ಪ್ರತಿಷ್ಠಿತ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಪಾಸು ಮಾಡಿದ ಅದೇ ಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಎಲ್ಲರಿಗೂ ಮಾದರಿ!!

0
384

ಮನಸ್ಸಿದರೆ ಮಾರ್ಗ ಎನ್ನುವುದು 100. ರಷ್ಟು ಸತ್ಯವಾಗಿದೆ. ಅದರಲ್ಲಿ ಓದುವ ಮತ್ತು ಸಾಧನೆ ಮಾಡುವ ಮನಸ್ಸಿದರೆ ಯಾರೇ ಆಗಲಿ ಜೀವನದಲ್ಲಿ ಮುಂದೆ ಬರುತ್ತಾರೆ. ಹಾಗೆಯೇ ಓದಲು ವಯಸ್ಸಿನ ಮಿತಿ ಎನ್ನುವುದಿಲ್ಲ, ಯಾವ ಯವಸ್ಸಿನಲ್ಲಿವೂ ಕೂಡ ಓದಿ ಸಾಧಿಸಬಹುದು, ಇದಕ್ಕೆ ಹಲವು ಉದಾಹರಣೆಗಳಿಗೆ, ಮದುವೆಯಾಗಿ ಸಂಸಾರ ಮಾಡುತಾ ಶ್ರಮದಿಂದ ಓದಿದ ಮಾಹಿಳೆಯರು ಐಎಎಸ್, ಕೆಎಎಸ್ ಪರೀಕ್ಷೆ ಪಾಸು ಮಾಡಿದ್ದಾರೆ. ಇವರ ಸಾಲಿನಲ್ಲೇ ಬರುವ ಜೆಎನ್​ಯು ವಿಶ್ವವಿದ್ಯಾಲಯದ ಸೆಕ್ಯೂರಿಟಿ ಗಾರ್ಡ್ ವಿವಿ ನಡೆಸುವ ಅರ್ಹತಾ JNU ಪರೀಕ್ಷೆಯನ್ನು ಪಾಸು ಮಾಡಿದ್ದಾನೆ.

Also read: ಇಸ್ರೇಲ್ ಮಾದರಿಯ ಕೃಷಿ ಅಳವಡಿಸಿಕೊಂಡು ಯಶಸ್ಸು ಕಂಡಿರುವ ಇವರು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿರುವ ಎಲ್ಲಾ ಯುವಕರಿಗೂ ದೊಡ್ಡ ಮಾದರಿ!!

ಹೌದು ದೇಶದ ಪ್ರತಿಷ್ಠಿತ ಶೈಕ್ಷಣಿಕ ಕೇಂದ್ರವಾದ ರಾಷ್ಟ್ರ ರಾಜಧಾನಿಯಲ್ಲಿನ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರವೇಶಾತಿ ಪರೀಕ್ಷೆಯಲ್ಲಿ ರಾಜಸ್ಥಾನ ಮೂಲದ ಸೆಕ್ಯೂರಿಟ್​ ಗಾರ್ಡ್​ ಒಬ್ಬರು ತೇರ್ಗಡೆ ಆಗಿದ್ದಾರೆ. ಈತ ವೃತ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ ರಾಮಜಲ್ ಮೀನಾ. ರಾಜಸ್ಥಾನದ ಹಳ್ಳಿಯೊಂದರಿಂದ ಬಂದು ಜೆಎನ್​ಯುನಲ್ಲಿ ಸೆಕ್ಯೂರಿಟಿ​ ಗಾರ್ಡ್​ ಆಗಿ ಕರ್ತವ್ಯ ನಿರ್ವಹಿಸುತ್ತಲ್ಲೇ ಅದೇ ವಿವಿಯ ಪ್ರವೇಶಾತಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.

Also read: ಶೂನ್ಯ ಖರ್ಚಿನಲ್ಲಿ ಬೋರ್‌ವೆಲ್ ರೀಚಾರ್ಜ್ ಕಂಡು ಹಿಡಿದ ಮಾದರಿ ರೈತ; ಬತ್ತಿ ಹೋದ ಬೋರ್‌ವೆಲ್-ಗಳಲ್ಲಿ ಮತ್ತೆ ನೀರು ಭರಿಸುವುದು ಹೇಗೆ ಅಂತ ಇಲ್ಲಿದೆ ನೋಡಿ..

ರಷ್ಯನ್​​ ಭಾಷೆಯಲ್ಲಿ ಬಿ.ಎ ಪದವಿ ಪಡೆದ ರಾಮಜಲ್​ ಮೀನ, ತನ್ನ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಮೇಲೆತ್ತಲು ಸೆಕ್ಯೂರಿಟಿ​ ಗಾರ್ಡ್​ ಕೆಲಸ ಮಾಡುತ್ತಿದ್ದಾರೆ. ಉನ್ನತ ವ್ಯಾಸಾಂಗ ಮಾಡಿ ಐಎಎಸ್ ಅಧಿಕಾರಿ ಆಗಬೇಕು ಎಂಬ ಹಂಬಲ ಹೊಂದಿದ್ದಾರೆ.ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಗ್ಗೆ ಬಳಿಕ ಮಾತನಾಡಿದ ರಾಮಜಲ್​ ಅವರು, ‘ನಾನು ರಾಜಸ್ಥಾನದ ಸಾಮಾನ್ಯ ಹಳ್ಳಿಯಿಂದ ಬಂದವನು. ಶಾಲಾ- ಕಾಲೇಜು ದಿನಗಳಲ್ಲಿ ಚೆನ್ನಾಗಿ ಓದುವ ವಿದ್ಯಾರ್ಥಿ ಆಗಿದ್ದೆ. ಆದರೆ, ಮನೆಯಲ್ಲಿ ಹಣಕಾಸಿನ ತೊಂದರೆಯಿಂದ ನನ್ನ ಶಿಕ್ಷಣ ಮುಂದುವರಿಸಲು ಆಗಲಿಲ್ಲ’

Also read: ಇಲ್ಲೊಬ್ಬ ಮಾದರಿ ಟೆಕ್ಕಿ; ಕೃಷಿಯಲ್ಲೇ ಸಾಧನೆ ಮಾಡುತ್ತಿರುವ ಇವರ ಆದಾಯ ಕೇಳಿದ್ರೆ, ಕೃಷಿ ಬಿಟ್ಟು ನಗರಕ್ಕೆ ಬರುವರಿಗೆ ಶಾಕ್ ಆಗುತ್ತೆ..

ಈಗ ನನಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಒಬ್ಬ ಮಗಳು 9 ನೇ ತರಗತಿಯಲ್ಲಿ ಓದುತ್ತಿದ್ದಾಳೆ, ಎರಡನೇ ಮಗಳು 7 ನೇ ತರಗತಿಯಲ್ಲಿ ಓದುತಿದ್ದು ಮಗ 4 ನೇ ತರಗತಿಯಲ್ಲಿ ಓದುತ್ತಿದ್ದಾನೆ, ನಾನು ಈ ವಯಸ್ಸಿನಲ್ಲಿ ನನ್ನ ಮಕ್ಕಳಿಗೆ ಓಡಿಸಬೆಕಿತ್ತು, ಆದರೆ ನನಗೂ ಮೊದಲಿನಿಂದ ಓದಿನಲ್ಲಿ ಹೆಚ್ಚಿನ ಆಸಕ್ತ ಇರುವುದರಿಂದ ಈಗ ಕೆಲಸ ಮಾಡಿಕೊಂಡೆ ಓದುತ್ತಿದ್ದೇನೆ, ನನ್ನ ಹೆಂಡತಿ ಕೂಡ ಸ್ಪೂರ್ತಿ ತುಂಬುತ್ತಿದ್ದಾಳೆ. ನನಗೆ ಮೊದಲಿನಿಂದ ಪೊಲೀಸ್ ಆಗಬೇಕು ಎನ್ನುವ ಆಸೆ ಇತ್ತು, ಆದರೆ ಮನೆಯ ಬಡತನದಿಂದ ಆಗಲಿಲ್ಲ, ಈಗ ಅವಕಾಶ ಸಿಕ್ಕಿದೆ. ಅದಕ್ಕಾಗಿ UPSC ಓದಿತ್ತೇನೆ. ಮುಂದೆ ನನ್ನ ಮಕ್ಕಳಿಗೂ ಒಳ್ಳೆಯ ಶಿಕ್ಷಣ ಕೊಡಿಸುತ್ತೇನೆ ಎಂದು ಹೇಳಿದ್ದಾರೆ.