ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿ.ಎಂ. ಪಟ್ಟ ಎಂ.ಬಿ.ಪಾಟೀಲ್-ರವರಿಗೆ ಹೋಗುತ್ತಾ??

0
629

ಸಿ.ಎಂ ಹುದ್ದೆಯಂದ ಮೇಲೆ ಯಾರಿಗೆ ತಾನೇ ಇಷ್ಟ ಇರೋದಿಲ್ಲ ಹೇಳಿ. ಸಿ.ಎಂ ಸ್ಥಾನವೇ ಅಂತಹದ್ದು ಬೆನ್ನಿಗೆ ನಿಂತ ಹಿಂಬಾಲಕರು ಶತ್ರುಗಳಾಗಿ ಬಿಡ್ತಾರೆ. ಹೌದು ಏಕೆಂದ್ರೆ ಅಧಿಕಾರ ನೂರಾರು ಆಳು ಕಾಳು ಮರ್ಯಾದೆ ಯಾರಿಗೆ ತಾನೇ ಅನುಭವಿಸಲು ಬೇಡ ಅನಿಸುತ್ತದೆ ಹೇಳಿ. ಈ ಸಾಲಿಗೆ ಈಗ ಇನ್ನೋರ್ವ ಸಚಿವರ ಹೆಸರು ಸೇರ್ಪಡೆಯಾಗಿದೆ.
ಹೌದು ಸದ್ಯ ಸರ್ಕಾರದಲ್ಲಿ ನೀರಾವರಿ ಖಾತೆಯ ಹೊಣೆಯನ್ನು ಹೊತ್ತುಕೊಂಡಿರುವ ಎಂ.ಬಿ ಪಾಟೀಲ್ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಪಾಟೀಲರು, ಯಾರು ಬೇಕಾದ್ರು ಮುಖ್ಯ ಮಂತ್ರಿ ಯಾಗಬಹುದು. ಈಗ ಸಿದ್ದರಾಮಯ್ಯ ಸಿಎಂ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅಲ್ಲದೆ ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದಾರೆ. ಮುಂದಿನ ಬಾರಿ ನಾನು ಮುಖ್ಯಮಂತ್ರಿಯಾಗ್ತೀನಿ ಎಂದು ಹೇಳಿದ್ರು.


ಇದೇ ಸಂದರ್ಭದಲ್ಲಿ ಪಾಟೀಲರು, ಹಿಂದಿನ ಸರ್ಕಾರದಷ್ಟು ಮಾಡದಷ್ಟು ಮಾಡದ ಅಭಿವೃದ್ಧಿ ಕಾರ್ಯವನ್ನು ನಮ್ಮ ಸರ್ಕಾರ ಮಾಡಿದೆ. ಅಲ್ಲದೆ ಬರ ಪೀಡಿತ ಪ್ರದೇಶಗಳಿಗೆ ನೀರು ಒದಗಿಸುವ ಉದ್ದೇಶ ಹಾಕಿಕೊಂಡಿದ್ದೇವು ಅದು ಸಫಲವಾಗಿದೆ ಎಂದು ತಾವು ಮಾಡಿದ ಅಭಿವೃದ್ಧಿ ಕಾರ್ಯವನ್ನು ಜನಗಳ ಮುಂದೆ ತೆರೆದಿಟ್ಟರು.
ಬಿಜೆಪಿ ಪಕ್ಷ ವಿಜಯಾಪುರದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ರಣ ತಂತ್ರವನ್ನೂ ರೂಪಿಸಿಕೊಳ್ತಿದೆ. ಆದ್ರೆ ಅವ್ಯಾವು ನಮ್ಮ ಅಭಿವೃದ್ಧಿಗೆ ಸಮವಗುವುದಿಲ್ಲ ಎಂದು ತಿಳಿಸಿದ್ರು.