ಅಂದು ಮೆಕಾನಿಕ್, ಇಂದು ಭುರ್ಜ್ ಕಾಲಿಫಾದ 22 ಅಪಾರ್ಟ್ ಮೆಂಟ್ ಗಳ ಒಡೆಯ

0
1446

ಮೆಕಾನಿಕ್ ಆಗಿದ್ದ ಈ ವ್ಯಕ್ತಿ ಉದ್ಯಮಕ್ಕೆ ಕಾಲಿಟ್ಟ. ಕೆಲವೇ ವರ್ಷದಲ್ಲಿ ಕೋಟ್ಯಧಿಪತಿ ಆದ. ಅದೆಷ್ಟು ಶ್ರೀಮಂತ ಆದ ಅಂದರೆ ದುಬೈನ ವಿಶ್ವವಿಖ್ಯಾತ ಭುರ್ಜ್ ಕಾಲಿಫಾದಲ್ಲಿ 22 ಅಪಾರ್ಟ್ ಮೆಂಟ್ ಒಡೆಯನಾಗಿದ್ದಾನೆ.

ಈ ವ್ಯಕ್ತಿ ಭಾರತೀಯ ಮೂಲದ ಅದರಲ್ಲೂ ಕೇರಳದ ಜಾರ್ಜ್ ವಿ. ನೆರಪರಂಲ್ಲಿ ಎಂಬುವವರು. ಇಷ್ಟೊಂದು ಅಪಾರ್ಟ್ಮೆಂಟ್ ಖರೀದಿಸಲು ಹೇಗೆ ಸಾಧ್ಯವಾಯಿತು ಅಂತ ಕೇಳಿದರೆ, ಸಾಧ್ಯವಾದರೆ ಇನ್ನಷ್ಟು ಅಪಾರ್ಟ್ ಮೆಂಟ್ ಖರೀದಿಸುವ ಆಸೆ ಇದೆ. ನಾನು ಕನಸುಗಾರ. ಕನಸು ಕಾಣುತ್ತಲೇ ಇರುತ್ತೇನೆ ಎನ್ನುತ್ತಾನೆ.
ಸಂಬಂಧಿಕರು 828 ಅಡಿ ಎತ್ತರದ ಈ ಐಷರಾಮಿ ಕಟ್ಟಡದ ಒಳಗೆ ನಿನಗೆ ಪ್ರವೇಶವಿಲ್ಲ. ಇಲ್ಲಿ ಶ್ರೀಮಂತ ರಿಗಷ್ಟೇ ಅವಕಾಶ ಎಂದು ಛೇಡಿಸಿದಾಗ, ತನ್ನ ಅಪಾರ್ಟ್ ಮೆಂಟ್ ವಿವರ ಬಹಿರಂಗಪಡಿಸಿದ್ದಾರೆ.

2010ರಲ್ಲಿ ಅಪಾರ್ಟ್ ಮೆಂಟ್ ಖರೀದಿ ಕುರಿತ ಜಾಹೀ ರಾತು ಪ್ರಕಟವಾಯಿತು. ಅದು ಅಧಿಕೃತವಾಗಿ ಪ್ರಾರಂಭವಾದ ಮಾರನೇ ದಿನದಿಂದಲೇ ಇಲ್ಲಿ ವಾಸಿಸಲು ಆರಂಭಿಸಿದೆ ಎಂದು ಜಾರ್ಜ್ ವಿವರಿಸಿದ್ದಾರೆ.

1976ರಲ್ಲಿ ಉದ್ಯಮಕ್ಕೆ ಕಾಲಿರಿಸಿದ ಜಾರ್ಜ್, ಅತ್ಯಂತ ಸುಡು ಬಿಸಿಲಿಗೆ ಹೆಸೆರಾದ ದುಬೈನಲ್ಲಿ ಏರ್ ಕಂಡಿಷನರ್ ಮಾರಾಟ ಹಾಗೂ ರಿಪೇರಿ ಉದ್ಯಮ ಶುರು ಮಾಡಿದರು.

11 ವಯಸ್ಸಿಗೆ ಅಪ್ಪನ ಉದ್ಯಮದಲ್ಲಿ ಕಯ ಜೋಡಿಸಿದ ಜಾರ್ಜ್, ಆರಂಭದಲ್ಲಿ ಹಣ ಪಡೆದು ಚಿಲ್ಲರೆ ನೀಡುತ್ತಿ ದ್ದರು. ನಂತರ ಸಿಇಒ ಗ್ರುಪ್ ಆಫ್ ಕಂಪನಿ ಹೆಸರಿನಲ್ಲಿ ಉದ್ಯಮಕ್ಕೆ ಕಾಲಿರಿಸಿದರು.

ನಮ್ಮ ಊರಿನಲ್ಲಿ ಹತ್ತಿ ಬೆಳೆಯುತ್ತಿದ್ದರು. ಆದರೆ ನಂತರ ಹತ್ತಿ ಬೆಳೆಯೋದನ್ನು ನಿಲ್ಲಿಸಿದರು. ಆದರೆ ಈ ಬೀಜ ದಿಂದ ಗಮ್ ತಯಾರಿಸಬಹುದು ಎಂದು ತಿಳಿದಿರಲಿಲ್ಲ. ರೈತನೂ ಆಗಿದ್ದರಿಂದ ನನಗೆ ಈ ವಿಷಯ ತಿಳಿದಿದ್ದು, ಇದರಿಂದ ಶೇ.90 ರಷ್ಟು ಲಾಭ ಮಾಡಿದೆ ಎಂದು ವಿವರಿಸಿದರು.