಜಯ್ ರವರು ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಗರಹೊಳೆ, ದಾಂಡೇಲಿ ಸೇರಿದಂತೆ ಬಹುತೇಕ ಕಾಡಿನಲ್ಲೇ ಚಿತ್ರೀಕರಣ ಮುಗಿಸಿರುವ ‘ಮಾಸ್ತಿ ಗುಡಿ’ ಮೇಕಿಂಗ್ ಅದ್ದೂರಿಯಾಗಿದೆ.

masti gudi

‘ಮಾಸ್ತಿಗುಡಿ’ ರಿಯಲ್ ಕಥೆ ‘ಮಾಸ್ತಿ ಗುಡಿ’ ನೈಜ ಘಟನೆ ಆಧಾರಿತ ಸಿನಿಮಾ. ಬಿಳಿಗಿರಿರಂಗನ ಬೆಟ್ಟದ ಕಾಡಿನಲ್ಲಿ ಹುಲಿಗಳು ನಿರಂತರವಾಗಿ ಸಾವನ್ನಪ್ಪುತ್ತಿದ್ದರ ಹಿಂದಿರಬಹುದಾದ ರಹಸ್ಯಗಳನ್ನೊಳಗೊಂಡಿರುವ ಸಿನಿಮಾ ಈ ‘ಮಾಸ್ತಿ ಗುಡಿ’ ಇದು ದಕ್ಷಿಣ ಭಾರತದಲ್ಲಿಯೇ ಮೊದಲ ‘ಜಾ ಟ್ರ್ಯಾಪ್ ಹುಲಿಬೇಟೆ’ ಪ್ರಕರಣವಾಗಿತ್ತು. ಈ ಪ್ರಕರಣವನ್ನೇ ಆಧರಿಸಿ ‘ಮಾಸ್ತಿಗುಡಿ’ ಚಿತ್ರ ಮೂಡಿಬರುತ್ತಿದೆ ಎನ್ನಲಾಗಿದೆ.