ಮೆಂತೆ ಸೊಪ್ಪಿನ ದೋಸೆ ಆರೋಗ್ಯಕ್ಕೂ ಸೈ ರುಚಿಗೂ ಸೈ ಹೇಗೆ ಮಾಡೋದು ಅಂತೀರಾ ಇಲ್ಲಿ ನೋಡಿ..!

0
2242

ಈ ಚಳಿಗಾಲದಲ್ಲಿ ಮೆಂತೆ ಸೇವನೆ ಮಾಡಿದರೆ ನೀವು ಹೆಚ್ಚು ಬಿಸಿಯಾಗಿರುತ್ತೀರಿ. ಇದರಿಂದ ಹಲವಾರು ಆರೋಗ್ಯರ ಪ್ರಯೋಜನಗಳು ಇವೆ. ಬೆಳಗಿನ ಉಪಹಾರಕ್ಕೆ ತಯಾರಿಸಬಹುದಾದ ರುಚಿಕರವಾದ ಮತ್ತು ಆರೋಗ್ಯಕ್ಕೂ ಒಳ್ಳೆಯದಾದ ಮೆಂತೆ ಸೊಪ್ಪಿನ ದೋಸೆ ಮಾಡುವ ವಿಧಾನ.

ಬೇಕಾಗುವ ಸಾಮಗ್ರಿಗಳು

 • ಮೆಂತೆ ಸೊಪ್ಪು ಒಂದು ಕಟ್ಟು
 • ದೋಸೆ ಅಕ್ಕಿ- 1 ಕಪ್‌
 • ಉದ್ದಿನ ಬೇಳೆ- ಕಾಲು ಕಪ್‌
 • ಉಪ್ಪು – ಸ್ವಲ್ಪ
 • ಸಕ್ಕರೆ – ಒಂದು ಚಮಚ
 • ಎಣ್ಣೆ- ದೋಸೆ ಹುಯ್ಯಲು
 • ತಿಂಡಿ ರೆಡಿ

ಮಾಡುವ ವಿಧಾನ

 1. ಮೊದಲು ಅಕ್ಕಿ ಹಾಗೂ ಉದ್ದಿನ ಬೆಳೆ ಯನ್ನು ಬೇರೆ ಬೇರೆಯಾಗಿ ನೆನೆಹಾಕಿಕೊಳ್ಳಿ.
 2. 5 ಗಂಟೆಗಳ ಅನಂತರ ನೆನೆಹಾಕಿದ ಅಕ್ಕಿ ಮತ್ತು ಉದ್ದು ಸೇರಿಸಿ ಅದಕ್ಕೆ ಸಣ್ಣಗೆ ಹೆಚ್ಚಿದ ಮೆಂತೆ ಸೊಪ್ಪು ಹಾಕಿ ರುಬ್ಬಿಕೊಳ್ಳಿ.
 3. ಇದನ್ನು ಒಂದು ರಾತ್ರಿ ಹಾಗೆಯೇ ಬಿಡಿ.
 4. ಮರುದಿನ ಬೆಳಗ್ಗೆ ದೋಸೆ ಹಿಟ್ಟಿಗೆ ಬೇಕಾದಷ್ಟು ಉಪ್ಪು ಮತ್ತು ಸಕ್ಕರೆ ಸೇರಿಸಿ ದೋಸೆ ಹುಯ್ಯಿರಿ.

ದೋಸೆಯನ್ನು ಎರಡೂ ಕಡೆ ಮಗುಚಿ ಗರಿಗರಿಯಾಗಿ ತೆಗೆದರೆ ಮೆಂತೆ ಸೊಪ್ಪಿನ ದೋಸೆ ಸವಿಯಲು ಸಿದ್ಧ.