ಅಂತೂ-ಇಂತೂ ಬೆಂಗಳೂರಿಗೆ ಮೆಮೂ ರೈಲು ಬಂತು.

0
1770

ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ವಿವಿಧ ಹೊಸ ರೈಲು ಸೇವೆಗಳು ಮತ್ತು ರೈಲ್ವೇ ಯೋಜನೆಗೆ ಚಾಲನೆ ಮಾಡಿದರು. ಮೆಜೆಸ್ಟಿಕ್‍ನಲ್ಲಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರಾಮನಗರ ನಡುವೆ ಮೆಮೂ (ಮೈನ್ ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲು ಓಡಾಡಲಿದೆ ಎಂದು ತಿಳಿಸಿದರು.

ಬೆಂಗಳೂರಿನಿಂದ ರಾಮನಗರದವರೆಗೂ ರೈಲು ಸಂಚಾರಿಸಲಿದೆ. ಪರಿಣಾಮ ಈ ಭಾಗದ ರಸ್ತೆ ಮೇಲಿನ ವಾಹನಗಳ ಒತ್ತಡ ಕಡಿಮೆ ಆಗೋ ನಿರೀಕ್ಷೆ ಇದೆ.

ಬೆಂಗಳೂರು ರಾಮನಗರ, ಬೆಂಗಳೂರು ವೈಟ್ ಫೀಲ್ಡ್ ಮತ್ತು ಬೆಂಗಳೂರು ಕೆ. ಆರ್ ಪುರಂ ಗೆ ಮೆಮೂ ರೈಲ್ವೇ ಸೇವೆ ದೊರೆಯಲಿದೆ. ಇದರ ಪರಿಣಾಮ ಆಯಾ ಭಾಗದ ರಸ್ತೆ ಮೇಲಿನ ವಾಹನಗಳ ಒತ್ತಡ ಕಡಿಮೆ ಆಗೋ ನಿರೀಕ್ಷೆ ಇದೆ. ಈ ಟ್ರೈನ್ ಹೆಚ್ಚಾಗಿ ಉದ್ಯೋಗ ಅರಿಸಿ ನಗರಕ್ಕೆ ನಿತ್ಯ ಆಗಮಿಸುವ ಪ್ರಯಾಣಿಕರಿಗೆ ಉಪಯುಕ್ತವಾಗಲಿದ್ದು, ಕಡಿಮೆ ದರದಲ್ಲಿ, ಟ್ರಾಫಿಕ್ ಕಿರಿಕ್ ಇಲ್ಲದೇ ಪ್ರಯಾಣಿಸೊದು ಸುಲಭ ಅನ್ನೊದು ಖುಷಿಯ ಸಂಗತಿ.

ಅಲ್ಲದೇ ಓವರ್ ನೈಟ್ ಬೆಂಗಳೂರು ಶಿವಮೊಗ್ಗ ಹೊಸ ರೈಲು ಸೇವೆ ಇಂದು ಚಾಲನೆ ದೊರೆತಿದೆ. ಬೆಂಗಳೂರು ಉಪನಗರಿ ರೈಲು ಸಂಬಂಧ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮತ್ತು ಬೈಯಪ್ಪನಹಳ್ಳಿ ರೈಲ್ವೆ ಕೋಚಿಂಗ್ ಟರ್ಮಿನಲ್‍ಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಮೆಮೂ ರೈಲು ಸೇವೆಯ ವಿವರ ಇಂತಿದೆ:

1) ಬೆಂಗಳೂರು ಸಿಟಿ – ರಾಮನಗರಂ – ಬೆಂಗಳೂರು ಸಿಟಿ
ಪ್ರತಿದಿನ ಮೂರು ಬಾರಿ ಸಂಚಾರ (ಭಾನುವಾರ ಹೊರತುಪಡಿಸಿ)
ರೈಲಿನ ಸಂಖ್ಯೆ (66535 ,66536,66537,66538,)

2) ಬೆಂಗಳೂರು ಸಂಗೊಳ್ಳಿ ರಾಯಣ್ಣ ನಿಲ್ದಾಣ – ವೈಟ್ ಫಿಲ್ಡ್ – ಬೆಂಗಳೂರು ಸಂಗೊಳ್ಳಿ ರಾಯಣ್ಣ
ದಿನಕ್ಕೆ ಒಂದು ಬಾರಿ ಸಂಚಾರ ಭಾನುವಾರ ಹೊರತುಪಡಿಸಿ
ರೈಲಿನ ಸಂಖ್ಯೆ – 66542,66541

3) ಬೆಂಗಳೂರು ಸಂಗೊಳ್ಳಿ ರಾಯಣ್ಣ ನಿಲ್ದಾಣ – ಕುಪ್ಪಂ- ಬೆಂಗಳೂರು ಸಂಗೊಳ್ಳಿ ರಾಯಣ್ಣ ನಿಲ್ದಾಣ
ದಿನಕ್ಕೆ ಒಂದು ಬಾರಿ ಸಂಚಾರ ( ಭಾನುವಾರ ಹೊರತುಪಡಿಸಿ)
ರೈಲಿನ ಸಂಖ್ಯೆ – 66544,66543

4)ಬೆಂಗಳೂರು – ಶಿವಮೊಗ್ಗ ( ರಾತ್ರಿ)
ವಾರದಲ್ಲಿ ಮೂರು ದಿವಸ
ಭಾನುವಾರ ಹೊರತುಪಡಿಸಿ
ರೈಲಿನ ಸಂಖ್ಯೆ – 16581,16582