ಸಂಜೆ ಹೊತ್ತಿನ ಕುರುಕ್ ತಿಂಡಿಗೆ ಆರೋಗ್ಯಕರವಾದ ಈ ಮೆಂತ್ಯ ಸೊಪ್ಪಿನ ಆಂಬೊಡೆ ಮಾಡೋದನ್ನು ಕಲಿಯಿರಿ!!

0
1743

ಬೇಕಾಗುವ ಸಾಮಗ್ರಿ:

beauty-tips-2-6
source: ladycarehealth.com

ನೆನೆಸಿದ ಕಡಲೆಬೇಳೆ-1/2 ಕಪ್,

ಮೆಂತ್ಯೆ ಸೊಪ್ಪು-ಸ್ವಲ್ಪ(ಕಾಲು ಕಟ್ಟು),

ಹಸಿಮೆಣಸಿನಕಾಯಿ-2,

ಕಾಯಿ-ಅರ್ಧ ಹೋಳು,

ಶುಂಠಿ-1 ತುಂಡು,

ಇಂಗು-ಸ್ವಲ್ಪ,

ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:

ಸೊಪ್ಪನ್ನು ಬಿಟ್ಟು ಉಳಿದೆಲ್ಲ ಪದಾರ್ಥಗಳನ್ನು ತರಿತರಿಯಾಗಿ ರುಬ್ಬಿ. ಕೊನೆಯಲ್ಲಿ ಹೆಚ್ಚಿದ ಮೆಂತ್ಯೆ ಸೊಪ್ಪನ್ನು ಸೇರಿಸಿ ಒಂದು ಸುತ್ತು ರುಬ್ಬಿ. ಈ ಹಿಟ್ಟಿನ ಚಿಕ್ಕ ಚಿಕ್ಕ ಉಂಡೆಗಳಲ್ಲಿ ವಡೆ ಮಾಡಿಕೊಂಡು ಬಿಸಿ ಎಣ್ಣೆಯಲ್ಲಿ ಕರಿಯಿರಿ. ಬೇಕಿದ್ದರೆ ಮೆಂತ್ಯೆ ಸೊಪ್ಪಿನ ಬದಲಿಗೆ ಸಬ್ಸಿಗೆ ಸೊಪ್ಪನ್ನು ಬಳಸಬಹುದು.

ಮಾಡುವ ವಿಧಾನ: ಕಡಲೆಬೇಳೆ 2 ಗಂಟೆ ನೆನೆಸಿಡಿ. ಮೊದಲಿಗೆ ಶುಂಠಿ, ಹಸಿಮೆಣಸು (ಬೇಕಾದರೆ 2 ಬೆಳ್ಳುಳ್ಳಿ ಎಸಳು) ಜೊತೆಗೆ ರುಬ್ಬಿಕೊಳ್ಳಿ (ತುಂಬಾ ಪೇಸ್ಟ್ ಆಗುವುದು ಬೇಡ)
ಅದನ್ನು ತೆಗೆದು ಬೌಲ್ ಗೆ ಹಾಕಿಕೊಳ್ಳಿ. ನಂತರ ಕಡಲೆಬೇಳೆಯನ್ನು ನೀರಿನಿಂದ ತೆಗೆದು ತರಿತರಿಯಾಗಿ ರುಬ್ಬಿ ತೆಗೆದಿಟ್ಟುಕ್ಕೊಳ್ಳಿ. ಈ ತರಿಯೊಟ್ಟಿಗೆ ಶುಂಠಿಯ ಪೇಸ್ಟ್ ಹಾಕಿ,
ಇದರೊಟ್ಟಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ತೆಂಗಿನಕಾಯಿ, ಕರಿಬೇವು, ಪುದಿನ, ಉಪ್ಪು, ಇಂಗು ಎಲ್ಲವನ್ನು ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ (ನೀರು ಹಾಕಬೇಡಿ). ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ (ಮೀಡಿಯಂ flame). ಈಗ ಕಲಸಿ ಇಟ್ಟು ಕೊಂಡ ಆಂಬೊಡೆ ಮಿಕ್ಸ್ ನ್ನು ಸಣ್ಣ ನಿಂಬೆ ಹಣ್ಣಿನ ಗಾತ್ರದಲ್ಲಿ ತೆಗೆದುಕೊಂಡು ಅಂಗೈಯಲ್ಲಿ ತಟ್ಟಿ ಕಾದ ಎಣ್ಣೆಗೆ ಹಾಕಿ ಕರಿಯಿರಿ (ಕಂದು ಬಣ್ಣಕ್ಕೆ ತಿರುಗುವ ತನಕ). ಎಣ್ಣೆಯಿಂದ ತೆಗೆದು ಸ್ವಲ್ಪ ತಣಿದ ನಂತರ ಗರಿಗರಿಯಾದ ಆಂಬೊಡೆ ನೀವೂ ತಿನ್ನಿ, ಪ್ರಿಯರಿಗೂ ತಿನ್ನಿಸಿ. ಚಳಿಗಾಲದಲ್ಲಿ ಕಾಫಿ ಯಾ ….. ಜೊತೆ ತಿನ್ನಲು ಬಹಳ ಖುಶಿ.

ambode