ಧ್ಯಾನ ಮಾಡುವುದರಿಂದ ಎಲ್ಲರಿಗೂ ಮಾನಸಿಕ ನೆಮ್ಮದಿ ಸಿಗುತ್ತದೆ ಎನ್ನುವುದು ಶೇ. 100 ಸುಳ್ಳು; ಯಾಕೆ ಅಂತ ಈ ಅಧ್ಯಯನ ಹೇಳುತ್ತೆ ನೋಡಿ..

0
455

ಒತ್ತಡದ ಜೀವನದಲ್ಲಿ ದೇಹಕ್ಕಿಂತ ಮೊದಲು ಮನಸ್ಸು ಬೇಗನೆ ದಣಿಯುತ್ತದೆ. ಅದಕ್ಕಾಗಿ ಪ್ರತಿಯೊಬ್ಬರ ದೈಹಿಕ ಮತ್ತು ಮಾನಸಿಕ ಆರೋಗ್ಯದಿಂದ ಇರಬೇಕು ಎಂದರೆ ಮಾನಸಿಕ ಸ್ಥಿತಿ ಸೂಕ್ತವಾಗಿ ಇರಬೇಕು. ಇಲ್ಲದಿಂದರೆ ಬೇಗನೆ ಜೀವನವೇ ಬೇಸರ ತರುತ್ತದೆ. ಅದಕ್ಕಾಗಿ ಉತ್ತಮವಾದ ಮನಸ್ಸು ನಮ್ಮದಾಗಬೇಕು ಎಂದಾದರೆ ಮೊದಲು ಮನಸ್ಸಿಗೆ ಅನುಕೂಲವಾಗುವಂತ ವ್ಯಾಯಾಮ ಅಥವಾ ಶಾಂತಿ ದೊರೆಯಬೇಕು. ಇದಕ್ಕೆ ಆಧುನಿಕ ಪದ್ಧತಿ ಅಥವಾ ಅತ್ಯುತ್ತಮವಾದ ವಿಧಾನ ಎಂದರೆ ಧ್ಯಾನ. ವೆಂದು ಹಲವರು ಹೇಳುತ್ತಾರೆ. ಆದರೆ ಇದಕ್ಕೆ ಸಂಬಂಧಪಟ್ಟ ಅಧ್ಯಯನ ವರದಿ ಮಾಡಿದ್ದು ಎಲ್ಲರಿಗೂ ಧ್ಯಾನದಿಂದ ಮಾನಸಿಕ ನೆಮ್ಮದಿ, ಆರೋಗ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದೆ.

Also read: 120 ವರ್ಷ ವಯಸ್ಸಿನಲ್ಲಿ ಯೋಗ ಮಾಡುವ ಭಾರತೀಯ ಹಿರಿಯ ವ್ಯಕ್ತಿ, ಸ್ವಾಮಿ ಶಿವಾನಂದ ಅವರು. ಹಿರಿಯ ವ್ಯಕ್ತಿಯಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರಲಿದ್ದಾರೆ…

ಏನಿದು ಅಧ್ಯಯನ?

ಸೂಕ್ತ ರೀತಿಯ ಧ್ಯಾನ ಕೈಗೊಳ್ಳುವುದರಿಂದ ಮಾನಸಿಕ ಸ್ಥಿತಿ ಸುಧಾರಣೆ ಯಾಗುವುದು. ಆಮ್ಲಜನಕದ ಸೇವನೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಶಕ್ತಿಯನ್ನು ಪುನಶ್ಚೇತನಗೊಳಿಸುತ್ತದೆ. ನಮ್ಮಲ್ಲಿರುವ ಅನೇಕ ಆತಂಕಗಳು ದೂರವಾಗುವುದು. ಧ್ಯಾನ ಮಾಡುವಾಗ “ಓಂ”, ನಾನು ಆರೋಗ್ಯವಾಗಿದ್ದೇನೆ”, “ನಾನು ಒಳ್ಳೆಯ ಆಕಾರದಲ್ಲಿದ್ದೇನೆ”, “ನಾನು ಖುಷಿಯಲ್ಲಿದ್ದೇನೆ” ಎಂದು ಹೇಳುತ್ತಾ ಧ್ಯಾನ ಮಾಡಬಹುದು. ಇದರಿಂದ ಸಂತೋಷದ ಜೀವನವನ್ನು ಪಡೆಯಬಹುದು ಎನ್ನುವುದನ್ನು ಮೊದಲಿನಿಂದ ನಂಬಿಕೊಂಡು ಬಂದಿದೇವೆ. ಆದರೆ ಯುನಿವರ್ಸಿಟಿ ಕಾಲೇಜ್ ಲಂಡನ್ ನ ವಿಜ್ಞಾನಿಗಳು ನಡೆಸಿದ ಸಂಶೋಧನೆ ಪ್ರಕಾರ, ಇದು ಶೇ.100 ರಷ್ಟು ಸುಳ್ಳು ಎಂದು ಹೇಳುತ್ತಿದೆ.

Also read: ವಿಠ್ಠಲ ಎಂದರೆ ಹಾರ್ಟ್ ಅಟ್ಯಾಕ್ ಆಗೊಲ್ಲ.. ವೈಜ್ಞಾನಿಕ ವಾಗಿ ಸಾಬೀತಾಗಿದೆ ನೋಡಿ.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ

ಸಂಶೋಧಕರು ಧ್ಯಾನ ಮಾಡುವುದು ಮಾನಸಿಕ ಆರೋಗ್ಯ ಎದುರಿಸುತ್ತಿರುವ ಎಲ್ಲರಿಗೂ ಆಹ್ಲಾದಕರ ಅನುಭವ ಸಿಗುವುದಿಲ್ಲ, ನಿಯಮಿತವಾಗಿ ಧ್ಯಾನ ಮಾಡುವವರ ಪೈಕಿ ಕಾಲುಭಾಗದಷ್ಟು ಜನರಿಗೆ ಧ್ಯಾನದಲ್ಲಿ ಭಯ ಮತ್ತು ವಿಕೃತ ಭಾವನೆಗಳ ಭಾವನೆಗಳು ಸೇರಿದಂತೆ ಮಾನಸಿಕವಾಗಿ ಅಹಿತಕರ ಅನುಭವ ಆಗಿದೆ ಎಂದು PLOS ONE ಜರ್ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದ್ದು, ಮೆಡಿಟೇಷನ್ ರಿಟ್ರೀಟ್, ವಿಪಸನ, ಕೋನ್ ಅಭ್ಯಾಸ (ಝೆನ್ ಬುದ್ಧಿಸಂ ನಲ್ಲಿ ಉಪಯೋಗಿಸುವ ಯೋಗ) ಮಾಡುವವರು ಹಾಗೂ ಹೆಚ್ಚಿನ ಮಟ್ಟದಲ್ಲಿ ಪದೇ ಪದೇ ನಕಾರಾತ್ಮಕ ಯೋಚನೆಗಳನ್ನು ಹೊಂದಿರುವವರಿಗೆ ಧ್ಯಾನ ಮಾಡುವಾಗ ಅಹಿತಕರ ಅನುಭವ ಆಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

Also read: ಅಕ್ವೇರಿಯಂ ಮನೆಯಲ್ಲಿ ಇದ್ದರೆ ಏನೆಲ್ಲಾ ಉಪಯೋಗಗಳು ಗೊತ್ತಾ?? ವಾಸ್ತು ಪ್ರಕಾರ ಅಕ್ವೇರಿಯಂ ಅನ್ನು ಇಡಿ.. ಮನೆಯನ್ನು ಶಾಂತಿ ಸಮೃದ್ಧಿ ಯಿಂದ ಇರಿಸಿ..

ಈ ಅಧ್ಯಯನಕ್ಕಾಗಿ. ಕನಿಷ್ಟ 2 ತಿಂಗಳ ಕಾಲ ಧ್ಯಾನದಲ್ಲಿ ಅನುಭವ ಹೊಂದಿರುವ 1,232 ಜನರನ್ನು ಆನ್ ಲೈನ್ ಸಂಶೋಧನೆಗೆ ಒಳಪಡಿಸಲಾಗಿದ್ದಾರೆ. ಈ ಪೈಕಿ ಮಹಿಳೆಯರು ಹಾಗೂ ಧಾರ್ಮಿಕ ನಂಬಿಕೆಯುಳ್ಳವರಿಗೆ ಮಾತ್ರ ಧ್ಯಾನ ಮಾಡುವಾಗ ನಕರಾತ್ಮಕ ಅನುಭವ ಆಗಿರುವ ಉದಾಹರಣೆಗಳು ಕಡಿಮೆ ಇದೆ ಎನ್ನುವುದನ್ನೂ ಸಂಶೋಧಕರು ಕಂಡುಕೊಂಡಿದ್ದಾರೆ. ಧ್ಯಾನ ಮಾಡುವುದು ಮಾನಸಿಕ ಆರೋಗ್ಯ ಎದುರಿಸುತ್ತಿರುವ ಎಲ್ಲರಿಗೂ ಆಹ್ಲಾದಕರ ಅನುಭವ ಸಿಗದೇ ಇರುವುದಕ್ಕೆ ಕಾರಣ ಏನಿರಬಹುದೆಂಬುದನ್ನು ಕಂಡುಕೊಳ್ಳಲು ಮತ್ತಷ್ಟು ಆಳವಾದ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ