ಸಾಂಬಾರ ವಸ್ತುಗಳ ರಾಣಿ ಏಲಕ್ಕಿಯ ಔಷಧೀಯ ಗುಣಗಳು ಗೊತ್ತಾದ್ರೆ ಆಶ್ಚರ್ಯ ಪಡ್ತಿರಾ…

0
1571

Kannada News | Health tips in kannada

ಸಿಹಿ ಖಾದ್ಯಗಳಲ್ಲಿ ರುಚಿ ಹಾಗು ಸ್ವಾದಕ್ಕೆ ಏಲಕ್ಕಿಯೇ ಪ್ರಮುಖ ವಸ್ತು. ಸಾಂಬಾರ ವಸ್ತುಗಳ ರಾಣಿ ಏಲಕ್ಕಿಗೆ ಪಶ್ಚಿಮ ಘಟ್ಟ ತವರು.  ಜಿಬರೆಸಿ ಸಸ್ಯ ಕುಟುಂಬಕ್ಕೆ ಸೇರಿದ ಏಲಕ್ಕಿ ಗಿಡ ಹತ್ತು ಅಡಿಯವರೆಗೂ ಬೆಳೆಯುತ್ತದೆ. ಏಲಕ್ಕಿಯಲ್ಲಿ ಪೊಟ್ಯಾಸಿಯಂ, ರಂಜಕ, ಮ್ಯಾಂಗನೀಸ್ ಹಾಗು ಸ್ಟಾರ್ಚ್ ಗಳಿರುತ್ತವೆ. ಆಯುರ್ವೇದದಲ್ಲಿಯೂ ಏಲಕ್ಕಿಗೆ ಅಗ್ರಸ್ಥಾನ. ಎಲಾದಿ ಚೂರ್ಣ, ಎಲಾಧ್ಯಾರಿಷ್ಟ, ಎಲಾಧಿ ಗುಟಿಕ, ಎಲಾಧ್ಯಮೋದಕ, ಎಲಾಧಿಕ್ವಾಥಗಳು ಮೂಲತಹಃ ಏಲಕ್ಕಿಯನ್ನು ಹೊಂದಿವೆ.

೧) ಸ್ವಾಶಕೊಶ, ಕೆಮ್ಮು ಮತ್ತು ಕ್ಷಯರೋಗಗಳಲ್ಲಿ ಸಣ್ಣ ಏಲಕ್ಕಿಯ ಉಪಯೋಗ ಪರಿಣಾಮಕಾರಿ.
೨) ಏಲಕ್ಕಿ ಪುಡಿ ಬೆರೆಸಿ ಬೆಲ್ಲದೊಂದಿಗೆ ಪಾನಕ ಕುದಿದ್ದಲ್ಲಿ ಪಿತ್ತದಿಂದಾಗುವ ತಲೆಸುತ್ತುವಿಕೆ ಬಹುಬೇಗ ನಿಲ್ಲುವುದು.
೩) ವಾಂತಿ ಭೇದಿಗೂ ಏಲಕ್ಕಿ ಉತ್ತಮ ಮನೆಮದ್ದು.ಏಲಕ್ಕಿ ಸೇವನೆ ನಿತ್ರಾಣವನ್ನು ಹೋಗಲಾಡಿಸುತ್ತದೆ.

watch:

೪)ಉರಿಮೂತ್ರವಾಗಿದ್ದಲ್ಲಿ ಏಲಕ್ಕಿ ಪುಡಿಯನ್ನುತಿಳಿ ಮೊಸರು ಮತ್ತು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಬೇಕು.
೫) ಏಲಕ್ಕಿ ಪುಡಿಯನ್ನು ಜೇನುತುಪ್ಪದಲ್ಲಿ ಕಲೆಸಿ ಸೇವಿಸಿದರೆ ವಾಂತಿಯು ತತ್ತಕ್ಷಣ ನಿಲ್ಲುವುದು.
೬) ಅಜೀರ್ಣವಾಗಿದ್ದಲ್ಲಿ ನಾಲ್ಕು ಕಾಳು ಏಲಕ್ಕಿಯನ್ನು ಬಾಯಿಗೆ ಹಾಕಿಕೊಂಡು ಜಗಿದ್ದಲ್ಲಿ ತಕ್ಷಣ ಪರಿಹಾರ ಲಭಿಸುವುದು.

೭) ಏಲಕ್ಕಿ ಪುಡಿಯನ್ನು ಬಾದಾಮಿ ಮತ್ತು ಕಲ್ಲುಸಕ್ಕರೆಯೊಂದಿಗೆ ನಿಯಮಿತವಾಗಿ ಸೇವಿಸುವುದರಿಂದ ಮಿದುಳಿಗೆ ಬಲ ಬರುತ್ತದೆ ಮತ್ತು ಜ್ಞಾಪಕ ಶಕ್ತಿ ವರ್ಧಿಸುತ್ತದೆ.

Also Read: ಬಟ್ಟಲು ನುಗ್ಗೆ ಎಲೆಯರಸ 9 ಮೊಟ್ಟೆಗೆ ಅಥವಾ 9 ಲೋಟ ಬಾದಾಮಿ ಹಾಲಿಗೆ ಸಮ .. ಮತ್ತ್ಯಾಕೆ ಯೋಚ್ನೆ ಮಾಡ್ತಿದೀರಾ ಈಗ್ಲಿಂದಾನೆ ನುಗ್ಗೆ ಸೊಪ್ಪು ಬಳಸಕ್ಕೆ ಶುರು ಮಾಡ್ರಿ…