ಅನಿಲ್ , ಉದಯ್ ಸಾವಿಗೆ ಕಾರಣ ದುನಿಯಾ ವಿಜಯ್ !!!

0
2879

ಅಷ್ಟಕ್ಕೂ, ತಿಪ್ಪಗೊಂಡನಹಳ್ಳಿ ಕೆರೆಯ ಮಧ್ಯೆ ಚಿತ್ರೀಕರಣ ನಡೆಸಬೇಕು ಅಂತ ಐಡಿಯಾ ಕೊಟ್ಟಿದ್ದು ಯಾರು? ಡ್ಯೂಪ್ ಹಾಕದೇ ‘ಎಲ್ಲವನ್ನೂ ನ್ಯಾಚುರಲ್ ಆಗಿ ಶೂಟಿಂಗ್ ಮಾಡಬೇಕು’ ಎಂಬ ಒತ್ತಾಯ ಶುರು ಆಗಿದ್ದು ಯಾರಿಂದ? ಎಂಬ ಸ್ಫೋಟಕ ಮಾಹಿತಿ ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಇಡೀ ದುರಂತ ಪ್ರಕರಣದ ರೂವಾರಿ ಯಾರು.?

10-1478761348-duniya-vijay-in-trouble-3

‘ಮಾಸ್ತಿ ಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ನಡೆದ ದುರಂತ ಪ್ರಕರಣದ ರೂವಾರಿ ನಟ ದುನಿಯಾ ವಿಜಯ್ ಎಂಬ ಸಂಗತಿ ಪೊಲೀಸರ ತನಿಖೆ ವೇಳೆ ಬಯಾಲಾಗಿದೆ. ‘ಪಬ್ಲಿಕ್ ಟಿವಿ’ ಮಾಡಿರುವ ವರದಿ ಪ್ರಕಾರ, ‘ಮಾಸ್ತಿ ಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ಐಡಿಯಾ ಕೊಟ್ಟವರು ನಟ ದುನಿಯಾ ವಿಜಯ್.

ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ ನಿರ್ಮಾಪಕ ಸುಂದರ್ ಗೌಡ.!

ಇಡೀ ದುರ್ಘಟನೆಯ ರೂವಾರಿ ನಟ ದುನಿಯಾ ವಿಜಯ್… ಕ್ಲೈಮ್ಯಾಕ್ಸ್ ಸೀನ್ ಗೆ ಐಡಿಯಾ ಕೊಟ್ಟಿದ್ದೂ ಕೂಡ ದುನಿಯಾ ವಿಜಯ್… ಡ್ಯೂಪ್ ಬಳಸದೇ ಚಿತ್ರೀಕರಿಸುವಂತೆ ಹೇಳಿದ್ದೂ ಕೂಡ ದುನಿಯಾ ವಿಜಯ್… ಅಂತ ಪೊಲೀಸರ ಮುಂದೆ ನಿರ್ಮಾಪಕ ಸುಂದರ್ ಗೌಡ ಹೇಳಿಕೆ ನೀಡಿದ್ದಾರೆ ಅಂತ ‘ಪಬ್ಲಿಕ್ ಟಿವಿ’ ವರದಿ ಮಾಡಿದೆ.

‘ನಾನಿದ್ದೀನಿ’ ಎಂದಿದ್ದ ದುನಿಯಾ ವಿಜಯ್

10-1478761494-duniya-vijay-in-trouble-10

ನೀರಿನ ಬಗ್ಗೆ ಭಯಗೊಂಡಿದ್ದ ಉದಯ್, ‘ನನಗೆ ಈಜು ಬರೋಲ್ಲ’ ಅಂದರೂ ‘ನಾನಿದ್ದೀನಿ, ನಾನು ಇರುವ ತನಕ ಏನೂ ಆಗಲ್ಲ’ ಅಂತ ದುನಿಯಾ ವಿಜಯ್ ಹೇಳಿದ್ದರು” ಎಂದೂ ಕೂಡ ಪೊಲೀಸರ ಮುಂದೆ ಸುಂದರ್ ಗೌಡ ಹೇಳಿದ್ದಾರಂತೆ. ‘ಮಾಸ್ತಿ ಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಪಾಲ್ಗೊಳ್ಳುವ ಮುನ್ನ, ”ಸ್ವಿಮ್ಮಿಂಗ್ ಲೈಟ್ ಆಗಿ ಬರುತ್ತದೆ ಅಷ್ಟೆ. ಅಷ್ಟು ದೊಡ್ಡ ಸ್ವಿಮ್ಮರ್ ಅಲ್ಲ. ಭಯ ಇದೆ. ಮೂರು ಜನ ಇದ್ದೀವಿ. ಮುಖ ಮುಖ ನೋಡ್ಕೊಂಡು ಬೀಳ್ತೀವಿ. ಅದೊಂದೇ ಗೊತ್ತಿರೋದು. ಅದಾದ ಮೇಲೆ ದೇವರ ಪಾದ” ಅಂತ ಉದಯ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ದುನಿಯಾ ವಿಜಯ್ ಮಾತ್ರ ಲೈಫ್ ಜಾಕೆಟ್ ತೊಟ್ಟಿದ್ದರು.!

10-1478761469-duniya-vijay-in-trouble-9

ಈಜಿನಲ್ಲಿ ನೈಪುಣ್ಯತೆ ಹೊಂದಿಲ್ಲ ಎಂಬುದನ್ನು ಸ್ವತಃ ಅನಿಲ್ ಹಾಗೂ ಉದಯ್ ರವರೇ ಹೇಳಿಕೊಂಡಿದ್ದಾರೆ. ಇನ್ನೂ ”ನಾವು ನೀರಿಗೆ ಹಾರಿದ ತಕ್ಷಣ, ನಮ್ಮ ರಕ್ಷಣೆಗೆ ಸಿಬ್ಬಂದಿಗಳು ಸಿದ್ದವಾಗಿದ್ದಾರೆ. ಅವರು ಬೋಟಿನಲ್ಲಿ ಬರುತ್ತಾರೆ” ಎಂಬ ನಂಬಿಕೆ ಅವರಿಗೆ ಇತ್ತು. ಒಂದು ಪಕ್ಷ ಸಿಬ್ಬಂದಿ ಬಾರದೇ ಹೋದರೆ ಸಾವು ಖಚಿತ ಎಂಬ ಆತಂಕ ಅವರನ್ನು ಕಾಡಿತ್ತು ಎನ್ನುವುದಕ್ಕೆ ಅವರ ಮಾತುಗಳೇ ಸಾಕ್ಷಿ. ಡ್ಯೂಪ್ ಇಲ್ಲದೇ, ಲೈಫ್ ಜಾಕೆಟ್ ಬಳಸದೆ ಉದಯ್ ಮತ್ತು ಅನಿಲ್ ನೀರಿಗೆ ಹಾರಿದ್ರೆ, ಇತ್ತ ದುನಿಯಾ ವಿಜಯ್ ಮಾತ್ರ ಲೈಫ್ ಜಾಕೆಟ್ ಬಳಸಿ ತಿಪ್ಪಗೊಂಡನಹಳ್ಳಿ ಕೆರೆಗೆ ಹಾರಿದ್ದರು.

ದುನಿಯಾ ವಿಜಯ್ ವಿರುದ್ಧ ಎಫ್.ಐ.ಆರ್.?

ಪ್ಲಾನ್ ಏನೇ ಇದ್ದರೂ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ‘ಮಾಸ್ತಿ ಗುಡಿ’ ನಿರ್ದೇಶಕ ನಾಗಶೇಖರ್ ಮತ್ತು ರವಿವರ್ಮ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಮೆರೆದಿರುವುದು ಮಾತ್ರ ಸುಳ್ಳಲ್ಲ. ನಿರ್ಮಾಪಕ ಸುಂದರ್ ಗೌಡ ನೀಡಿರುವ ಹೇಳಿಕೆ ಆಧರಿಸಿ, ‘ಮಾಸ್ತಿ ಗುಡಿ’ ನಾಯಕ ನಟ ದುನಿಯಾ ವಿಜಯ್ ವಿರುದ್ಧ ಎಫ್.ಐ.ಆರ್ ಫೈಲ್ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ನ್ಯಾಯಾಂಗ ಬಂಧನದಲ್ಲಿದ್ದಾರೆ ನಿರ್ಮಾಪಕ ಸುಂದರ್.!

ಮಾಸ್ತಿ ಗುಡಿ’ ನಿರ್ಮಾಪಕ ಸುಂದರ್.ಪಿ.ಗೌಡ ಅವರನ್ನು ತಾವರೆಕೆರೆ ಪೊಲೀಸರು ಮಂಗಳವಾರ (ನವೆಂಬರ್ 8) ಸಂಜೆ ಬಂಧಿಸಿದ್ದರು. ರಾಮನಗರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ಮೇಲೆ, ಸುಂದರ್.ಪಿ.ಗೌಡ ರವರಿಗೆ 14 ದಿನಗಳ ನ್ಯಾಯಾಂಗ ಬಂಧನದ ಶಿಕ್ಷೆ ವಿಧಿಸಲಾಗಿದೆ. ‘ಮಾಸ್ತಿ ಗುಡಿ’ ಚಿತ್ರದ ನಿರ್ದೇಶಕ ನಾಗಶೇಖರ್ ಅವರನ್ನು ತಾವರೆಕೆರೆ ಪೊಲೀಸರು ಬುಧವಾರ (ನವೆಂಬರ್ 9) ಮಧ್ಯಾಹ್ನ ವಶಕ್ಕೆ ಪಡೆದುಕೊಂಡರು.

ರವಿವರ್ಮ ಇನ್ನೂ ಕೈಗೆ ಸಿಕ್ಕಲ್ಲ

ಅನಿಲ್ ಮತ್ತು ಉದಯ್ ದುರಂತ ಸಾವಿಗೀಡಾದ ಬಳಿಕ, ಕಳೆದ ಮೂರು ದಿನಗಳಿಂದ ಸಾಹಸ ನಿರ್ದೇಶಕ ರವಿವರ್ಮ ನಾಪತ್ತೆ ಆಗಿದ್ದಾರೆ. ಪೊಲೀಸರ ಕೈಗೆ ಅವರಿನ್ನೂ ಸಿಕ್ಕಿಲ್ಲ.