ಜೈಲಿನಲ್ಲಿ 4 ವರ್ಷಗಳ ಕಾಲ ಶಿಕ್ಷೆ ಅನುಭವಿಸುತ್ತಿರುವ ರಿಯಲ್-ಲೈಫ್ ಮುನ್ನಾಭಾಯ್ ಇಂದು ಗಾಂಧಿಯನ್ ತತ್ವ ಶಾಸ್ತ್ರದಲ್ಲಿ ಉಪನ್ಯಾಸಕರಾಗಿದ್ದಾರೆ..!!

0
609

ನೀವು ಮುನ್ನಾಭಾಯಿ ಚಿತ್ರವನ್ನು ನೋಡಿರುತ್ತಿರಾ, ಅಲ್ಲದೆ ಚಿತ್ರದಲ್ಲಿ ಸಂಜಯ್ ದತ್ ಅಭಿನಯಕ್ಕೆ ಫುಲ್ ಮಾರ್ಕ್ಸ್ ನೀಡಿರುತ್ತಿರಾ. ಗಾಂಧಿ ತತ್ವವೇ ಅಂತಹದ್ದು ಎದುರಾಳಿಯನ್ನು ಕರಗಿಸಿ ತನ್ನ ಹಿಂದೆ ಬೀಳುವಂತೆ ಮಾಡುತ್ತದೆ.  ಎಸ್.. ಲಕ್ಷ್ಮಣ ಗೋಲೆ ಸಹ ಗಾಂಧಿ ತತ್ವಗಳ ಪ್ರಚಾರದಿಂದಲೇ ಹೆಸರುವಾಸಿಯಾದವರು. ಆದ್ರೆ ಇವರಿಗೆ ರಿಯಲ್ ಲೈಫ್ ಮುನ್ನಾಭಾಯಿ ಎಂದೆ ಕರೆಯುತ್ತಾರೆ. ಜೈಲಿನಲ್ಲಿ ಇದ್ದಾಗ ಒಬ್ಬರು ನೀಡಿದ ಪುಸ್ತಕ ಇವರ ಬದುಕನ್ನೇ ಚೆಂಜ್ ಮಾಡಿದೆ. ಗಾಂಧಿಜಿ ಬರೆದ My Experiments With Truth ಪುಸ್ತಕವನ್ನು ಓದಿ ಅವರ ತತ್ವಗಳಿಗೆ ಹಾಗೂ ಸಿದ್ಧಾಂತಕ್ಕೆ ಮಾರಿ ಹೋದ ವ್ಯಕ್ತಿ ಲಕ್ಷ್ಮಣ.

source: thelogicalindian.com

ಜೈಲು ಸೇರಲು ಕಾರಣ ಏನು? ಲಕ್ಷ್ಮಣ ಮುಂಬೈ ನಿವಾಸಿ. ತಮ್ಮ ಸುತ್ತ ಮುತ್ತಲು ಸಮಾಜ ದ್ರೋಹಿ ಕಾರ್ಯಗಳು ನಡೆಯುತ್ತಿದ್ದರೆ ಇದನ್ನು ನೋಡಿ ಸುಮ್ಮನೇ ಕುಳಿತುಕೊಳ್ಳುವ ಜಾಯಮಾನ ಲಕ್ಷ್ಮಣವರದ್ದಂತೂ ಅಲ್ಲವೇ ಅಲ್ಲ. ಪರಿಣಾಮ ಅವರ ಸ್ನೇಹಿತನ ಕೆಲಸದ ವಿರುದ್ಧ ಧ್ವನಿ ಎತ್ತಿದ್ರು. ಇವ್ರು ಚಿಕ್ಕವರದ್ದಿಗಾ ಒಬ್ಬ ಮನುಷ್ಯ, ಯುವತಿಯನ್ನು ಚುಡಾಯಿಸಿದ. ಇವರು ಅವನ ಬಳಿ ಹೋಗಿ ಹೀಗೇಕೆ ಮಾಡ್ತಿದ್ದಿಯಾ ಎಂದು ಪ್ರಶ್ನಿಸಿದ್ರು. ನೀ ಯಾರು ಇದನ್ನೆಲ್ಲಾ ಕೇಳಲು ಎಂದು ಲಕ್ಷ್ಮಣ ಅವರನ್ನು ದುಕುತ್ತಾನೆ. ಸಿಟ್ಟಿಗೆದ್ದ ಲಕ್ಷ್ಮಣ ಬಳಿಯಲ್ಲಿದ್ದ ಸಲೂನ್ ಅಂಗಡಿಗೆ ತೆರಳಿ ರೇಸರ್ ತಂದು ಮುಖಕ್ಕೆ ಹೊಡೆಯುತ್ತಾರೆ, ಅವನು ಲಕ್ಷ್ಮಣರನ್ನು ತಡೆಯಲು ಬಂದಾಗ ಮತ್ತೆ ಹೊಟ್ಟೆ ಭಾಗಕ್ಕೆ ಹೊಡೆಯುತ್ತಾರೆ. ಪೊಲೀಸರು ದೂರು ದಾಖಲಿಸಿಕೊಂಡು, ಲಕ್ಷ್ಮಣರನ್ನು ಜೈಲಿಗೆ ತಳ್ಳುತ್ತಾರೆ.

ಮತ್ತೆ ಮೂರು ತಿಂಗಳ ಬಳಿಕ ಮುಖ್ಯ ವಾಹಿನಿಗೆ ಬಂದ್ರೂ ಸಹ ಯಾರು ಇವರನ್ನು ಸರಿಯಾಗಿ ಮಾತನಾಡಿಸಲಿಲ್ಲ. ಮತ್ತೇ ಇವರು ಕೆಟ್ಟ ದಾರಿ ಹಿಡಿದ್ರು. ಜೈಲೇ ವಾಸಸ್ಥಳವಾಯಿತು. ಜೈಲಿನಲ್ಲಿ ಓದುವ ಹವ್ಯಾಸವನ್ನು ಬೆಳಿಸಿಕೊಂಡ್ರು. ಸಿಕ್ಕಿದನೆಲ್ಲಾ ಓದುತ್ತಾ ಸಾಗಿದ್ರು. ಅಲ್ಲದೆ ಜೈಲಿನ ಸಿಕ್ಕ ಎಲ್ಲಾ ಪುಸ್ತಕಗಳನ್ನು ಓದಿ ಮುಗಿಸಿದ್ರು. ಆದ್ರೆ ಒಂದು ದಿನ ಅವರಿಗೆ ಓದಲು ಏನು ಸಿಗದೆ ಇದ್ದಾಗ ಒಂದು ಸಂಸ್ಥೆ ನೀಡಿದ My Experiments With Truth ಪುಸ್ತಕ ಓದಿದ್ರು. ಬಳಿಕ ಎಂದು ಅವರು ಜೈಲಿನಲ್ಲಿ ಸುಳ್ಳನ್ನು ಹೇಳಿಲ್ಲವಂತೆ. ಇದ್ರಿಂದ ಹೊರ ಬರಲು ಮೌನ ವೃತದ ಪಾಲಾದ್ರು. ಅಲ್ಲದೆ ವಿನಂಮ್ರತೆಯಿಂದ ಮಾತನಾಡಲು ಆರಂಭಿಸಿದ್ರು. ಬಿಡುವಿನ ವೇಳೆಯಲ್ಲಿ ಗಿಡಗಳಿಗೆ ನೀರು ಹಾಕುವುದು ಹಾಗೂ ಪಾಸಿಟಿವ್ ಥಿಂಕಿಂಗ್ನಲ್ಲಿ ತೊಡಗಿದ್ರು. ತಮ್ಮ ಕೆಲಸವನ್ನೇ ತಾವೇ ಮಾಡಿಕೊಳ್ಳುತ್ತಾ ಬೇರೆಯವರಿಗೆ ಮಾರ್ಗದರ್ಶನ ಮಾಡಲು ಆರಂಭಿಸಿದ್ರು. ಬಳಿಕ ಕೋರ್ಟ್ನಲ್ಲೂ ಸಹ ನ್ಯಾಯಾಧಿಶರ ಎದುರು ತಮ್ಮ ತಪ್ಪನ್ನು ಒಪ್ಪಿಕೊಂಡು ಶಿಕ್ಷೆ ಅನುಭವಿಸಿ ಈಗ, ಉನ್ನತ ಜೀವನ ನಡೆಸುತ್ತಿದ್ದಾರೆ.

ಕೃಪೆ: The Logical Indian