ಚಂದ್ರಯಾನ 2 ರ ವಿಕ್ರಂ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾ ಕಂಡು ಹಿಡಿದಿದೆ, ನಾಸಾಗೆ ಸಹಾಯ ಮಾಡಿದ್ದು ಭಾರತದ ಟೆಕ್ಕಿ ಅಂತ ಗೊತ್ತಾದ್ರೆ ಆಶ್ಚರ್ಯ ಪಡ್ತೀರ!!

0
196

ಇಡಿ ಜಗತ್ತು ಭಾರತದ ಕಡೆಗೆ ಗಮನ ಹರಿಸಲು ಕಾರಣವಾದ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವೀಗ ಪತ್ತೆಯಾಗಿದ್ದು ನಾಸಾದ ಲೂನರ್‌ ರೆಕೊನೈಸೆನ್ಸ್‌ ಆರ್ಬಿಟರ್‌ (ಎಲ್‌ಆರ್‌ಒ) ಪತ್ತೆ ಮಾಡಿದ್ದು, ಫೋಟೋ ಬಿಡುಗಡೆ ಮಾಡಿದೆ. ವಿಕ್ರಮ್​​​ ಲ್ಯಾಂಡಿಂಗ್ ಮುನ್ನ ಚಂದ್ರನ ಮೇಲ್ಮೈ ಹೇಗಿತ್ತು; ಲ್ಯಾಂಡಿಂಗ್ ನಂತರ ಚಂದ್ರನ ಮೇಲ್ಮೈ ಹೇಗಿದೆ ಎಂಬ ಚಿತ್ರ ಸರೆ ಹಿಡಿಯಲಾಗಿದೆ.ಅಲ್ಲದೆ ವಿಕ್ರಮ್ ಲ್ಯಾಂಡರ್ ನ ಭಾಗಗಳು ಹಲವಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು ಎರಡು ಡಜನ್ ಸ್ಥಳಗಳಲ್ಲಿ ಹರಡಿಕೊಂಡಿವೆ ಎಂದು ತಿಳಿಸಿದೆ.

ಹೌದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಕಾಂಕ್ಷೆ ಯೋಜನೆ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವೀಗ ಪತ್ತೆಯಾಗಿದೆ. ವಿಕ್ರಮ್​​​​​ ಲ್ಯಾಂಡರ್​​​ ಪತನವಾದ ಸ್ಥಳವನ್ನು ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಲೂನಾರ್ ಆರ್ಬಿಟರ್ ಲ್ಯಾಂಡರ್‌ ವಿಕ್ರಮ್‌ ಪತ್ತೆಯಾಗಿರುವ ಬಗ್ಗೆ ವರದಿ ಮಾಡಿರುವ ನಾಸಾ ಎಲ್‌ಆರ್‍‌ಒ ಕ್ಲಿಕ್ಕಿಸಿದ ಫೋಟೊವನ್ನು ಬಿಡುಗಡೆ ಮಾಡಿದೆ. ಚಂದ್ರನ ಮೇಲೆ ನೀಲಿ ಮತ್ತು ಹಸಿರು ಡಾಟ್‌ಗಳನ್ನು ತೋರಿಸಿ ಲ್ಯಾಂಡರ್‌ ವಿಕ್ರಮ್‌ನ ಅವಶೇಷ ಮತ್ತು ಅದು ಬಿದ್ದುದರಿಂದ ಉಂಟಾದ ಪರಿಣಾಮವಿದು ಎಂದು ಹೇಳಿದೆ. ಹಸಿರು ಮಾರ್ಕ್‌ ಲ್ಯಾಂಡರ್‌ ವಿಕ್ರಮ್‌ನ ಅವಶೇಷ ಆಗಿರಬಹುದು ಎಂದಿದ್ದು, ನೀಲಿ ಡಾಟ್‌ಗಳು ಚಂದ್ರನ ನೆಲದಲ್ಲಿ ಉಂಟಾದ ತಗ್ಗುಗಳು ಎಂದಿದೆ. ಇನ್ನು ‘S’ ಎಂಬುದು ಶಣ್ಮುಗ ಸುಬ್ರಹ್ಮಣ್ಯ ಗುರುತಿಸಿದ ವಿಕ್ರಮ್‌ನ ಅವಶೇಷಗಳು ಎಂದಿದೆ.

ಈ ಹಿಂದೆ ಇಸ್ರೋದ ವಿಕ್ರಮ್​​​ ಲ್ಯಾಂಡರ್​​ ಪತನವಾದ ಸ್ಥಾನ ಪತ್ತೆ ಹಚ್ಚುವುದು ಕಷ್ಟ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದರು. ಚಂದ್ರನ ಮೇಲ್ಮೈ ವಿಕ್ರಮ್ ಲ್ಯಾಂಡರ್ ಸ್ಪರ್ಶಿಸಿದ ಪ್ರದೇಶದಲ್ಲಿ ನಾಸಾದ ಲೂನಾರ್ ಆರ್ಬಿಟರ್​​, ಕ್ಯಾಮರಾ ಸಹಾಯದಿಂದ ಚಿತ್ರಗಳನ್ನು ತೆಗೆಯುವುದು ಕಷ್ಟಸಾಧ್ಯ. ಇಲ್ಲಿ ಬೆಳಕು ಸ್ಪಷ್ಟವಾಗಿಲ್ಲದ ಕಾರಣ ವಿಕ್ರಮ್​​​ ಲ್ಯಾಂಡರ್ ಸ್ಥಾನ ಎಲ್ಲಿದೆ ಎಂದು ಗುರುತಿಸಲು ಆಗುವುದಿಲ್ಲ ಎಂದು ನಾಸಾ ತಿಳಿಸಿತ್ತು. ಜಾಗತಿಕ ಮಟ್ಟದಲ್ಲಿ ಭಾರತವನ್ನು ತಿರುಗಿ ನೋಡುವಂತೆ ಮಾಡಿದ್ದ ಇಸ್ರೋದ ಚಂದ್ರಯಾನ- 2, ಕಡೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಆದರೂ ಚಂದ್ರಯಾನ್​ – 2 ಲ್ಯಾಂಡರ್​ ‘ವಿಕ್ರಂ’ ಸುಸ್ಥಿತಿಯಲ್ಲಿದೆ ಎಂಬ ಮಾಹಿತಿಯನ್ನು ಇಸ್ರೋ ಸಂಸ್ಥೆಯೇ ನೀಡಿತ್ತು. ತನ್ನ ಹೇಳಿಕೆ ಬಳಿಕ ಲ್ಯಾಂಡರ್​ ವಿಕ್ರಂ ಜತೆ ಸಂಪರ್ಕ ಸಾಧಿಸುವ ಇಸ್ರೋ ಪ್ರಯತ್ನಕ್ಕೆ ಮೊದಲ ಹಂತದ ಯಶಸ್ಸು ಸಿಕ್ಕಿದೆ ಎಂದೇ ಭಾವಿಸಲಾಗಿತ್ತು.

ಸೆ. 26ರಂದು ನಾಸಾ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಮೊಸಾಕ್ ಚಿತ್ರವನ್ನು ಬಿಡುಗಡೆ ಮಾಡಿತ್ತು. ಶಣ್ಮುಗ ಸುಬ್ರಮಣ್ಯಂ ಎಂಬ ವ್ಯಕ್ತಿ ಎಲ್‌ಆರ್‌ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಸಂಪರ್ಕಿಸಿದರು. ಆಗ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದಿಂದ ವಾಯುವ್ಯ ದಿಕ್ಕಿನಲ್ಲಿ ಸುಮಾರು 750 ಮೀ. ದೂರದಲ್ಲಿ ಅದರ ಕೆಲ ಭಾಗಗಳು ಪತ್ತೆಯಾಗಿತ್ತು ಎಂದು ನಾಸಾ ಹೇಳಿದೆ. 3.84 ಲಕ್ಷ ಕಿ.ಮೀ ಕ್ರಮಿಸಿ ಚಂದ್ರನ ಅಂಗಳ ತಲುಪಬೇಕಿದ್ದ ಲ್ಯಾಂಡರ್ ನಿಗದಿತ ಪಥದಲ್ಲೇ ಸಾಗುತಿತ್ತು. ಕೌಂಟ್ ಡೌನ್ ಆರಂಭಗೊಂಡ ಬಳಿಕ ಲ್ಯಾಂಡರ್ ನಿಗದಿತ ಪಥದಲ್ಲಿ ಹೋಗುವುದನ್ನು ಗಮನಿಸಿದ ವಿಜ್ಞಾನಿಗಳು ಸಂತೋಷದಲ್ಲಿದ್ದರು. ಸೆಪ್ಟೆಂಬರ್ 7ರ ಬೆಳಗಿನ ಜಾವ 1.50ರ ವೇಳಗೆ ಚಂದ್ರನ ದಕ್ಷಿಣ ಧ್ರುವದಿಂದ 2.1 ಕಿ.ಮೀ ಎತ್ತರದಲ್ಲಿದ್ದಾಗ ಸಂಪರ್ಕ ಕಳೆದುಕೊಂಡಿತ್ತು.

Also read: ಮದುವೆ ಕಾರ್ಯಕ್ರಮದಲ್ಲಿ 90 ಲಕ್ಷ ರೂ. ಹಣ ಎಸೆದು ರಸ್ತೆ ಉದ್ದಕ್ಕೂ ಸಂಭ್ರಮಿಸಿದ ಕುಟುಂಬಸ್ಥರು; ಕಂತೆ ಕಂತೆ ಹಣ ನೋಡಿ ಮುಗಿಬಿದ್ದು ಆರಿಸಿಕೊಂಡ ಜನರು.!