ಪ್ರತಿಯೊಬ್ಬ ಮಹಿಳೆಯರ ಹಕ್ಕು ವೇತನ ಸಹಿತ ಪ್ರಸೂತಿ ರಜೆ: ಪಡೆಯುವುದು ಹೇಗೆ??

0
2085

ಮಹಿಳೆಯರಿಗೆ ಪ್ರಸೂತಿ ಸಮಯದಲ್ಲಿ ಕಚೇರಿಗಳಲ್ಲಿ ರಜೆ ನೀಡುವುದು ಸಾಮಾನ್ಯ.ಮಗು ಜನಿಸುವ ಪೂರ್ವ ಹಾಗೂ ನಂತರದಲ್ಲಿ ರಜೆ ತೆಗೆದುಕೊಳ್ಳಬಹುದು.ಭಾರತದಲ್ಲಿ ಇದಕ್ಕಾಗಿ ಕಾನೂನು ಇದೆ. ಮೆಟನರಿ ಬೆನಿಫಿಟ್ ಆಕ್ಟ್ ೧೯೬೧. ಈಕಾಯ್ದೆಯ ಅನುಸಾರ ಮಗು ಜನಿಸು ಹಾಗೂ ಮಗು ಜನಿಸಿದ ಬಳಿಕ ಗರ್ಭಿಣಿಗೆರಜೆ ಪಡೆಯುವ ಹಕ್ಕು ಇರುತ್ತದೆ.

Related image

ಪ್ರಸೂತಿ ಕಾಯ್ದೆ ಇಲ್ಲೂ ಜಾರಿ

 • ಎಲ್ಲ ಕಾರ್ಖಾನೆಗಳಲ್ಲಿ
 • ಎಲ್ಲ ಅಂಗಡಿಗಳಲ್ಲಿ. ೧೦ಕ್ಕಿಂತ ಹೆಚ್ಚು ಕೆಲಸಗಾರರು ಹೊಂದಿರುವಕಚೇರಿಯಲ್ಲಿ ವನಿತೆಯರು ಇದರ ಲಾಭ ಪಡೆಯಬಹುದು.
 • ಗರ್ಭಿಣಿ ಮಹಿಳೆ ತನ್ನ ಅಧಿಕಾರಿಗೆ ತಿಳಿಸಿ ಒಂದು ತಿಂಗಳು ಸಾಮನ್ಯಕೆಲಸ ಮಾಡಲು ಅನುವು ಕೋರಬಹುದು. ಹೆರಿಗೆ ದಿನಾಂಕವನ್ನು ೧೦ವಾರಗಳ ಮುಂಚಿತವಾಗಿ ಮಹಿಳೆಯರು ತಿಳಿಸಬೇಕು. ಅಲ್ಲದೆ ವೈದ್ಯರಿಂದಗರ್ಭಿಣಿ ಎಂಬ ಪತ್ರವನ್ನು ಧೃಡಿಕರಿಸಿ ಸಂಸ್ಥೆಗೆ ನೀಡಬೇಕು.
 • ಗರ್ಭಿಣಿ ಮಹಿಳೆಯರು ಹೆರಿಗೆ ದಿನಾಂಕಕ್ಕೂ ೭ ವಾರಗಳ ಮುನ್ನ ಸಂಸ್ಥೆಗೆಹೆರಿಗೆ ರಜೆ ಕೋರಿ ಅರ್ಜಿಯನ್ನು ಸಲ್ಲಿಸಬೇಕು.
Image result for maternity leave india
Image Source: IndiaTimes

ಪ್ರಸೂತಿ ರಜೆಯ ಲಾಭಗಳು

 1. ಮಹಿಳೆಯರಿಗೆ ಈ ವೇಳ ೨೬ ವಾರಗಳ ರಜೆ ತೆಗೆದುಕೊಳ್ಳಬಹುದು.
 2. ವೇತನ ಸಹಿತ ರಜೆ.
 3. ಒಂದು ವೇಳೆ ಸಂಸ್ಥೆ ಮಹಿಳೆಯರಿಗೆ ಉಚಿತ ವೈದ್ಯಕೀಯ ವ್ಯವಸ್ಥೆಯನ್ನುಒದಗಿಸದೇ ಇದ್ದಲ್ಲಿ, ವೈದ್ಯಕೀಯ ಬೋನಸ್ ರೂಪದಲ್ಲಿ ನೀಡುವ ೧೦೦೦ಬದಲಿಗೆ ೨೦೦೦೦ ರೂ. ನೀಡಬೇಕು.
 4. ಗರ್ಭಿಣಿ ಮಹಿಳೆಯರು ಬಹಿರಂಗ ಪಡೆಸದ ಅನಾರೋಗ್ಯ ಸಮಸ್ಯೆ,ಸೂಚಿತ ದಿನಾಂಕಕ್ಕೂ ಮುನ್ನ ಮಗುವಿನ ಜನ ಹಾಗೂ ಇತರೆಸಮಸ್ಯೆಗಳಿದ್ದರೆ ಅಗತ್ಯ ದಾಖಲೆಗಳನ್ನು ಒದಗಿಸಿ, ೧ ತಿಂಗಳು ವೇತನ ಸಹಿತರಜೆ ಪಡೆಯಬಹುದು.
 5. ಹೆರಿಗೆ ದಿನಾಂಕ್ಕೆ ಹಿಂದಿನ ಒಂದು ವರ್ಷ ಗರ್ಭಿಣಿ ಒಟ್ಟು ೮೦ ದಿನಕಚೇರಿಯಲ್ಲಿ ಕೆಲಸವನ್ನು ಮಾಡಿದ್ದರೂ, ಕಾನೂನಾತ್ಮಕ ಸೌಲಭ್ಯಗಳನ್ನುಪಡೆಯಬಹುದು.
 6. ಹೆರಿಗೆಗೆ ಮುನ್ನ ೬ ವಾರಗಗಳಿಗಿಂತ ಹೆಚ್ಚಿನ ರಜೆ ಪಡೆಯುವಂತಿಲ್ಲ.
 7. ಗರ್ಭಪಾತವಾದರೆ, ವೈದ್ಯಕೀಯ ಗರ್ಭಪಾತಕ್ಕೆ ಒಳಗಾದಲ್ಲಿ ಅವರು ಆರುವಾರಗಳ ರಜೆಯನ್ನು ಪಡೆಯಲು ಅರ್ಹರಾಗುತ್ತಾರೆ.
 8. ಇನ್ನು ಆಪರೇಷನ್ ಇದ್ದಲ್ಲಿ ಎರಡು ವಾರಗಳ ರಜೆ ಪಡೆಯಬಹುದು.
 9. ಈ ಅವಧಿಯಲ್ಲಿ ಗರ್ಭಿಣಿ ಎರಡು ಬಾರಿ ತಪಾಸಣಾ ರಜೆತೆಗೆದುಕೊಳ್ಳಬಹುದು.
 10. ಹೆರಿಗೆ ಸಂದರ್ಭದಲ್ಲಿ ಮುಂಗಡ ಹಣದ ಅವಶ್ಯಕತೆ ಇದ್ದಲ್ಲಿ ಸಂಸ್ಥೆಗೆದಾಖಲೆ ಒದಗಿಸಿ ಪಡೆಯಬಹುದು, ಇದನ್ನು ನೀಡಲು ಸಂಸ್ಥೆಗೆ ೪೮ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ.
 11. ಗರ್ಭಿಣಿ ಸಾವು ಸಂಬಂಧಿಸಿದರೆ, ಆಕೆ ಮರಣ ಹೊಂದಿದದಿನಾಂಕದವರೆಗಿನ ಪ್ರಸೂತಿ ಸೌಲಭ್ಯ, ಆಕೆಗೆ ಹಕ್ಕುಳ್ಳ ಹಣವನ್ನು ಅವಳುಸೂಚಿಸಿದ ವ್ಯಕ್ತಿಗೆ ನೀಡಲು ಸಂಸ್ಥೆ ಅಥವಾ ನಿಯೋಜಕ ಬದ್ಧ.