ಗಣಿತ ಪರಿಣಿತರು ಉತ್ತಮ ಸಂಗೀತಗಾರರಾಗಲು ಸಾಧ್ಯವೇ??

0
859

ಡಾ. ಹೋವರ್ಡ್ ಗಾರ್ಡನರ್

ಪ್ರತಿಯೊಬ್ಬರೂ ಸಮವಾಗಿ ಬುದ್ಧಿವಂತಿಕೆಯನ್ನು ಹೊಂದಿದ್ದಾರೆ ಎನ್ನಲು ಆಗುವುದಿಲ್ಲ. ಆದರೆ ಗಣಿತದಲ್ಲಿ ಬುದ್ಧಿವಂತನಾದವನನ್ನು ಸಂಗೀತ ಕ್ಷೇತ್ರಕ್ಕೆ ಎಳೆದುತಂದರೆ ಏನಾಗುತ್ತದೆ? ಚೆನ್ನಾಗಿ ಸ್ವರಪ್ರಸ್ತಾರ ಮಾಡಬಲ್ಲ ದೊಡ್ಡ ಸಂಗೀತ ವಿದ್ವಾಂಸನನ್ನು ಕಂಪ್ಯೂಟರ್ ಲ್ಯಾಬಿಗೆ ಎಳೆದುಕೊಂಡು ಬಂದು `ಅಲ್ಗಾರಿದಂ’ ತಯಾರಿಸಲು ಹೇಳಲಾದೀತೆ?

ಒಂದಿಷ್ಟು ಸಹಜ ಬುದ್ಧಿವಂತಿಕೆ ಇದ್ದರೂ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಹೆಚ್ಚಿನ ಪ್ರಾವೀಣ್ಯ ಲಭಿಸುತ್ತದೆ. ಎಲ್ಲ ವಿಷಯಗಳಲ್ಲೂ ಪ್ರಾವೀಣ್ಯ ಗಳಿಸುವುದು `ಸೈದ್ಧಾಂತಿಕವಾಗಿ ಸಾಧ್ಯ’ ಎನಿಸಿದರೂ ವಾಸ್ತವ ಜೀವನದಲ್ಲಿ ಬಹಳ ಕಷ್ಟ, ಅಪರೂಪ.

ಡಾ. ಹೋವರ್ಡ್ ಗಾರ್ಡನರ್ ಎಂಬ ಖ್ಯಾತ ಗಣಿತಜ್ಞ `ಐಕ್ಯೂ ಪರಿಕಲ್ಪನೆ ಎಷ್ಟು ಸೀಮಿತವಾದುದು’ – ಎಂಬುದನ್ನು ತೋರಿಸಿಕೊಟ್ಟು, 1983ರಲ್ಲಿ `ಮಲ್ಟಿಪಲ್ ಇಂಟೆಲಿಜೆನ್ಸಸ್’ ಸಿದ್ಧಾಂತವನ್ನು ಪ್ರಚುರಪಡಿಸಿದ. `ಬುದ್ಧಿವಂತಿಕೆ’ ಎನ್ನುವುದು ಎಲ್ಲವನ್ನೂ ಮಾಡಲು-ತಿಳಿಯಲು ನೆರವಾಗುವ ಒಂದು ರೀತಿಯ ಏಕ-ಸಾಮಥ್ರ್ಯವಲ್ಲ; ಒಬ್ಬ `ಬುದ್ಧಿವಂತ’ ಎಲ್ಲದರಲ್ಲೂ ಬುದ್ಧಿವಂತನಾಗಿರುವುದಿಲ್ಲ – ಎಂಬುದನ್ನು ಅವರು ತಮ್ಮ `ಫ್ರೇಮ್ಸ್ ಆಫ್ ಮೈಂಡ್’ ಪುಸ್ತಕದಲ್ಲಿ ವಿಶ್ಲೇಷಿಸಿದ್ದಾರೆ.
ಮ್ಯೂಸಿಕಲ್-ರಿದ್ಮಿಕ್, ವರ್ಬಲ್-ಲಿಂಗ್ವಿಸ್ಟಿಕ್, ವಿಶುಯಲ್-ಸ್ಪೇಷಿಯಲ್, ಲಾಜಿಕಲ್-ಮ್ಯಾಥೆಮ್ಯಾಟಿಕಲ್,

ಬಾಡಿಲಿ-ಕೈನೆಸ್ಥಿಟಿಕ್, ಇಂಟರ್‍ಪರ್ಸನಲ್, ಇಂಟ್ರಾಪರ್ಸನಲ್, ನ್ಯಾಚುರಲಿಸ್ಟಿಕ್ – ಹೀಗೆ 8 ಬಗೆಯ ವಿಭಿನ್ನ ಸಾಮಥ್ರ್ಯಗಳನ್ನು ಅವರು ಗುರುತಿಸುತ್ತಾರೆÉ. ಇವೆಲ್ಲ ಒಬ್ಬೊಬ್ಬರಲ್ಲೂ ಬೇರೆ ಬೇರೆ ತರಹ ಇರುತ್ತವೆ.

ಶ್ರೀನಿವಾಸ ರಾಮಾನುಜನ್ ಜೀನಿಯಸ್ ಗಣಿತಜ್ಞನಾದರೂ ಸಂಗೀತದಲ್ಲಿ ಬಾಲಮುರಳಿಕೃಷ್ಣನಂತೆ ಆಗುವುದು ಸಾಧ್ಯವಿರಲಿಲ್ಲ. ಬಾಲಮುರಳಿಕೃಷ್ಣರು ಸ್ಟೀಫನ್ ಹಾಕಿಂಗ್ ಆಗುವುದು ಸಾಧ್ಯವಿಲ್ಲ. ನೀವು ಎಂತಹ ಹೈ-ಐಕ್ಯೂ ಉಳ್ಳ ವ್ಯಕ್ತಿಯೇ ಅಗಿದ್ದರೂ ನಿಮಗೆ ಎಲ್ಲ ವಿಷಯಗಳಲ್ಲೂ ಜ್ಞಾನ-ನೈಪುಣ್ಯಗಳು ಲಭಿಸುವುದು ಸಾಧ್ಯವಿಲ್ಲ (ಒಂದಕ್ಕಿಂತ ಹೆಚ್ಚು ವಿಷಯಗಳಲ್ಲಿ ಪರಿಣತಿ ಸಾಧಿಸುವುದು ಸಾಧ್ಯವಿದ್ದರೂ ನಿಮಗೆ ಕಷ್ಟವೆನಿಸುವ ವಿಷಯಗಳೂ ಇರುತ್ತವೆ). ಸಂತಸದ ಸುದ್ದಿ ಏನೆಂದರೆ, ಪ್ರಕೃತಿ ಪ್ರತಿಯೊಬ್ಬರಿಗೂ ಯಾವುದಾದರೊಂದು ವಿಷಯದಲ್ಲಿ ಹೈ-ಐಕ್ಯೂ ಕೊಟ್ಟಿರುತ್ತದೆ. ಅದ್ಯಾವುದು ಎಂಬುದನ್ನು ಗುರುತಿಸಿಕೊಂಡು ಅದರಲ್ಲೇ ಮುಂದುವರಿದರೆ ಸಾಧನೆ ಸುಲಭ!