ಅಭಿವೃದ್ಧಿ ಹೆಸರಲ್ಲಿ ಕಾಡು ನಾಶ; ಮನನೊಂದು 2 ವರ್ಷದಲ್ಲಿ 25 ಕಿರು ಅರಣ್ಯ ಸೃಷ್ಟಿಸಿದ ಸರ್ಕಾರಿ ಅಧಿಕಾರಿ, ಇಡಿ ದೇಶಕ್ಕೆ ಮಾದರಿ.!

0
363

ಇಂದಿನ ದಿನಗಳಲ್ಲಿ ರಸ್ತೆ, ರೈಲಿನ ಕಾಮಗಾರಿ, ಮೆಟ್ರೋ ಸೇರಿದಂತೆ ಹಲವು ಯೋಜನೆಗಳಿಗೆ ಸಾವಿರಾರು ಮರಗಳನ್ನು ಕಡಿಯಲಾಗುತ್ತಿದೆ. ಆದರೆ ಕಡಿದಷ್ಟು ಮರಗಳನ್ನು ಬೆಳಸಲು ಯಾರು ಮುಂದೆ ಬರುತ್ತಿಲ್ಲ, ಇದರಲ್ಲಿ ಸರ್ಕಾರ ಕೂಡ ಅಷ್ಟೊಂದು ತಲೆ ಕೆಡಸಿಕೊಳ್ಳುವುದಿಲ್ಲ, ಅದರಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಮರ ಬೆಳಸಿದರೆ ಏನೆಲ್ಲಾ ಪ್ರಯೋಜನವಂತ ತಿಳಿದಿರುತ್ತೆ ಆದರೆ ಮರ ಬೆಳಸಬೇಕು ಎನ್ನುವುದು ಮಾತ್ರ ತಿಳಿದಿರುವುದಿಲ್ಲ ಏಕೆಂದರೆ ನಾವು ಅಧಿಕಾರಿಗಳು ಕೆಲವು ಕೆಲಸಕ್ಕೆ ಮಾತ್ರ ಸೀಮಿತ ಎನ್ನುವ ಮನೋಭಾವನೆಯಿಂದ ಇಂದು ಕಾಡು ನಾಶವಾಗಿ ನಾಡು ಬೆಳಯುತ್ತಿವೆ. ಇಂತಹ ಕಾಲದಲ್ಲಿ ಇಲ್ಲೊಬ್ಬರು ಸರ್ಕಾರಿಗಳು 25 ಕಿರು ಅರಣ್ಯ ಸೃಷ್ಟಿ ಮಾಡಿ ಇಡಿ ದೇಶಕ್ಕೆ ಮಾದರಿಯಾಗಿದ್ದಾರೆ.

Also read: ಪರಿಸರ ಕಾಳಜಿಯಿಂದ 10 ಕಿ.ಮೀ ನಡೆದು ಹೋಗಿ ತರಕಾರಿ ತರುವ ಈ ಐಎಎಸ್ ಅಧಿಕಾರಿ ಪ್ರತಿಯೊಬ್ಬರಿಗೂ ಮಾದರಿ.!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಪಂಜಾಬ್‌ನ ಲೂಧಿಯಾನದಲ್ಲಿನ ಭಾರತೀಯ ಕಂದಾಯ ಸೇವೆಯ (ಐಆರ್‌ಎಸ್) ಅಧಿಕಾರಿ ರೋಹಿತ್ ಮೆಹ್ರಾ ಅವರ ಕಾರ್ಯವನ್ನು ನೋಡಿದಾಗ, ಸರ್ಕಾರಿ ಅಧಿಕಾರಿಯೊಬ್ಬರು ಹೀಗೂ ಇರುತ್ತಾರಾ? ಎಂಬ ಅನುಮಾನ, ಅಚ್ಚರಿ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತದೆ. ಲೂಧಿಯಾನದ ಐಆರ್‌ಎಸ್ ಅಧಿಕಾರಿ ರೋಹಿತ್ ಮೆಹ್ರಾ, ಕೇವಲ ಎರಡು ವರ್ಷಗಳಲ್ಲಿ 500 ಅಡಿ ಭೂಮಿಯಿಂದ ಆರಂಭಿಸಿ 4 ಎಕರೆ ಪ್ರದೇಶಗಳವರೆಗೆ 25 ಮಿನಿ ಕಾಡುಗಳನ್ನು ಸೃಷ್ಟಿಸಿದ್ದಾರೆ. ಮಾತ್ರವಲ್ಲ, ಲೂಧಿಯಾನ ರೈಲು ನಿಲ್ದಾಣದ ಬಳಿ ಮೊದಲ ಲಂಬಾಕೃತಿಯ ಉದ್ಯಾನ ನಿರ್ಮಿಸಿದ್ದ ಅವರು, ಪಂಜಾಬ್‌ನಾದ್ಯಂತ ಈಗ ಸುಮಾರು 75 ಲಂಬ ಉದ್ಯಾನಗಳನ್ನು ನಿರ್ಮಿಸಿದ್ದಾರೆ.

ಎರಡು ವರ್ಷದಲ್ಲಿ 25 ಕಿರು ಅರಣ್ಯ?

Also read: ಪೊಲೀಸರ ದೌರ್ಜನ್ಯದ ಸುದ್ದಿಗಳ ನಡುವೆ ಕದ್ದು ಸಿನೆಮಾ ನೋಡಿ ಸಿಕ್ಕಿ ಬಿದ್ದ ವ್ಯಕ್ತಿಗೆ ಜೀವನಕ್ಕೆ ದಾರಿ ಮಾಡಿ ಕೊಟ್ಟ ಈ ಪೋಲಿಸ್ ಎಲ್ಲರಿಗೂ ಮಾದರಿ!!

ಲೂಧಿಯಾನದ ಗ್ರೀನ್ ಮ್ಯಾನ್ ಆಫ್ ಲೂಧಿಯಾನ ಎಂದೇ ಖ್ಯಾತರಾಗಿರುವ 41 ವರ್ಷದ ರೋಹಿತ್ ಮೆಹ್ರಾ, ತಮ್ಮ ವೃತ್ತಿಯ ನಡುವೆ ಅರಣ್ಯ ಬೆಳೆಸುವ ಕಾರ್ಯವನ್ನು ಕರ್ತವ್ಯ ಎಂಬಂತೆ ಪಾಲಿಸುತ್ತಿದ್ದಾರೆ. ಶಾಲೆಗಳಿಗೆ ತೆರಳಿ ಮಕ್ಕಳಲ್ಲಿ ಮರಗಳ ಮಹತ್ವದ ಅರಿವು ಮೂಡಿಸಿದ್ದಾರೆ. ಕೈಗಾರಿಕೋದ್ಯಮಿಗಳನ್ನೂ ಅವರು ಬಿಟ್ಟಿಲ್ಲ. ಕಾರ್ಖಾನೆಗಳು, ಉದ್ಯಮ ಸಂಸ್ಥೆಗಳಿರುವಲ್ಲಿ ಮರಗಳನ್ನು ಬೆಳೆಸಲು ಮನವಿ ಮಾಡಿದ್ದಾರೆ. ಲೂಧಿಯಾನದಿಂದ 40 ಕಿ.ಮೀ. ದೂರದಲ್ಲಿರುವ ಜಾಗ್ರಾವುನ್ ಎಂಬಲ್ಲಿ ಕೈಗಾರಿಕೋದ್ಯಮಿಯೊಬ್ಬರು ತಮ್ಮ 6,000 ಚದರ ಅಡಿ ಅಗಲದ ನಿವೇಶನವನ್ನು ಅರಣ್ಯವನ್ನಾಗಿ ಪರಿವರ್ತಿಸವಂತೆ ಅವರನ್ನು ಕೋರಿದ್ದಾರೆ ಎಂದರೆ ಅವರು ಬೀರಿರುವ ಪ್ರಭಾವ ಅರ್ಥವಾಗಬಹುದು. ‘ಜನರು ಈ ವರ್ಟಿಕಲ್ ಗಾರ್ಡನ್‌ಗಳ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದ್ದಾರೆ. ಅಲ್ಲದೆ, ತಮ್ಮ ಜಮೀನುಗಳಲ್ಲಿನ ಉಳಿದ ಭಾಗಗಳನ್ನು ಅರಣ್ಯವನ್ನಾಗಿ ಪರಿವರ್ತಿಸಿಕೊಡವಂತೆಯೂ ಕೋರುತ್ತಿದ್ದಾರೆ’ ಎಂದು ರೋಹಿತ್ ಸಂತಸದಿಂದ ತಿಳಿಸಿದ್ದಾರೆ.

ಕಾಡು ಬೆಳಸುವ ಅರಿವಿಗೆ ಈ ಘಟನೆ ಸಾಕ್ಷಿ;

Also read: ಕಡಿಯುತ್ತಿರುವ ಮರಗಳನ್ನು ಬುಡಸಮೇತ ತೆಗೆದು ಸ್ಥಳಾಂತರ ಮಾಡಿ ಇನ್ನೊಂದೆಡೆ ನೆಟ್ಟು ಮರಗಳನ್ನು ಬದುಕಿಸುತ್ತಿರುವ ಬೆಳಗಾವಿಯ ಯುವಕ.!

ಲೂಧಿಯಾನವು ಕೈಗಾರಿಕೆಗಳ ಕೇಂದ್ರ. ಹೀಗಾಗಿ ಇಲ್ಲಿ ಮಾಲಿನ್ಯದ ಪ್ರಮಾಣ ವಿಪರೀತ. ಕೆಲವೊಮ್ಮೆ ವಾಯುಮಾಲಿನ್ಯ ಮಿತಿಮೀರಿದಾಗ ಶಾಲಾ ಕಾಲೇಜುಗಳಿಗೆ ಸತತವಾಗಿ ನಾಲ್ಕೈದು ದಿನ ರಜೆ ಘೋಷಿಸಿದ್ದೂ ಇದೆ. ‘ಎರಡು ವರ್ಷದ ಹಿಂದೆ ನನ್ನ ಮಗ ಉದಯ್, ರಜೆ ಕಳೆಯಲು ಹೊರಗೆ ಹೋಗಬೇಕೆಂದು ಹೇಳಿದ. ನನಗೆ ಆಶ್ಚರ್ಯವಾಯಿತು. ಏಕೆಂದರೆ ಅದು ಶಾಲೆಗಳಿಗೆ ರಜೆಗಳನ್ನು ನೀಡುವ ಸಮಯವಲ್ಲ. ಹೊಗೆ ಮತ್ತು ಮಾಲಿನ್ಯದ ಕಾರಣ ಆತನ ಶಾಲೆಗೆ ಕೆಲವು ದಿನ ರಜೆ ಘೋಷಿಸಲಾಗಿತ್ತು. ಈ ಘಟನೆ ನನಗೆ ಸಮಸ್ಯೆಯ ಕುರಿತು ಗಮನ ಹರಿಸುವಂತೆ ಮಾಡಿತು’ ಎಂದು ಅವರು ಹೇಳಿದ್ದಾರೆ.

ಆರಂಭದಲ್ಲಿ ರೋಹಿತ್ ಅವರಿಗೆ ಅಂತಹ ಕಾಡುಗಳನ್ನು ಸೃಷ್ಟಿಸುವ ತಿಳಿವಳಿಕೆ ಇರಲಿಲ್ಲ. ಆದರೂ ಕಡಿಮೆ ಅವಧಿಯಲ್ಲಿ ಕಿರುಕಾಡುಗಳನ್ನು ಹೇಗೆ ಸೃಷ್ಟಿಸಬಹುದು ಎಂಬ ಬಗ್ಗೆ ಅಧ್ಯಯನ ನಡೆಸಲಾರಂಭಿಸಿದರು. ಆಗ ಅವರಿಗೆ ಸಿಕ್ಕಿದ್ದು, ಜಪಾನ್‌ನ ಮಿಯಾವಕಿ ಎಂಬ ತಂತ್ರ. ಮರಗಳು ವೇಗವಾಗಿ ಬೆಳೆಯುವಂತೆ ಮಾಡುವ ತಾಂತ್ರಿಕ ಜ್ಞಾನಗಳನ್ನು ಪಡೆದುಕೊಂಡ ಅವರು, ಗಿಡ ಹಾಗೂ ಕಾಡುಗಳನ್ನು ಬೆಳೆಸುವ ಪ್ರಾಚೀನ ಭಾರತದ ವಿಜ್ಞಾನವನ್ನು ಅರಿಯುವ ವೃಕ್ಷಾಯುರ್ವೇದದಂತಹ ಕೃತಿಗಳನ್ನು ಕೂಡ ಓದಿದ್ದರು. ಒಂದೇ ಜಾಗದಲ್ಲಿ ವಿಭಿನ್ನ ಮರಗಳನ್ನು ಬೆಳೆಸುವುದು ಕೂಡ ಅವರ ಉದ್ದೇಶ. ಬೇವು, ನಲ್ಲಿ, ಗುಲ್‌ಮೊಹರ್, ಹೊನ್ನೆ, ಜಾಯಿಕಾಯಿ, ಆಲದಮರ ಹೀಗೆ ನಾನಾ ವಿಧದ ಮರಗಳನ್ನು ಬೆಳೆಸುತ್ತಿದ್ದಾರೆ.

Also read: ಯೂಟ್ಯೂಬ್ ಚಾನೆಲ್ ತೆರೆದು ಬಂದ ಹಣದಿಂದ 1200 ಅನಾಥ ಮಕ್ಕಳಿಗೆ ವಿಶೇಷ ಅಡುಗೆ ತಿಂಡಿಗಳನ್ನು ಮಾಡಿ ಕೊಡುತ್ತಿರುವ ಮಾದರಿ ವ್ಯಕ್ತಿ..

ಇದೆಲ್ಲವನ್ನು ನೋಡಿ ಸಾರ್ವಜನಿಕರು ಸಂಸ್ಥೆಗಳು ಮತ್ತು ಸಂಘಟನೆಗಳು ಕೂಡ ತಮ್ಮ ಸ್ವಂತ ಭೂಮಿಯನ್ನು ಅರಣ್ಯವಾಗಿ ಪರಿವರ್ತಿಸಲು ಕೋರಿ ರೋಹಿತ್ ಅವರನ್ನು ಭೇಟಿ ಮಾಡುತ್ತಿದ್ದಾರೆ. ‘ತಮ್ಮ ಫಾರ್ಮ್‌ಹೌಸ್‌ಅನ್ನು ಕಾಡನ್ನಾಗಿ ಬದಲಿಸಲು ಒಬ್ಬ ಕೈಗಾರಿಕೋದ್ಯಮಿ ನನ್ನನ್ನು ಸಂಪರ್ಕಿಸಿದ್ದರು. ಶ್ವಾಸಕೋಶದ ಸಮಸ್ಯೆ ಹೊಂದಿದ್ದ ಅವರ ತಾಯಿಗೆ ಒಳ್ಳೆಯ ಗಾಳಿ ನೀಡಲು ತಮ್ಮ ಅರ್ಧ ಎಕರೆ ಭೂಮಿಯನ್ನು ಕಿರು ಅರಣ್ಯವನ್ನಾಗಿ ಪರಿವರ್ತಿಸಲು ಕೋರಿದ್ದರು’ ಎಂದು ರೋಹಿತ್ ಹೇಳುತ್ತಾರೆ. ಒಟ್ಟಾರೆಯಾಗಿ ಒಂದೇ ಪ್ರದೇಶದಲ್ಲಿ ಒಬ್ಬ ಇಂತಹ ಅಧಿಕಾರಿಗಳು ಹುಟ್ಟಿದರೆ ಕಳೆದುಕೊಂಡು ಕಾಡನ್ನು ಮತ್ತೆ ಪಡೆಯಬಹುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522