ಚುನಾವಣೆ ಗಿಮಿಕ್; ಇಂದಿರಾ ಕ್ಯಾಂಟೀನ್‌ ಮೆನು ಬದಲಾವಣೆ, ರುಚಿ ರುಚಿಯಾದ ಊಟ ಉಪಹಾರ..

0
357

ಉದ್ಯಾನನಗರಿ ಜನತೆಗೆ ಕಡಿಮೆ ದರದಲ್ಲಿ ಊಟ-ತಿಂಡಿ ಒದಗಿಸಲು ಸರ್ಕಾರ ಜಾರಿಗೆ ತರುತ್ತಿರುವ ಮಹತ್ವಾಕಾಂಕ್ಷಿ ‘ಇಂದಿರಾ ಕ್ಯಾಂಟೀನ್‌’ ನಿಂದ ಬಹಳಷ್ಟು ಜನರಿಗೆ ಅನುಕೂಲವಾಗಿತ್ತು. ಆದರೆ ಕಳಪೆ ಗುಣಮಟ್ಟದ ಊಟ ನೀಡುತ್ತಿರುವ ಸಂಬಂಧ ಇಂದಿರಾ ಕ್ಯಾಂಟೀನ್ ಸ್ವಲ್ಪ ದಿನಗಳ ಹಿಂದೆ ಸುದ್ದಿಯಲ್ಲಿತ್ತು, ಊಟ ಮಾಡಿದವರು ಆಸ್ಪತ್ರೆಗೆ ಸೇರುವ ಪರಿಸ್ಥಿತಿ ಇದೆ ಎನ್ನುವ ದೂರುಗಳು ಕೇಳಿ ಬರುತ್ತಿದ್ದವು. ಮತ್ತು ಸರಿಯಾದ ರೀತಿಯಲ್ಲಿ ಅಡುಗೆ ಮೆನು ಕೂಡ ನಿರ್ವಹಿಸುತ್ತಿರಲಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈಗ ಚುನಾವಣೆ ಎಫೆಕ್ಟ್- ನಿಂದ ಇಂದಿರಾ ಕ್ಯಾಂಟೀನ್ ಮೆನು ಕೂಡ ಚೇಂಜ್ ಆಗಿದೆ ಎನ್ನುವ ವಿಚಾರಗಳು ಕೇಳಿಬರುತ್ತಿವೆ.

Also read: ಕರ್ನಾಟಕದ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಇಂದಿರಾ ಕ್ಯಾಂಟೀನ್-ನ ಊಟ ತಿನ್ನಲು ಯೋಗ್ಯವಾಗಿದ್ಯ?? ಈ ರಿಪೋರ್ಟ್ ನೋಡಿ ಖಂಡಿತ ಶಾಕ್ ಆಗ್ತೀರ!!/a>

ಲೋಕಸಭಾ ಚುನಾವಣೆ ಬೆನ್ನಲ್ಲೇ ರುಚಿಯಾದ ಊಟ:

ಲೋಕಸಭಾ ಚುನಾವಣೆ ಬಿಸಿಯಿಂದ ಇಂದಿರಾ ಕ್ಯಾಂಟೀನ್ ಮೆನು ಕೊಂಚ ಬದಲಾಗಿದೆ. ರುಚಿ ರುಚಿಯಾದ ಊಟ ಉಪಹಾರ ಕೊಡುವ ಮೂಲಕ ಮತದಾರ ಸೆಳೆಯುವ ಯತ್ನ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬೆಳಗ್ಗೆ ನೀಡಲಾಗುತ್ತಿದ್ದ ಉಪಹಾರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮೊದಲು ಬೇಸಿಗೆಯಲ್ಲಿ ಚಟ್ನಿ ಹಲಸಿದರು ಅದನ್ನೇ ನೀಡುತಿತ್ತು, ಚುನಾವಣೆ ಬಂದ ಮೇಲೆ ಚಟ್ನಿಯನ್ನು ತೆಗೆದು. ಚಟ್ನಿ ಬದಲಾಗಿ ಇಡ್ಲಿ ಜತೆ ಗಟ್ಟಿ ಸಾಂಬರ್ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಹಿಂದೆ ಒಂದೇ ದಿನ ಮಾತ್ರ ಖಾರಬಾತ್ ನೀಡಲಾಗುತ್ತಿತ್ತು ಈಗ ವಾರಕ್ಕೆ ಎರಡು ದಿನ ಖಾರಬಾತ್ ನೀಡುತ್ತಿದ್ದಾರೆ. ಮತ್ತು ಬಿಸಿಬೇಳೆ ಬಾತ್ ಗೆ ಖಾರಬೂಂದಿ ಸಹ ಕೊಡಲು ತೀರ್ಮಾನಿಸಲಾಗಿದೆ.

Also read: ಇಂದಿರಾ ಕ್ಯಾಂಟೀನ್-ನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಕೆಲ ನಾಗರೀಕರು ದೂರು ಮಾಡಿದ ಕಾರಣ ಈ ವಿನೂತನ ಕಾರ್ಯಕ್ಕೆ ಮುಂದಾಗಿದೆ BBMP!!!

ಊಟದಲ್ಲಿ ಬದಲಾವಣೆ?

ಚುನಾವಣೆ ಬೆನ್ನೆಲೆಯಲ್ಲಿ ಊಟದ ಸಾಂಬರ್ ನಲ್ಲಿಯೂ ಸಾಕಷ್ಟು ಬದಲಾವಣೆಯಾಗಿದು, ಈ ಹಿಂದೆ ತರಕಾರಿ ಅಡುಗೆ ಸಾಂಬಾರ್ ಮಾತ್ರ ಇತ್ತು. ಈಗ ಕಾಳುಗಳನ್ನ ಹಾಕಿ ಸಾಂಬರ್ ಮಾಡಲು ತೀರ್ಮಾನಿಸಲಾಗಿದೆ. ಈ ಹಿಂದೆ ರಾತ್ರಿ ವೇಳೆ ಪಲಾವ್ ಅಥವಾ ಅನ್ನ ಸಾಂಬರ್ ಒಂದೇ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿತ್ತು. ಈಗ ಮೆನು ಬದಲಾಗಿದ್ದರಿಂದ ಗ್ರಾಹಕರಿಗೆ ಹೊಸ ಅಡುಗೆಯ ರುಚಿ ನೋಡಬಹುದಾಗಿದೆ. ಇದೆಲ್ಲ ಚುನಾವಣೆ ಮುಗಿಯುವವರೆಗೆ ಮಾತ್ರ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇಗಲೇ ಸ್ವಲ್ಪ ಊಟದಲ್ಲಿ ಬದಲಾವಣೆ ಯಾದರೆ ಮತದಾರರು ತಮ್ಮ ಪಕ್ಷದ ಪರ ಬ್ಯಾಟಿಂಗ್ ಮಾಡುತ್ತಾರೆ ಎನ್ನುವ ಗಿಮಿಕ್ ಇದರಲ್ಲಿದೆ. ಆದರೆ ಈ ಮೆನು ಚುನಾವಣೆ ನಂತರ ಮುಂದು ವರೆಯುತ್ತಾ ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ.

ಟೆಂಡರ್‌ ಪ್ರಕ್ರಿಯೆ ಷರತ್ತುಗಳಲ್ಲಿ ಏನಿತ್ತು?

Also read: ಇನ್ಮೇಲೆ ಇಂದಿರಾ ಕ್ಯಾಂಟೀನ್-ನಲ್ಲಿ ಊಟದ ಜೊತೆ ಕನ್ನಡದ ಪಾಠಾನೂ ಸಿಗುತ್ತೆ!! ಏನಪ್ಪಾ ಅಂತೀರಾ ಮುಂದೆ ಓದಿ..

ಬಿಬಿಎಂಪಿ ಟೆಂಡರ್‌ ಆಹ್ವಾನಿಸಿದ ವೇಳೆ ಹಲವು ಷರತ್ತುಗಳನ್ನು ವಿಧಿಸಿತ್ತು. ಅದರಂತೆ ಆಹಾರ ಸುರಕ್ಷತೆ ಕಾಯ್ದೆ -2006 ರಡಿ ಸುರಕ್ಷಿತ ಆಹಾರ ಪದಾರ್ಥವನ್ನು ಮಾತ್ರ ಪೂರೈಕೆ ಮಾಡಬೇಕು. ಆಹಾರಕ್ಕೆ ಕಡ್ಡಾಯವಾಗಿ ಬ್ರ್ಯಾಂಡೆಡ್‌ ಅಡುಗೆ ಎಣ್ಣೆ ಹಾಗೂ ಆಹಾರ ಪದಾರ್ಥಗಳನ್ನೇ ಬಳಕೆ ಮಾಡಬೇಕು. ಆಹಾರ ಸಿದ್ಧಪಡಿಸುವ ಹಾಗೂ ಪೂರೈಕೆ ಮಾಡುವ ಸಿಬ್ಬಂದಿ ಕಡ್ಡಾಯವಾಗಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಪ್ರತಿ ಕ್ಯಾಂಟೀನ್‌ನಲ್ಲಿ ಪ್ರತಿ ಅವಧಿಗೆ 300 ಮಂದಿಗೆ ಊಟ, ತಿಂಡಿ ಪೂರೈಸಬೇಕು. ಅಗತ್ಯಬಿದ್ದರೆ ಈ ಪ್ರಮಾಣವನ್ನು ಹೆಚ್ಚು ಅಥವಾ ಕಡಿಮೆ ಮಾಡಲು ಪಾಲಿಕೆಗೆ ಅಧಿಕಾರವಿದೆ. ಹೀಗಾಗಿ ಹೆಚ್ಚುವರಿ ಊಟ ತಯಾರಿಸಲೂ ಸಹ ಗುತ್ತಿಗೆದಾರರು ಸಿದ್ಧವಿರಬೇಕು. ತಪ್ಪಿದರೆ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುವುದು ಎಂದು ಹೇಳಲಾಗಿತ್ತು. ಇದೆಲ್ಲವನ್ನು ಗಾಳಿಗೆ ತೂರಿ ಅಧಿಕಾರಿಗಳ ಮನೆಯ ಪಕ್ಕದಲ್ಲೇ ಇರುವ ಕ್ಯಾಂಟೀನ್‌-ಗಳಲ್ಲಿ ಕಳಪೆ ಮಟ್ಟದ ಆಹಾರ ಪೂರೈಕೆ ಆಗುವುದು ಬೆಳೆಕಿಗೆ ಬಂದಿತ್ತು.