ಚಿಕ್ಕ ಆಪರೇಷನ್ ಎಂದು ಆಸ್ಪತ್ರೆಗೆ ಹೋದ ಬೆಂಗಳೂರು ಮಹಿಳೆಗೆ ಕಾದಿತ್ತು ದೊಡ್ಡ ಶಾಕ್.! ಬೆಚ್ಚಿ ಬೀಳಿಸುವ story

0
1838

ಇತ್ತೀಚಿಗೆ ದೆಹಲಿ ಮೂಲದ ವ್ಯಕ್ತಿಯೊಬ್ಬರ ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಪಿತ್ತಕೋಶದಲ್ಲಿ ಸಣ್ಣ ಪ್ರಮಾಣದ 5mm ಕಲ್ಲುಗಳಿದ್ದವು ಇದರಿಂದಾಗಿ ಹೊಟ್ಟೆನೋವು ಸಮಸ್ಸೆಯಿಂದ ಬಳಲುತ್ತಿದ್ದರು. ದೊಡ್ಡ ಕಾಯಿಲೆ ಏನೂ ಅಲ್ಲದಿದ್ದರೂ, ವೈದ್ಯರ ನಿರ್ದೇಶನದ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕಿತ್ತು.

ಮೇ 13 2017 ರಲ್ಲಿ ಬನ್ನೇರುಘಟ್ಟ ರಸ್ತೆಯ ಪ್ರತಿಷ್ಥಿತ ಆಸ್ಪತ್ರೆಗೆ ಅಡ್ಮಿಟ್ ಆದ ಅಭಿನವ್ ವರ್ಮಾ ಅವರ ತಾಯಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸುವುದು ಅಥವಾ ಅಗತ್ಯವೇ ಇಲ್ಲದ ಟೆಸ್ಟ್ ಗಳನ್ನು ಕೊಟ್ಟಿದೆ. ಯಾವ ದಿನ ಅಡ್ಮಿಟ್ ಆಗಿದ್ದರೋ ಆ ದಿನ ಅವರ ತಾಯಿಯ RBC, HB, ಪ್ಲೇಟ್ಲೆಟ್ಸ್, ಬಿಲಿರುಬಿನ್, ಕ್ರೆಟೈನಿನ್ ಮುಂತಾದವುಗಳೆಲ್ಲವೂ normal ಆಗಿದ್ದವು ಮತ್ತು ದೇಹದ ಎಲ್ಲ ಪ್ರಮುಖ ಅಂಗಗಳು ಸಂಪೂರ್ಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು.

ತದನಂತರ ಮೇ 16 ರಂದು ಶಸ್ತ್ರ ಚಿಕಿತ್ಸೆ ವೇಳೆ pancreas ಗೆ ಶಸ್ತ್ರಚಿಕಿತ್ಸೆಯ ಉಪಕರಣ ಒಂದು ತಾಗಿ ಇನ್ಫೆಕ್ಷನ್ ಆಯಿತು, ತಕ್ಷಣ ಅವರ BP low ಆದ ಕಾರಣಕ್ಕಾಗಿ ತೀವ್ರ ನಿಗಾ ಘಟದಲ್ಲಿ ಇರಿಸಿದರು. ನಂತರ ಅವರಿಗೆ ಮೂತ್ರಪಿಂಡ, ಶ್ವಾಸಕೋಶದ ಹೃದಯ, ಪಿತ್ತಜನಕಾಂಗ ಮುಂತಾದ ಸಮಸ್ಯೆಗಳು ಕಂಡುಬಂದವು. ನಂತರ ಅಭಿನವ್ ಅವರ ತಾಯಿ ನಿರಂತರವಾಗಿ ಹೊಟ್ಟೆಯಲ್ಲಿ ನೋವು ಅನುಭವಿಸುತ್ತಿದ್ದರು ಮತ್ತು ಅವಳ ಹೊಟ್ಟೆ ಗಾತ್ರವು ಹೆಚ್ಚಿತ್ತು ಆದರೆ ICU ತಂಡವು ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಚಿಂತಿಸಲಿಲ್ಲ. ಆಂತರಿಕ ರಕ್ತಸ್ರಾವವು ಪ್ರಾರಂಭವಾಯಿತು ಮತ್ತು ರಕ್ತಸ್ರಾವವು ಎಲ್ಲಿ ನಡೆಯುತ್ತಿದೆ ಎಂಬುದನ್ನು ಕಂಡುಹಿಡಿಯಲು ಅವರಿಗೆ ಸಾಧ್ಯವಾಗಲಿಲ್ಲ. ಜುಲೈ 3 2017 ರಂದು ಕೊನೆಯುಸಿರೆಳೆದಿದ್ದಾರೆ. ಇಸ್ಟೆಲ್ಲಾ ಅದರೂ ವೈದ್ಯರಿಂದಲೇ ತಪ್ಪಾದರೂ ಒಟ್ಟು ಹಾಸ್ಪಿಟಲ್ ಬಿಲ್ ಬರೊಬ್ಬರಿ ೪೩ ಲಕ್ಷ ರುಪಯಿಗಲಾಯಿತು ಇದರಲ್ಲಿ ಔಷಧಿಗಳ ಬೆಲೆ 12 ಲಕ್ಷ ರೂಪಾಯಿಯಂತೆ.

ಈ ಎಲ್ಲ ಘಟನೆಗಳನ್ನು ಅಭಿನವ್ ವರ್ಮಾ ಅವರು ತಮ್ಮ ಫೇಸ್ಬುಕ್ ನಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್ವಿ ನಲ್ಲಿ ವೈದ್ಯಕೀಯ ಕಿಡ್ನ್ಯಾಪಿಂಗ್ ಮತ್ತು ಮರ್ಡರ್ ಎಂದು ಆರೋಪಿಸಿದ್ದಾರೆ. ವಿಪರ್ಯಾಸ ಏನೆಂದರೆ ಅವರ ಅವರ ಪೋಸ್ಟ್ ಗೆ ಕಾಮೆಂಟ್ ಮಾಡಿರೋರು ಒಂದಲ್ಲ ಒಂದು ರೀತಿಯಿಂದ ಆಸ್ಪತ್ರೆ ಗಳ ಬೇಜವಾಬ್ದಾರಿಗೆ ಬಲಿಯಾದವರೇ ಹೆಚ್ಚು.

ವೈದ್ಯ ಅಂದರೆ ಭೂಮಿಯ ಮೇಲಿರುವ ದೇವರು ಎಂದು ನಂಬುವ ಕಾಲವಿತ್ತು. ಆದರೆ ಇಂದು ಕೆಲವು ಆಸ್ಪತ್ರೆಗಳು ಇದಕ್ಕೆ ಮಸಿ ಬಳಿಯುತ್ತಿವೆ. ಜೀವ ಉಳಿಸಬೇಕಾದ ಆಸ್ಪತ್ರೆಗಳಿಂದು ಕೆಲ ಹಣದಾಹಿಗಳ ಕಾರಣಕ್ಕೆ ಸುಲಿಗೆಯ ತಾಣವಾಗಿರುವುದು ಶೋಚನೀಯ ಸಂಗತಿ. ವೈದ್ಯರನ್ನು ಸಂಶಯಾಸ್ಪದವಾಗಿ ನೋಡಬೇಕಾದ ದುಸ್ಥಿತಿ ಬಂದಿರುವುದು ವಿಪರ್ಯಾಸ.