ಎಂಇಎಸ್ ಶಾಸಕ ಅರವಿಂದ್ ಪಾಟೀಲ ಉದ್ಧಟತನ ಹೇಳಿಕೆ “ನಾವು ಕರ್ನಾಟಕದಲ್ಲಿ ಇರೋಲ್ಲ.. ಮಹಾರಾಷ್ಟ್ರಕ್ಕೆ ಹೋಗೋದು ಪಕ್ಕಾ..!

0
786

ಹೌದು ನಮ್ಮ ಕರ್ನಾಟಕದಲ್ಲಿ ಇರೋದು ಮತ್ತು ತಿನ್ನೋ ಆಹಾರ ಕರ್ನಾಟಕದು ಆದ್ರೂ ಇವರಿಗೆ ಮಹಾರಾಷ್ಟ್ರದ ಕನಸು.
ಇಂತಹ ನಾಯಕರು ನಮ್ಮ ಕರ್ನಾಟಕದಲ್ಲಿ ಇರುವುದಕ್ಕಿಂತ ಮಹಾರಾಷ್ಟ್ರಕ್ಕೆ ಹೋಗೋದು ಒಳಿತು ಅನ್ಸುತ್ತೆ.
ನಾವು “ನಾವು ಕರ್ನಾಟಕದಲ್ಲಿ ಇರೋಲ್ಲ.. ಮಹಾರಾಷ್ಟ್ರಕ್ಕೆ ಸೇರೋದು ಪಕ್ಕಾ” ಎಂದ ನಾಯಕ ಯಾರು ಏನು ಅನ್ನೋದು ಇಲ್ಲಿದೆ ನೋಡಿ.

mes arvinda patil-1
source:khanapurtown.mrc.gov.in

ಇನ್ನು ಕೆಲವೇ ದಿನಗಳಲ್ಲಿ ನಮ್ಮ ಗಡಿ ವಿವಾದ ಇತ್ಯರ್ಥವಾಗುತ್ತೆ ನಾವು ಇನ್ನು ಆದೊಷ್ಟು ಬೇಗ ನಾವು ಮಹಾರಾಷ್ಟ್ರಕ್ಕೆ ಹೋಗೇ ಹೋಗ್ತೀವಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತೆ ಎಂದು. ಕೆಡಿಪಿ ಸಭೆಯಲ್ಲಿ ಎಂಇಎಸ್ ಶಾಸಕ ಅರವಿಂದ್ ಪಾಟೀಲ ಉದ್ಧಟತನ ಹೇಳಿಕೆ ನೀಡಿದ್ದಾರೆ.

ಎಂಇಎಸ್ ನಾಯಕರ ಉದ್ಧಟತನದ ಹೇಳಿಕೆಗಳು ಮತ್ತು ಪ್ರತಿಕ್ರಿಯೆಗಳು ಹೆಚ್ಚುತ್ತಿವೆ. ಈ ನಾಯಕರು ಇರುವುದು ನಮ್ಮ ಕರ್ನಾಟಕದಲ್ಲೇ ಆದ್ರೂ ಇವರ ಹೇಳಿಕೆಗಳು ಮಹಾರಾಷ್ಟ್ರದ ಪರವಾಗಿ. ನಿನ್ನೆ ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲೂ ಎಂಇಎಸ್ ಜನನಾಯಕರ ಉದ್ಧಟತನದ ಮುಂದುವರೆದಿದೆ. ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಖಾನಾಪುರ ಎಂಇಎಸ್ ಶಾಸಕ ಅರವಿಂದ್ ಪಾಟೀಲ್, “ನಾವು ಕರ್ನಾಟಕದಲ್ಲಿ ಇರೋಲ್ಲ.. ಮಹಾರಾಷ್ಟ್ರಕ್ಕೆ ಸೇರೋದು ಪಕ್ಕಾ” ಎಂದು
ಖಡಕ್ ಮಾತಿನಲ್ಲಿ ಹೇಳಿಕೆ ನೀಡಿದ್ದಾರೆ.

mes arvinda patil-2
source:KANNADIGA WORLD

ಇದೆ ಸಂದರ್ಭದಲ್ಲಿ ಅಲ್ಲೇ ಇದ್ದ ಸಚಿವ ರಮೇಶ್ ಜಾರಕಿಹೊಳಿ, “ನಾವು ಮಹಾಜನ ಆಯೋಗದ ವರದಿಯನ್ನು ಒಪ್ಪಿದ್ದೇವೆ. ನೀವೇನೇ ಹೊಸದು ಮಾಡಿದ್ರು ನಾವ್ ಒಪ್ಪಲ್ಲ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದರು.ಮತ್ತು ಅಥಣಿ ಶಾಸಕ ಲಕ್ಷ್ಮಣ ಸವದಿ ಕೂಡ ಸಚಿವರ ಮಾತಿಗೆ ದನಿ ಗೂಡಿಸಿ ಖಾನಾಪುರ ಎಂದೆಂದು ಕರ್ನಾಟಕದಲ್ಲೇ ಉಳಿಯುವಂತದ್ದು ಎಂದು ಹೇಳಿದರು.

mes arvinda patil-1
source:khanapurtown.mrc.gov.in

ಈ ರೀತಿಯಾಗಿ ಎಂಇಎಸ್ ನಾಯಕರ ಉದ್ಧಟತನದ ಹೇಳಿಕೆಗಳು ಹೆಚ್ಚುತ್ತಿವೆ ಇಂತಹ ನಾಯಕರಿಗೆ ಏನ್ ಹೇಳ್ಬೇಕು ಹೇಳಿ ಈ ನಾಯಕರು ಇರೋದು ಕರ್ನಾಟಕದಲ್ಲಿ ಆದ್ರೂ ಇವರಿಗೆ ಮಹಾರಾಷ್ಟ್ರದ ಕನಸು. ಇಂತಹ ನಾಯಕರು ನಮ್ಮ ನಾಡಲ್ಲಿ ಇರುವುದಕ್ಕಿಂತ ಮಹಾರಾಷ್ಟ್ರಕ್ಕೆ ಹೋಗಿ ಅನ್ನೋದು ಕನ್ನಡಿಗರ ಅಭಿಪ್ರಾಯವಾಗಿದೆ.