ಮೆಣಸಿನಕಾಯಿ ಬಜ್ಜಿ ಮಾಡುವ ವಿಧಾನ

0
2389

ಮಂಡಕ್ಕಿ ಜೊತೆ ಸಂಜೆ ಟೀ ಸಮಯದಲ್ಲಿ ಬಿಸಿಯಾಗಿ ಸವಿಯಲಿ ರುಚಿಯಾದ ಮೆಣಸಿನಕಾಯಿ ಬಜ್ಜಿ ಮಾಡಿ ಸವಿಯಿರಿ…

ಬೇಕಾಗುವ ಸಾಮಗ್ರಿ:

ಬೋಂಡಾ ಮೆಣಸಿನಕಾಯಿ-6,

ಕಡಲೆಹಿಟ್ಟು-1 ಸಣ್ಣ ಕಪ್,

ಉಪ್ಪು-ರುಚಿಗೆ ತಕ್ಕಷ್ಟು,

ಸೋಡಾ-ಚಿಟಿಕೆ,

ಎಣ್ಣೆ-ಕರಿಯಲು,

ಅಕ್ಕಿಹಿಟ್ಟು-1/2 ಚಮಚ,

ಅಜವಾನ-1/4 ಚಮಚ,

ಈರುಳ್ಳಿ-1,

ಜೀರಿಗೆ ಪುಡಿ-1/2 ಚಮಚ,

ನಿಂಬೆಹಣ್ಣು-1/2 ಹೋಳು,

ಬೆಳ್ಳುಳ್ಳಿ ಪೇಸ್ಟ್-1/2 ಚಮಚ.

ಮಾಡುವ ವಿಧಾನ:

ಕಡಲೆಹಿಟ್ಟಿಗೆ ಉಪ್ಪು, ಸೋಡಾ, ಅಜವಾನ, ಅಕ್ಕಿಹಿಟ್ಟು, ಬಿಸಿ ಎಣ್ಣೆ, ನೀರು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಳ್ಳಿ. ಮೆಣಸಿನಕಾಯಿಯ ತುದಿ ಸ್ವಲ್ಪವೇ ಕತ್ತರಿಸಿ ತೆಗೆದು ಮೆಣಸಿನಕಾಯಿಯ ಮೇಲೆ ಒಂದು ಕಡೆ ಸೀಳಿ ಇದರೊಳಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಉದ್ದಕ್ಕೆ ಸೀಳಿದ ಮೆಣಸಿನಕಾಯಿಯೊಳಗೆ ತುಂಬಿ, ಬೆಳ್ಳುಳ್ಳಿ, ಚಿಟಿಕೆ ಉಪ್ಪು, ಜೀರಿಗೆ ಪುಡಿ ಉದುರಿಸಿ ಮುಚ್ಚಿ. ಕಲಸಿದ ಹಿಟ್ಟಿನಲ್ಲಿ ಅದ್ದಿ ಸೀಳಿದ ಹಿಂಭಾಗ ಬಟ್ಟಲಿಗೆ ಸವರಿ ಸ್ವಲ್ಪ ಮೆಣಸಿನಕಾಯಿ ಕಾಣುವಂತೆ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. ಎಲ್ಲಾ ಮೆಣಸಿನಕಾಯಿಗಳು ಇದೇ ರೀತಿ ಮಸಾಲೆ ತುಂಬಿ ಎಣ್ಣೆಯಲ್ಲಿ ಕರಿದು ತೆಗೆದು ಟಿಶ್ಶೂ ಹಾಳೆಯ ಮೇಲೆ ಹರಡಿ.

ಮಂಡಕ್ಕಿಯ ಜೊತೆ ಸಂಜೆ ಟೀ ಸಮಯದಲ್ಲಿ ಬಿಸಿಯಾಗಿ ಸವಿಯಲು ರುಚಿ. (ಮೆಣಸಿನಕಾಯಿಯೊಳಗೆ ಈರುಳ್ಳಿ ತುಂಬಿ ಮೇಲೆ 2 ಹನಿ ನಿಂಬೆರಸ ಹಾಕಿ ಮುಚ್ಚಿ ಕರಿಯಿರಿ) ಮೇಲೆ ನೋಡಲು ಸಾದಾ ಮಿರ್ಚಿಯಂತೆ ಕಂಡರೂ ತಿಂದು ನೋಡಿದರೆ ಮಸಾಲೆ ರುಚಿ ತಿಳಿಯುತ್ತದೆ.