ಮೆಡಿಕಲ್ ಪರೀಕ್ಷೆಯಲ್ಲಿ ಫೇಲ್ ಆಗಲು ಪ್ರೇಯಸಿ ಕಾರಣ; ಈಗ ಅವಳೆ ಫೀಸ್ ಕಟ್ಟಬೇಕು ಎಂದು ಹಠ ಹಿಡಿದ ಪ್ರಿಯಕರ..

0
465

ಹರೆಯದ ಜೋಷ್-ನಲ್ಲಿರುವ ಯುವಪಿಳಿಗೆ ಪ್ರೀತಿ- ಪ್ರೇಮದ ಮಜಲಿನಲ್ಲಿ ಏನೆಲ್ಲಾ ತಾಪತ್ರೆಗೆ ಕಾರಣರಾಗುತ್ತಾರೆ ಎನ್ನುವುದಕ್ಕೆ ಸಮಾಜದಲ್ಲಿ ಪ್ರತಿದಿನವೂ ನಡೆಯುತ್ತಿರುವ ಕೆಲವು ಆಶ್ಚರ್ಯಕರ ಘಟನೆಗಳೇ ಸಾಕ್ಷಿಯಾಗಿವೆ. ಇಂತಹದೆ ಘಟನೆಯೊಂದು ನಡೆದಿದ್ದು, ಪ್ರೀತಿಯಲ್ಲಿ ಬಿದ್ದ ಮೆಡಿಕಲ್ ವಿದ್ಯಾರ್ಥಿ ಪರೀಕ್ಷೆಯಲ್ಲಿ ಫೇಲ್ ಆಗಲು ಪ್ರೇಯಸಿ ಕಾರಣ ಅವಳೇ ಈಗ ಫೀಸ್ ಕಟ್ಟಬೆಕ್ಕು ಎಂದು ಹಠ ಹಿಡಿದಿದ್ದಾನೆ.

love-failure-in-5-tips-2
ಸಾಂಧರ್ಬಿಕ ಚಿತ್ರ

Also read: ತಂದೆ-ತಾಯಿ ಅಣ್ಣ-ತಮ್ಮಂದಿರು ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು ನೋಡಿದ್ದಿರಾ; ಇಲ್ಲೊಬ್ಬ ಸ್ವಂತ ಹೆಂಡತಿಗೆ ಅವಳ ಪ್ರಿಯಕರನ ಜೊತೆ ಮದುವೆ ಮಾಡಿದ ವಿಷಯ ಕೇಳಿದರೆ ಶಾಕ್ ಆಗ್ತಿರಾ..

ಹೌದು ಮಹಾರಾಷ್ಟ್ರದ ಔರಂಗಬಾದ್‍ನಲ್ಲಿ ಮೆಡಿಕಲ್ ಪರೀಕ್ಷೆಯಲ್ಲಿ ನಾನು ಫೇಲ್ ಆಗಿದ್ದಕ್ಕೆ ನನ್ನ ಗೆಳತಿಯೇ ಕಾರಣ. ಈಗ ಆಕೆ ನನ್ನ ಫೀಸ್ ಭರಿಸಬೇಕು ಎಂದು ಹಠ ಮಾಡುತ್ತಿದ್ದ ವಿದ್ಯಾರ್ಥಿ ಪೊಲೀಸರ ವಶದಲ್ಲಿದ್ದಾನೆ. ತಾನು ಫೇಲ್ ಆಗಲು ನೀನೇ ಕಾರಣ ಎಂದು ತನ್ನ ಪ್ರಿಯತಮೆಯನ್ನೇ ಹೊಣೆಗಾರಳನ್ನಾಗಿಸಿದ್ದಾನೆ. ಅಲ್ಲದೇ ನೀನೇ ಫೀಸ್ ಕಟ್ಟು ಬೇಕು ಎಂದು ಒತ್ತಾಯಿಸಿ ಅವಳ ಫೋಟೋಸ್ ಮತ್ತು ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾನೆ. ಇವನು ನಾಲ್ಕು ವರ್ಷದ ಬಿಎಚ್‍ಎಂಎಸ್(ಹೋಮಿಯೋಪಥಿ) ಕೋರ್ಸ್‍ಗೆ ಅಡ್ಮಿಶನ್ ಮಾಡಿಸಿದ್ದ. ಅದೇ ತರಗತಿಯಲ್ಲಿ ಆತನ ಪ್ರೇಯಸಿ ಕೂಡ ಓದುತ್ತಿದ್ದಳು. ಈ ವೇಳೆ ಇಬ್ಬರ ನಡುವೆ ಪ್ರೀತಿ ಆರಂಭವಾಗಿ ಈ ಘಟನೆಗೆ ಕಾರಣವಾಗಿದೆ.

ಏನಿದು ಪ್ರಿಯತಮನ ಗೋಳು?

love-failure-in-5-tips-1
ಸಾಂಧರ್ಬಿಕ ಚಿತ್ರ

Also read: ಪ್ರೇಮಿಗಳು ಓದಲೇ ಬೇಕಾದ ಸ್ಟೋರಿ; ಲವ್ ಮಾಡಿ ಮದುವೆಯಾದ ಒಂದೇ ವರ್ಷದಲ್ಲಿ ಹೆಂಡತಿಗೆ ಕ್ಯಾನ್ಸರ್ ಆದರೆ ಈ ವೇಳೆ ಪ್ರಿಯತಮ ತೋರಿಸುವ ಪ್ರೀತಿ ಹೇಗಿದೆ ನೋಡಿ..

ಇವನು ಹೋಮಿಯೋಪಥಿ ಮತ್ತು ಸರ್ಜರಿಯಲ್ಲಿ ಮೊದಲ ವರ್ಷದ ವ್ಯಾಸಂಗ ನಡೆಸುತ್ತಿದ್ದ ಔರಂಗಾಬಾದ್‌ ನ ಬೀಡ್ ಜಿಲ್ಲೆಯ 21 ವರ್ಷದ ಪ್ರತಿಭಾವಂತ ವಿದ್ಯಾರ್ಥಿ, ಫೇಲ್ ಆಗಿದ್ದಾನೆ. ಈ ಮೂಲಕ ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆಯಲು ಅನರ್ಹಗೊಂಡಿದ್ದಾನೆ. ಇದರಿಂದ ಬೇಸತ್ತ ಯುವಕ ‘ನಾನು ಅನುತ್ತೀರ್ಣಗೊಳ್ಳಲು ನನ್ನ ಪ್ರಿಯತಮೆಯೇ ಕಾರಣ’ ಎಂದು ಆರೋಪಿಸಿದ್ದಾನೆ. ಆಕೆಯೇ ತನಗೆ ಓದಲು ಸಮಯ ಕೊಡದೆ, ಪಾಸಾಗದಂತೆ ಅಡ್ಡಿಪಡಿಸಿದ್ದಾಳೆ, ಹೀಗಾಗಿ ಈಗ ಅವಳೇ ಪ್ರಥಮ ವರ್ಷದ ಶುಲ್ಕ ಭರಿಸಲಿ ಎಂದು ಹಠ ಹಿಡಿದಿದ್ದಾನೆ.

ಸಾಂಧರ್ಬಿಕ ಚಿತ್ರ

ಇನ್ನು ಆತ ಪ್ರೀತಿಸುತ್ತಿದ್ದ ಯುವತಿ ಆತನ ಸಹಪಾಠಿಯಾಗಿದ್ದು, ಯುವಕ ಫೇಲಾದ ಬಳಿಕ ಬಹಳಷ್ಟು ಅಂತರ ಕಾಯ್ದುಕೊಂಡಿದ್ದಾಳೆ. ಆಕೆಯನ್ನು ಒಲಿಸಲು ಆತ ಅದೆಷ್ಟೇ ಯತ್ನಿಸಿದರೂ ಪ್ರಯೋಜನವಾಗಿಲ್ಲ. ಕರೆ ಮಾಡಿ ಮಾತನಾಡಲೂ ಯತ್ನಿಸಿದ್ದಾನೆ. ಆದರೆ ಯುವತಿ ಇದ್ಯಾವುದನ್ನೂ ಲೆಕ್ಕಿಸದಾಗ ನನಗೆ ಸರಿಯಾಗಿ ಓದಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಮೊದಲ ವರ್ಷದಲ್ಲಿ ಫೇಲ್ ಆಗಿದ್ದೇನೆ. ನಾನು ಫೇಲ್ ಆಗಿದ್ದರಿಂದ ನನಗೆ ಮುಂದಿನ ವರ್ಷಕ್ಕೆ ಆಡ್ಮಿಶನ್ ದೊರೆತಿಲ್ಲ. ನಾನು ಪರೀಕ್ಷೆಯಲ್ಲಿ ಫೇಲಾದ ಕಾರಣ ಆಕೆಯ ಫೋಷಕರು ಆಕೆಗೆ ನೀಡಿದ್ದ ಫೀಸ್ ನನಗೆ ಕಟ್ಟಬೇಕು ಎಂದು ಬೇಡಿಕೆ ಇಟ್ಟಿದ್ದಾನೆ.

Also read: ಮನೆಯವರು ಇವರಿಬ್ಬರ ಪ್ರೇಮ ವಿವಾಹಕ್ಕೆ ಒಪ್ಪದಿದ್ದಾಗ ಈ ಪ್ರೇಮಿಗಳು ರಾಜ್ಯಪಾಲರ ಬಳಿಯೇ ಹೋಗಿ ಪ್ರೀತಿ ಹೇಗೆ ಗೆದ್ದುಕೊಂಡರು ಗೊತ್ತೇ?

ಅಷ್ಟೇ ಅಲ್ಲದೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಪ್ರೇಯಸಿ ಆತನಿಂದ ದೂರ ಹೋಗಿದ್ದಾಳೆ. ಪ್ರೇಯಸಿ ದೂರ ಆಗುತ್ತಿರುವುದನ್ನು ನೋಡಿ ಯುವಕ ಆಕೆಗೆ ಮೆಸೇಜ್ ಮಾಡಲು ಶುರು ಮಾಡಿದ್ದಾನೆ. ಬಳಿಕ ತನ್ನ ಪ್ರೇಯಸಿ ಮೋಸ ಮಾಡಿದ್ದಾಳೆ ಎನ್ನುವ ವಿಚಾರ ಆತನಿಗೆ ಗೊತ್ತಾಗಿದೆ. ಅದಕ್ಕೆ ಸಿಟ್ಟಿಗೆದ್ದ ಯುವಕ ಸಾಮಾಜಿಕ ಜಾಲತಾಣವನ್ನು ದುರುಪಯೋಗಪಡಿಸಲಾರಂಭಿಸಿದ್ದಾನೆ ಹಾಗೂ ಯುವತಿಯ ಹೆತ್ತವರ ಕುರಿತಾಗಿ ಕೆಟ್ಟದಾಗಿ ಬರೆಯಲಾರಂಭಿಸಿದ್ದಾನೆ. ಇಷ್ಟೇ ಅಲ್ಲದೇ ‘ನನ್ನ ಪ್ರಥಮ ವರ್ಷದ ಶುಲ್ಕ ನೀನೇ ಭರಿಸಬೇಕು. ಇಲ್ಲವಾದಲ್ಲಿ ನಿನ್ನ ಖಾಸಗಿ ಪೋಟೋಗಳನ್ನು ಲೀಕ್ ಮಾಡುವುದಾಗಿಯೂ ಯುವತಿಗೆ ಬೆದರಿಕೆಯೊಡ್ಡಿದ್ದಾನೆ’ ಇದರಿಂದ ಬೆಚ್ಚಿ ಬಿದ್ದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸದ್ಯ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.