ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಹಲವಾರು ಹುದ್ದೆಗಳಿಗೆ ನೇಮಕಾತಿ.!

0
295

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು 88 ರಾಸಾಯನಿಕ ತಜ್ಞರು (ಕೆಮಿಸ್ಟ್), ಜಿಲ್ಲಾ ಪ್ರಯೋಗಾಲಯ ಸಹಾಯಕರು ಹಾಗೂ ಡೇಟಾ ಎಂಟ್ರಿ ಆಪರೇಟರ್ ಮತ್ತು ಜಿಲ್ಲಾ ಪ್ರಯೋಗಾಲಯ ಪರಿಚಾರಕರು ಹಾಗೂ ನೀರಿನ ಮಾದರಿ ಸಂಗ್ರಹಗಾರರು ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 16,2019ರೊಳಗೆ ಅರ್ಜಿ ಸಲ್ಲಿಸಬೇಕು.

Also read: 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿನ ಹಲವು ಹುದ್ದೆಗಳಿಗೆ ನೇಮಕಾತಿ.!

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿಗಳು.

ವಿದ್ಯಾರ್ಹತೆ: ರಾಸಾಯನಿಕ ತಜ್ಞರು (ಜಿಲ್ಲಾ ಪ್ರಯೋಗಾಲಯಗಳಲ್ಲಿ) ಹುದ್ದೆಗಳಿಗೆ ಬಿಎಸ್ಸಿಯಲ್ಲಿ ರಸಾಯನಶಾಸ್ತ್ರ ಕಡ್ಡಾಯವಾಗಿ ಅಥವಾ ಎಂಎಸ್ಸಿಯಲ್ಲಿ ರಸಾಯನಶಾಸ್ತ್ರ/ಬಯೋಕೆಮಿಸ್ಟ್ರಿ/ ಮೈಕ್ರೋಬಯೋಲಜಿ/ ಎನ್ವಿರಾನ್‌ಮೆಂಟಲ್ ಸೈನ್ಸ್ ಅಥವಾ ಬಯೋಟೆಕ್ನಾಲಜಿ ವಿಷಯದಲ್ಲಿ ಶೇ.60 ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ತೇರ್ಗಡೆ ಹೊಂದಿರಬೇಕು.

ಜಿಲ್ಲಾ ಪ್ರಯೋಗಾಲಯ ಸಹಾಯಕರು: ಹಾಗೂ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಬಿಎಸ್ಸಿ ಯಲ್ಲಿ ರಸಾಯನಶಾಸ್ತ್ರ ಅಥವಾ ಡಿಪ್ಲೊಮ ಇನ್‌ ಲ್ಯಾಬ್ ಟೆಕ್ನಿಷಿಯನ್ ವಿದ್ಯಾರ್ಹತೆಯನ್ನು ಶೇ.60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಜಿಲ್ಲಾ ಪ್ರಯೋಗಾಲಯ ಪರಿಚಾರಕರು: ಹಾಗೂ ನೀರಿನ ಮಾದರಿ ಸಂಗ್ರಹಗಾರರು ಹುದ್ದೆಗಳಿಗೆ ಪಿಯುಸಿಯಲ್ಲಿ PCM ವಿಷಯಗಳಲ್ಲಿ ಅಧ್ಯಯನ ಮಾಡಿರಬೇಕು ಜೊತೆಗೆ ಶೇ.60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ವಯೋಮಿತಿ: ರಾಸಾಯನಿಕ ತಜ್ಞರು: ಮತ್ತು ಜಿಲ್ಲಾ ಪ್ರಯೋಗಾಲಯ ಸಹಾಯಕರು ಹಾಗೂ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಗರಿಷ್ಟ 45 ವರ್ಷ ಮತ್ತು ಜಿಲ್ಲಾ
ಪ್ರಯೋಗಾಲಯ ಪರಿಚಾರಕರು ಹಾಗೂ ನೀರಿನ ಮಾದರಿ ಸಂಗ್ರಹಗಾರರು ಹುದ್ದೆಗಳಿಗೆ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರು.

ನೇಮಕಾತಿ ವಿಧಾನ: ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಅನುಭವದ ಆಧಾರ ಮೇಲೆ ಆಯ್ಕೆ ಪಟ್ಟಿ ರಚಿಸಿ, ಅವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದ ಬಗಗೆ
ಅಭ್ಯರ್ಥಿಗಳಿಗೆ ಇ-ಮೇಲ್ ಮತ್ತು ದೂರವಾಣಿ ಮೂಲಕ ತಿಳಿಸಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ, ಗುರುತಿನ ಚೀಟಿ ಮತ್ತು ಇತರೆ ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಅರ್ಜಿಯನ್ನು ರಿಜಿಸ್ಟರ್ಡ್‌ ಪೋಸ್ಟ್/ಸ್ಪೀಡ್ ಪೋಸ್ಟ್/ ಕೋರಿಯರ್ ಮೂಲಕ ಕಚೇರಿಯ ವಿಳಾಸಕ್ಕೆ ಅಕ್ಟೋಬರ್ 16,2019 ರೊಳಗೆ ತಲುಪುವಂತೆ ಕಳುಹಿಸಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ: http://rdpr.kar.nic.in/index.asp ಕ್ಲಿಕ್ ಮಾಡಿ.