ಮೆಂತೆ ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ

0
8614
Vegetables on old wooden background overhead close up shoot

ಮೆಂತೆ ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

 1. 1 ಕಪ್ ಸೋನಾ ಮಸೂರಿ ಅಕ್ಕಿ
 2. ಒಂದು ಮಧ್ಯಮ ಗಾತ್ರದ ಮೆಂತೆ ಸೊಪ್ಪಿನ ಕಟ್ಟು
 3. 4 ಟೇಬಲ್ ಚಮಚ ಅಡುಗೆ ಎಣ್ಣೆ
 4. 1/2 ಚಮಚ ಸಾಸಿವೆ
 5. 1 ಟೀಸ್ಪೂನ್ ಉದ್ದಿನ ಬೇಳೆ
 6. 1 ಟೀಸ್ಪೂನ್ ಕಡಲೆಬೇಳೆ
 7. 4 – 5 ಕರಿಬೇವಿನ ಎಲೆ
 8. 1 ಸಣ್ಣದಾಗಿ ಹೆಚ್ಚಿದ ಈರುಳ್ಳಿ
 9. 2 ಸಣ್ಣದಾಗಿ ಹೆಚ್ಚಿದ ಮಧ್ಯಮ ಗಾತ್ರದ ಟೊಮ್ಯಾಟೊ
 10. 1/2 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
 11. 1 ನೆಲ್ಲಿಕಾಯಿ ಗಾತ್ರದ ಬೆಲ್ಲ
 12. 1/2 ಕಪ್ ತೆಂಗಿನ ತುರಿ
 13. 1/4 ಟೀಸ್ಪೂನ್ ಅರಶಿನ ಪುಡಿ
 14. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

 1. 2 – 4 ಕೆಂಪು ಮೆಣಸಿನಕಾಯಿ (ಮಧ್ಯಮ ಖಾರ)
 2. 2 ಟೀಸ್ಪೂನ್ ಉದ್ದಿನ ಬೇಳೆ
 3. 2 ಟೀಸ್ಪೂನ್ ಕಡಲೆಬೇಳೆ
 4. 4 ಟೀಸ್ಪೂನ್ ಕೊತ್ತಂಬರಿ ಬೀಜ

ಮೆಂತೆ ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ:

 1. ಮೊದಲಿಗೆ ಉದುರು ಉದುರಾದ ಅನ್ನ ಮಾಡಿಟ್ಟು ಕೊಳ್ಳಿ.
 2. ಮೆಂತೆ ಸೊಪ್ಪನ್ನು ಆಯ್ದು, ತೊಳೆದು, ಕತ್ತರಿಸಿಟ್ಟು ಕೊಳ್ಳಿ.
 3. ಒಂದು ಬಾಣಲೆಯಲ್ಲಿ 2 – 4 ಕೆಂಪು ಮೆಣಸಿನಕಾಯಿ, 2 ಟೀಸ್ಪೂನ್ ಉದ್ದಿನ ಬೇಳೆ, 2 ಟೀಸ್ಪೂನ್ ಕಡಲೆಬೇಳೆ, 4 ಟೀಸ್ಪೂನ್ ಕೊತ್ತಂಬರಿ ಬೀಜವನ್ನು ಎಣ್ಣೆ ಹಾಕದೆ ಹುರಿಯಿರಿ.
 4. ಹುರಿದ ಎಲ್ಲ ಪದಾರ್ಥಗಳು ತಣ್ಣಗಾದ ಮೇಲೆ ಪುಡಿ ಮಾಡಿಟ್ಟು ಕೊಳ್ಳಿ.
 5. ನಂತರ 4 ಟೇಬಲ್ ಚಮಚ ಅಡುಗೆ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ತೆಗೆದುಕೊಂಡು ಬಿಸಿ ಮಾಡಿ.
 6. ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
 7. ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ.
 8. ನಂತರ ಹೆಚ್ಚಿದ ಮೆಂತೆಸೊಪ್ಪು ಹಾಕಿ ಬಾಡಿಸಿ.
 9. ನಂತರ ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಿ.
 10. ನಂತರ ಉಪ್ಪು, ಅರಶಿನ, ಬೆಲ್ಲ, ಹುಣಿಸೆರಸ ಮತ್ತು ಮಸಾಲೆ ಪುಡಿ ಹಾಕಿ. ಕಾಯಿ ತುರಿಯನ್ನೂ ಹಾಕಿ ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ.
 11. ಬೇಯಿಸಿಟ್ಟ ಅನ್ನ ಹಾಕಿ ಕಲಸಿ. ಬಿಸಿ ಬಿಸಿಯಾಗಿ ಬಡಿಸಿ.

 

ಮೆಂಥೆ ಸೊಪ್ಪು ರೈಸ್ ಬಾತ್ ತಯಾರಿಸುವ  ಸೂಚನೆಗಳು:

1.ಮೊದಲು ಅನ್ನವನ್ನು ಬೇಯಿಸಿ ಇಡಬೇಕು.  ಗಮನದಲ್ಲಿರಲಿ ಅಕ್ಕಿ ಮತ್ತು ಮೆಂಥೆ ಸೊಪ್ಪು ಒಟ್ಟಿಗೆ ಹಾಕಿ ಮಾಡುವುದಲ್ಲ .

2.ಮೆಂಥೆ ಸೊಪ್ಪನ್ನು ಸ್ವಚ್ಚಗೊಳಿಸಿ ಅದನ್ನು ಸಣ್ಣಗೆ ಹೆಚ್ಚಿ ಇಟ್ಟಿರಬೇಕು.

1methi-leaves

3.ಕೆಂಪು ಮೆಣಸಿನಕಾಯಿಗಳು, 4 ಚಮಚ ದನಿಯಾಕಾಳು, 2 ಚಮಚ ಉದ್ದಿನ ಬೇಳೆ, 2 ಚಮಚ ಕಡಲೆಬೇಳೆ, ಈ ಎಲ್ಲಾ ಪದಾರ್ಥಗಳನ್ನು ಒಂದು ಪ್ಯಾನ್ ನಲ್ಲಿ ಹುರಿದಿಟ್ಟುಕೊಳ್ಳಬೇಕು.

2

4.ಈ ಬೇಳೆಗಳನ್ನು medium flame ನಲ್ಲೆ  ರೋಸ್ಟ್ ಮಾಡಿ, golden brown ಬಣ್ಣಕ್ಕೆ ಬರುವವರೆಗೂ ಕಾಯಿರಿ.

3

5.ಹುರಿದ ಎಲ್ಲಾ ಪದಾರ್ಥಗಳನ್ನ ತಣ್ಣಗಾದಬೇಲೆ ಮಿಕ್ಸಿಜಾರ್ ಗೆ ಹಾಕಿ ಪುಡಿಮಾಡಿ.

4

6.ಈಗ ಒಂದು ಹಗಲವಾದ ಪ್ಯಾನ್ ತೆಗೆದುಕೊಂಡು, 4 ಚಮಚ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ನಂತರ ಸಾಸಿವೆ,  ಉದ್ದಿನಬೇಳೆ ಮತ್ತು ಕಡಲೆಬೇಳೆ, ಕರಿಬೇವು ಹಾಕಿ.

5

7.ಕತ್ತರಿಸಿದ ಈರುಳ್ಳಿ ಸೇರಿಸಿ ಫ್ರೈ ಮಾಡಿ.

6

8.ಸಣ್ಣಗೆ ಹೆಚ್ಚಿದ ಮೆಂತ್ಯೆ ಸೊಪ್ಪನ್ನು ಸೇರಿಸಿ.

7

9.ಹೆಚ್ಚಿದ ಟೊಮ್ಯಾಟೊವನ್ನು ಸೇರಿಸಿ ಫ್ರೈ ಮಾಡಿ.

8

10.ನಂತರ ಅರಿಶಿನದ ಪುಡಿ, ಬೆಲ್ಲ ಮತ್ತು ಉಪ್ಪು ಸೇರಿಸಿ ಟೊಮ್ಯಾಟೊ ಜೊತೆಗೆ ಮಿಶ್ರಣಮಾಡಿ.

9

11.½ ಕಪ್ ಹುಣಿಸೆಹಣ್ಣಿನ ರಸವನ್ನು ಹಾಕಿರಿ.

10

12.ಮಸಾಲಾ ಪುಡಿ ಹಾಕಿ ಮಿಶ್ರಣಮಾಡಿ.

11

13.ಒಣ ತೆಂಗಿನ ತುರಿಯನ್ನು ಹಾಕಿ ಮಿಶ್ರಣಮಾಡಿ.

12

14.ಚೆನ್ನಾಗಿ ಎಲ್ಲವನ್ನೂ ಮಿಶ್ರಣ ಮತ್ತು ಒಲೆ ಆಫ್ ಮಾಡಿ. ಗೊಜ್ಜು ಅಥವಾ ಮಸಾಲಾ ಸಿದ್ಧವಾಗಿದೆ.

14

15.ಬೇಯಿಸಿದ ಅನ್ನ ಸೇರಿಸಿ.

15

16.ಚೆನ್ನಾಗಿ ಮಿಶ್ರಣಮಾಡಿ ಬಿಸಿಯಾಗಿರುನಾಗಲೆ ಸರ್ವ್ ಮಾಡಿ ಸವಿದು ಮತ್ತು ಆನಂದಿಸಿ.