ಅನ್ನದ ಜೊತೆಯಲ್ಲಿ ತಿನ್ನಲು ರುಚಿಯಾದ ಚಟ್ನಿ ಈ ಮೆಂತೆ ಸೊಪ್ಪಿನ ಚಟ್ನಿ.. ನೀವೂ ಮಾಡಿ.

0
858

ಪೌಷ್ಟಿಕಾಂಶದ ಆಗರವಾದ ಮೆಂತೆ ಸೊಪ್ಪಿನ ಉಪಯೋಗಗಳು ಹಲವಾರು. ಹೊಟ್ಟೆ ನೋವು, ಪಿತ್ತ, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆಯಿಂದ ಮನೆ ಔಷಧಿ ತಯಾರಿಸಬಹುದು. ಮೆಂತೆ ಸೊಪ್ಪು ಆಯುರ್ವೇದದಲ್ಲಿ ಮಹತ್ತರವಾದ ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೆ ವಿವಿಧ ಆಹಾರ ಪದಾರ್ಥಗಳ ತಯಾರಿಯಲ್ಲಿ ಇದನ್ನು ವಿಶೇಷವಾಗಿ ಬಳಸುತ್ತಾರೆ. ಅದರಲ್ಲಿ ಮೆಂತೆ ಸೊಪ್ಪಿನ ಚಟ್ನಿ ಕೂಡ ಒಂದು.

Also read: ಆರೋಗ್ಯಕೆ ಹಿತಕರವಾದ ಪಾಲಕ್ ಸೊಪ್ಪಿನ “ಪನ್ನೀರ್ ಗ್ರೇವಿ” ಮಾಡಿ ಸವಿದು ನೋಡಿ..!!

ಬೇಕಾಗುವ ಪದಾರ್ಥಗಳು

 • ಮೆಂತೆಸೊಪ್ಪು – 2 ಕಟ್ಟು
 • ಮೆಂತೆ ಕಾಳು — 5 ರಿಂದ 6
 • ಬ್ಯಾಡಿಗೆ ಮೆಣಸಿನಕಾಯಿ — 5 ರಿಂದ 6
 • ಗುಂಟೂರು ಮೆಣಸಿನಕಾಯಿ — 5 ರಿಂದ 6
 • ಅರಿಸಿನ – ಚಿಟಿಕೆ
 • ಬೆಲ್ಲ – 1 ಬಟ್ಟಲು
 • ಹುಣಸೆಹಣ್ಣಿನ ರಸ — 1 ನಿಂಬೆ ಗಾತ್ರದ್ದು
 • ಎಣ್ಣೆ – 4 ರಿಂದ 6 ಚಮಚ
 • ಉಪ್ಪು — ರುಚಿಗೆ ತಕ್ಕಷ್ಟು

ಮಾಡುವ ವಿಧಾನ

 1. ಮೆಂತೆ ಸೊಪ್ಪನ್ನು ತೊಳೆದು ಹೆಚ್ಚಿಕೊಳ್ಳಿ.
 2. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಅದಕ್ಕೆ ಮೆಂತೆ ಕಾಳು, ಸಾಸಿವೆ ಮತ್ತು ಬ್ಯಾಡಿಗೆ ಮೆಣಸಿನಕಾಯಿ, ಗುಂಟೂರು ಮೆಣಸಿನಕಾಯಿ ಹಾಕಿ ಬಾಡಿಸಿ.
 3. ಈಗ ಮೆಂತೆ ಸೊಪ್ಪು ಹಾಕಿ, ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಬೆಲ್ಲ ಹಾಕಿ ನೀರು ಆರುವವರೆಗೆ ಹುರಿದು ತಣ್ಣಗಾಗಲು ಬಿಡಿ.
 4. ಈಗ ಬೇಯಿಸಿಕೊಂಡ ಮೆಂತೆ ಸೊಪ್ಪಿನ ಒಗ್ಗರಣೆಯನ್ನು ನೀರು ಹಾಕದೆ ಮಿಕ್ಸ್ ಯಲ್ಲಿ ರುಬ್ಬಿಕೊಳ್ಳಿ .
 5. ಈಗ ಮೆಂತೆ ಸೊಪ್ಪಿನ ಗೊಜ್ಜು ತಯಾರು. ಇದು ಅನ್ನ, ಚಪಾತಿ ಹಾಗೂ ರೊಟ್ಟಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.