ಮೇಲುಕೋಟೆಯ ಚೆಲುವರಾಯಸ್ವಾಮಿ ದೇವಸ್ಥಾನ ಪ್ರಸಿದ್ಧ ಧಾರ್ಮಿಕ ಕೇಂದ್ರ

0
1729

Kannada News | Karnataka Temple History

ಮೇಲುಕೋಟೆಯ ಚೆಲುವರಾಯಸ್ವಾಮಿ ದೇವಸ್ಥಾನ ಪ್ರಸಿದ್ಧ ಧಾರ್ಮಿಕ ಕೇಂದ್ರ

ದೇಗುಲಗಳ ನಾಡು ಮೇಲುಕೋಟೆ  ಚೆಲುವನಾರಾಯಣ ಸ್ವಾಮಿ ದೇವಸ್ಥಾನ,ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ನರಸಿಂಹಸ್ವಾಮಿ ದೇವಸ್ಥಾನ.

melukote 3

 

ಮೇಲುಕೋಟೆಯು ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಒಂದು ಹಳ್ಳಿ ಹಾಗೂ ಪ್ರಸಿದ್ಧ ಯಾತ್ರಾ ಸ್ಥಳ. ಇಲ್ಲಿರುವ ಹೊಯ್ಸಳರು ಕಟ್ಟಿಸಿದ ಚೆಲುವರಾಯಸ್ವಾಮಿ ದೇವಸ್ಥಾನ ಪ್ರಸಿದ್ಧ ಧಾರ್ಮಿಕ ಕೆಂದ್ರ. ಮೇಲು ಕೋಟೆಯು ಜಿಲ್ಲಾ ಕೇಂದ್ರ ಸ್ಥಳ ಮಂಡ್ಯದಿಂದ ಸುಮಾರು ೩೭ ಕಿ.ಮೀ ದೂರದಲ್ಲಿದೆ. ಇದು ಶ್ರೀವೈಷ್ಣವ ಪಂಥದ ಒಂದು ಕೇಂದ್ರ. ಇಲ್ಲಿ ಬೆಟ್ಟದ ಮೇಲೆ ಯೋಗ ನರಸಿಂಹಸ್ವಾಮಿಯ ದೇವಸ್ಥಾವಿದೆ. ಈ ಹಳ್ಳಿ ಸಂಸ್ಕೃತ ಪಾಠ ಶಾಲೆಗೂ ಹೆಸರುವಾಸಿ.

melukote.2

ಮೇಲುಕೋಟೆಯ ದೇವಾಲಯಗಳು

1)ಚೆಲುವನಾರಾಯಣ ಸ್ವಾಮಿ ದೇವಸ್ಥಾನ, 2)ಯೋಗಾನರಸಿಂಹ ಸ್ವಾಮಿ ದೇವಸ್ಥಾನ, 3)ಬದರಿ ನಾರಾಯಣ ದೇವಾಲಯ, 4)ಪಟ್ಟಾಭಿರಾಮ ದೇವಾಲಯ, 5)ಶಾಂಡಿಲ್ಯದ ಸನ್ನಿಧಿ, 6)ಕುಲಶೇಖರ್ ಆಳ್ವಾರ್ ಸನ್ನಿಧಿ, 7)ಜೀಯರ್ ಸನ್ನಿಧಿ, 8)ವೇದಾಂತದೇಶಿಕರ ಸನ್ನಿಧಿ, 9)ಕೇಶವ ದೇವರ ಸನ್ನಿಧಿ, 10)ನಂಜೀಯರ್ ಸನ್ನಿಧಿ, 11)ಮಾರಮ್ಮನ ಸನ್ನಿಧಿ, 12)ಪೇಟೆ ಆಂಜನೇಯ ಸನ್ನಿಧಿ, 13)ನಮ್ಮಾಳ್ವಾರ್ ಗುಡಿ, 14)ತಿರುಮಂಗೈ ಆಳ್ವಾರ್ ಗುಡಿ, 15)ಪೇಟೆ ಕೃಷ್ಣದೇವರ ಗುಡಿ, 16)ಸೀತಾರಣ್ಯ ಕ್ಷೇತ್ರ, 17)ಕರಣಿಕ ನಾರಾಯಣನ ಗುಡಿ, 18)ವೆಂಕಟೇಶ್ವರ ಗುಡಿ, 19)ಪರಕಾಲ ಮಠ, 20)ಅಹೋಬಲ ನರಸಿಂಹ ಸ್ವಾಮಿ ಸನ್ನಿಧಿ, 21)ಆದಿಶೇಷ ಸನ್ನಿಧಿ, 22)ಪಂಚ ಭಾಗವತ ಕ್ಷೇತ್ರ ಸನ್ನಿಧಿ, 23)ಪೇಯಾಳ್ವಾರ್ ಸನ್ನಿಧಿ, 24)ವರಾಹ ದೇವಾಲಯ, 25)ಬಿಂದು ಮಾಧವ ದೇವಾಲಯ, 26)ಹನುಮಾನ್ ದೇವಾಲಯ, 27)ಹಯಗ್ರೀವ ಸನ್ನಿಧಿ, 28)ಲಕ್ಷ್ಮಿ ನಾರಾಯಣ ಸನ್ನಿಧಿ, 29)ದತ್ತ ನಾರಾಯಣ ಗುಡಿ, 30)ವರಸಿದ್ದಿ ವಿನಾಯಕ (ಏಕಶಿಲೆ ಗಣಪ), 31)ಕೇಶವ (ನಯನಕ್ಷೇತ್ರ), 32)ಶನೇಶ್ವರ ಗುಡಿ, 33)ಕವಿಗಲ್ ಆಂಜನೇಯ ಗುಡಿ, 34)ಕರಮೆಟ್ಟಿಲು ಆಂಜನೇಯ ಗುಡಿ, 35)ಮೂಡ ಬಾಗಿಲು ಆಂಜನೇಯ ಗುಡಿ, 36)ರಾಯರಗೋಪುರ ಆಂಜನೇಯ ಗುಡಿ, 37)ಶ್ರೀನಿವಾಸ ದೇವಾಲಯ, 38)ಸುಗ್ರೀವನ ಗುಡಿ, 39)ಕಾಳಮ್ಮನ ಗುಡಿ, 40)ಗರುಡ ದೇವರ ಗುಡಿ, 41)ಆಂಜನೇಯ ಗುಡಿ(ಅಕ್ಕ ತಂಗಿಯರ ಹೊಂಡ), 42)ಹೊರತಮ್ಮನ ದೇವಾಲಯ, 43)ಶಿವನ ಗುಡಿ(ಉಳ್ಳಿಬಾವಿ).

Melukote_1

 

Also read: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹುಲಿಗೆಮ್ಮ ದೇವಿ