ಖಳನಟರಾದ ಅನಿಲ್, ಉದಯ್ ದುರಂತ ಸಾವಿನ ಪ್ರಕರಣದ ಆರೋಪಪಟ್ಟಿ ರದ್ದು; ಹೊಸ ವಿಚಾರಣೆಗೆ ಹೈಕೋರ್ಟ್ ಸೂಚನೆ

0
441

ಬೆಂಗಳೂರು: ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಖಳ ನಟರಾದ ಅನಿಲ್, ಉದಯ್ರ ದುರಂತ ಸಾವಿನ ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಆರೋಪಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಜೊತೆಗೆ ಹೊಸದಾಗಿ ವಿಚಾರಣೆ ನಡೆಸುವಂತೆ ಕೆಳ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.

ದುರಂತ ಸಾವಿನ ಪ್ರಕರಣದ ಸಂಬಂಧ ವಿಚಾರಣೆ ರದ್ದು ಕೋರಿ ನಿರ್ದೇಶಕ ನಾಗಶೇಖರ್, ನಿರ್ಮಾಪಕ ಸುಂದರ್ ಗೌಡ, ಸಾಹಸ ನಿರ್ದೇಶಕ ರವಿವರ್ಮ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಐಪಿಸಿ 304 ಅನ್ವಯ ಘಟನೆ ಉದ್ದೇಶಪೂರಕವಾಗಿ ಹತ್ಯೆ ಮಾಡಲಾಗಿದೆ. ಚಿತ್ರತಂಡದ ಮಾಡಲಬೇಜವಾಬ್ದಾಬೇಜವಾಬ್ದಾರಿ ತನದಿಂದ ಇಬ್ಬರು ನಟರು ಸಾವನ್ನಪ್ಪಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.

ಇನ್ನು ಚಿತ್ರತಂಡದ ವಿರುದ್ಧ ಐಪಿಸಿ 304 ಅಡಿ ಸಲ್ಲಿಸಿದ್ದ ಆರೋಪಪಟ್ಟಿ ರದ್ದುಗೊಳಿಸಲು ಕೋರ್ಟ್ ಸಮ್ಮತಿ ಸೂಚಿಸಿದೆ. ಆದರೆ, ಎಫ್ಐಆರ್ ರದ್ದುಗೊಳಿಸಲು ನಿರಾಕರಿಸಿದೆ. ಪ್ರಕರಣವನ್ನು‌ ಮತ್ತೆ ಹೊಸದಾಗಿ ವಿಚಾರಣೆ ನಡೆಸುವಂತೆ ರಾಮನಗರ ಜಿಲ್ಲಾ ಸೆಷನ್ಸ್ ಕೋರ್ಟ್‌ಗೆ ನಿರ್ದೇಶನ ನೀಡಿದೆ.