ಕಷ್ಟದಲ್ಲಿರುವ ಮನೆ ಕೆಲಸದವಳಿಗೆ ಸಹಾಯ ಮಾಡಲು ರಸ್ತೆಬದಿ ಉಪಾಹಾರ ಮಾರುತ್ತಿದ್ದಾರೆ ಉನ್ನತ ಹುದ್ದೆಯಲ್ಲಿರುವ ದಂಪತಿಗಳು.!

0
115

ಕೆಲವರಿಗೆ ಕಷ್ಟದಲ್ಲಿವರನ್ನು ನೋಡಿದರೆ ಅವರಿಗಾಗಿ ಏನಾದರು ಸಹಾಯ ಮಾಡಲೇಬೇಕು ಎನ್ನುವ ಮನೋಭಾವನೆ ಹುಟ್ಟುತ್ತೆ ಇನ್ನೂ ಕೆಲವರ ರೀತಿ ಹೇಗಿರುತ್ತೆ ಎಂದರೆ. ಕಷ್ಟದಲ್ಲಿರುವವರು ಆತ್ಮಿಯರೇ ಆದರು ಕಣ್ಣಿಗೆ ಕಾಣದಂತೆ, ಕಿವಿಗೆ ಕೇಳದಂತೆ ದೂರದಲ್ಲೇ ಇರುವ ಜನರು ಹೆಚ್ಚಿದ್ದಾರೆ. ಅದರಲ್ಲಿ ಹಣವಿರುವ ಜನರಿಗೆ, ಒಳ್ಳೆಯ ಉದ್ಯೋಗದಲ್ಲಿರುವ ಜನರಿಗೆ ತಮ್ಮಲ್ಲಿ ಕೆಲಸ ಮಾಡುವರ ಬಗ್ಗೆ ಸ್ವಲ್ಪ ಕಾಳಜಿ ಕಡಿಮೆಯಾಗಿರುತ್ತೆ, ಏಕೆಂದರೆ ನಿತ್ಯವೂ ಅವರ ಗೋಳು ಕೇಳಿ ಅದು ಇರುವುದೇ ಏನು ಮಾಡಲು ಸಾಧ್ಯವಿಲ್ಲ ಎನ್ನುವ ವಿಚಾರ ಬಂದಿರುತ್ತೆ, ಆದರೆ ಇಲ್ಲೊಂದು ಕುಟುಂಬಕ್ಕೆ ಅಂತಹ ವಿಚಾರಕ್ಕಿಂತ ಸಹಾಯ ಮಾಡಲು ಹೊಸ ಉಪಾಯ ಮಾಡಿಕೊಂಡಿದ್ದು.

Also read: ಪರಿಸರ ಕಾಳಜಿಯಿಂದ 10 ಕಿ.ಮೀ ನಡೆದು ಹೋಗಿ ತರಕಾರಿ ತರುವ ಈ ಐಎಎಸ್ ಅಧಿಕಾರಿ ಪ್ರತಿಯೊಬ್ಬರಿಗೂ ಮಾದರಿ.!

ತಮ್ಮ ಮನೆಯಲ್ಲಿ ಕೆಲಸ ಮಾಡುವ ಬಡ ಮಹಿಳೆಯ ಕಷ್ಟವನ್ನು ನೋಡಿ ಎಂಬಿಎ ಪದವಿ ಪಡೆದ ದಂಪತಿ ಪ್ರತಿದಿನ ಬೆಳಗ್ಗೆ ಮಹಾರಾಷ್ಟ್ರದ ಕಂಡಿವಲಿ ರೈಲ್ವೆ ನಿಲ್ದಾಣದ ಬಳಿ ಉಪಾಹಾರ ಮಾರುತ್ತಿದ್ದಾರೆ. ಇಂತಹ ಸಹಾಯ ಮಾಡುತ್ತಿರುವ ಅಶ್ವಿನಿ ಶೆಣೈ ಶಾ ಮತ್ತು ಅವರ ಪತಿ ಪ್ರತಿದಿನ ಬೆಳಗ್ಗೆ 4 ಗಂಟೆಯಿಂದ 10 ಗಂಟೆವರೆಗೂ ತಿಂಡಿ ಮಾರುತ್ತಾರೆ. ಅದಾದ ಬಳಿಕ ಇಬ್ಬರು ತಮ್ಮ-ತಮ್ಮ ಕೆಲಸಕ್ಕೆ ತೆರಳುತ್ತಾರೆ. ದಂಪತಿ ರೈಲ್ವೆ ನಿಲ್ದಾಣದ ಹೊರಗೆ ರಸ್ತೆಬದಿ ತಿಂಡಿ ಮಾರುತ್ತಿರುವ ಕಾರಣ ಕೇಳಿದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಷಯವನ್ನು ದೀಪಾಲಿ ಭಾಟೀಯಾ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಅಶ್ವಿನಿ ಶೆಣೈ ಹಾಗೂ ಅವರ ಪತಿಯ ಕತೆಯನ್ನು ವೈರಲ್ ಮಾಡಿದ್ದು. ಈ ಕುರಿತು ವಿಚಾರವನ್ನು ಹಂಚಿಕೊಂಡಿದ್ದು ಹೀಗಿದೆ. ಗಾಂಧಿ ಜಯಂತಿ ದಿನದಂದು ಬೆಳಗ್ಗೆ ನಾನು ತಿಂಡಿಗಾಗಿ ಹುಡುಕಾಡುತ್ತಿದ್ದೆ. ಈ ವೇಳೆ ಇಬ್ಬರು ಅವಲಕ್ಕಿ, ಉಪ್ಪಿಟ್ಟು, ಪರೋಟ ಹಾಗೂ ಇಡ್ಲಿ ಮಾರುತ್ತಿರುವುದನ್ನು ನೋಡಿದೆ. ಆಗ ಅವರಿಗೆ ರಸ್ತೆಬದಿಯಲ್ಲಿ ಏಕೆ ಉಪಾಹಾರ ಮಾರುತ್ತಿದ್ದೀರಾ ಎಂದು ಪ್ರಶ್ನಿಸಿದೆ. ಆಗ ಅವರ ಉತ್ತರ ಕೇಳಿ ನನಗೆ ತುಂಬಾ ಖುಷಿ ಆಯಿತು. ಅಶ್ವಿನಿ ಹಾಗೂ ಅವರ ಪತಿ ಕೆಲಸಕ್ಕೆ ಹೋಗುವ ಮೊದಲು ಬೆಳಗ್ಗೆ ಬೇಗ ಎದ್ದು ತಮ್ಮ ಮನೆ ಕೆಲಸದವಳು ಮಾಡಿದ ಅಡುಗೆಯನ್ನು ರಸ್ತೆ ಬದಿಯಲ್ಲಿ ಮಾರುತ್ತಾರೆ.

ಇದಕ್ಕೆ ಮನಕಲಕುವ ವಿಷಯ ಎಂದರೆ 55 ವರ್ಷದ ಮನೆ ಕೆಲಸದವಳ ಪತಿ ಪಾರ್ಶ್ವವಾಯುಗೆ ಒಳಗಾಗಿದ್ದಾರೆ. ಈ ವಯಸ್ಸಿನಲ್ಲಿ ಅವರು ಹಣಕ್ಕಾಗಿ ಪರದಾಡುವುದು ಬೇಡ ಎಂದು ಆಕೆ ತಯಾರಿಸಿದ ಅಡುಗೆಯನ್ನು ರಸ್ತೆಬದಿಯಲ್ಲಿ ದಂಪತಿ ಮಾರುತ್ತಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ದೀಪಾಲಿ ಅವರು ಇದನ್ನು ಪೋಸ್ಟ್ ಮಾಡುತ್ತಿದ್ದಂತೆ ಇದು ವೈರಲ್ ಆಗಿದೆ. ಅಲ್ಲದೆ ಈವರೆಗೂ ಈ ಪೋಸ್ಟ್ ಗೆ 13 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 4 ಸಾವಿರಕ್ಕೂ ಹೆಚ್ಚು ಶೇರ್ ಆಗಿದೆ. ಮತ್ತೆ ಕೆಲವರು ದಂಪತಿಯ ಕಾರ್ಯಕ್ಕೆ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇಂತಹ ವಿಚಾರದಲ್ಲಿ ಬೇರೆ ಯಾರೇ ಇದ್ದರು ಕೆಲಸದವಳ ಕಷ್ಟಕ್ಕೆ ನೆರವಾಗಲಿ ಎಂದು ಸ್ವಲ್ಪ ಹಣದ ಸಹಾಯ ಮಾಡುತ್ತಿದ್ದರು. ಸ್ನೇಹಿತರಲ್ಲಿ ಸಹಾಯ ಕೋರಿ ಆದಷ್ಟು ಹಣ ಕೊಡಿಸುವ ಪ್ರಯತ್ನ ಮಾಡುತ್ತಿದ್ದರು ಆದರೆ ಅದೆಲ್ಲವೂ ಒಂದೆರಡು ದಿನಕ್ಕೆ ಮಾತ್ರವಾಗುತ್ತೆ, ಆದರೆ ಇವರ ಸಂಪೂರ್ಣ ಕಷ್ಟಕ್ಕೆ ನೆರವಾಗಲು ಸ್ವಾಭಿಮಾನಿಯಾಗಿ ನೆರವು ನೀಡಲು ಪ್ರತಿನಿತ್ಯವೂ ರಸ್ತೆ ಬದಿಯಲ್ಲಿ ನಿಂತು ತಿಂಡಿ ಮಾರಿ ಸಹಾಯ ಮಾಡುತ್ತಿರುವುದು ಮೆಚ್ಚುವಂತ ಕೆಲಸವಾಗಿದೆ.