ಗರ್ಭಿಣಿಯರು ಮತ್ತು ಮಗುವಿಗೆ ಮೊಲೆಯುಣಿಸುವ ತಾಯಂದಿರು ಈ ವಿಷಯಗಳನ್ನು ನೆನಪಿಟ್ಟುಕೊಂಡಲ್ಲಿ ಮಾತೃತ್ವ ಒಂದು ಸುಮಧುರ ಅನುಭವವಾಗುವದರಲ್ಲಿ ಸಂಶಯವೇ ಇಲ್ಲ…

0
778
 • ಮೊಲೆಯುಣಿಸುವ ಬಗೆಗಿನ ತಯಾರಿ ಮಗು ಹೊಟ್ಟೆಯಲ್ಲಿದ್ದಾಗಲೇ ಪ್ರಾರಂಭವಾಗಬೇಕು. ಮೊಲೆತೊಟ್ಟಿನ ಕಾಳಜಿಯು ಅತ್ಯಂತ ಮಹತ್ವವಾದದ್ದು. ಒಮ್ಮೊಮ್ಮೆ ಮೊಲೆ ತೊಟ್ಟು ಒಳ ಹೋಗಿದ್ದಲ್ಲಿ ಪ್ರತಿದಿನ ಹಲವು ಸಾರಿನಿಧಾನವಾಗಿ ಹೊರಗೆ ಎಳೆಯುವ ಪ್ರಯತ್ನ ಮಾಡಬೇಕು.
 • ಮೊಲೆಯ ಹಾಲು ಬರುವವರೆಗೂ ಸಕ್ಕರೆ ನೀರು, ಜೇನುತುಪ್ಪ ಮುಂತಾದವುಗಳನ್ನು ನೀಡಲೇಬಾರದು.
 • ಪ್ರಾರಂಭದಲ್ಲಿಯೇ ಮಗುವಿಗೆ ಬಾಟಲಿಯಿಂದ ಹಾಲು ನೀರನ್ನು ನೀಡಲೇ ಬಾರದು. ಒಮ್ಮೆ ಮಗು ರಬ್ಬರ್ ನಿಪ್ಪಲ್ಲಿಗೆ ಹೊಂದಿಕೊಂಡರೆ ತಾಯಿಯ ಮೊಲೆಯನ್ನು ನಿರಾಕರಿಸುವ ಸಾಧ್ಯತೆ ಹೆಚ್ಚು.
 • ಮಗು ಮೊಲೆ ಚೀಪಾಡಿದ್ದರೆ ಹಿಂದಿ ತೆಗೆದ ಹಾಲನ್ನು ಸ್ವಚ್ಛವಾದ ಬಟ್ಟಲು ಹಾಗು ಚಮಚೆಯಿಂದ ನೀಡಬೇಕು.
 • ಕೆಲವೊಮ್ಮೆ ಹಾಲು ತುಂಬಿಕೊಂಡು ಮೊಲೆಗಳು ಗಟ್ಟಿಯಾಗಿ ನೋಯುತ್ತಿದ್ದರೆ ಹಾಲನ್ನು ಹಿಂಡಿ ತೆಗೆಯಬೇಕು. ಇದಕ್ಕಾಗಿ ಮೊಲೆಯ ಪಂಪನ್ನು ಬಳಸಬಹುದು.
 • ತಾಯಿಯು ಮಗುವಿಗೆ ಹಾಲುಣಿಸುವಾಗ ಮಾನಸಿಕವಾಗಿ ಹಾಗು ದೈಹಿಕವಾಗಿ ಪ್ರಶಾಂತಳಾಗಿರಬೇಕು. ಯಾವುದೇ ತರಹದ ಉದ್ವೇಗಕ್ಕೆ ಒಳಗಾಗದೆ ಮಗುವಿನ ನೋಟವನ್ನು ಸೆರೆಹಿಡಿಯುವ ಪ್ರಯತ್ನ ಮಾಡಬೇಕು.
 • ತಾಯಿ ಮಗುವಿಗೆ ಬೇಕಾದಾಗ ಹಾಲು ಕುಡಿಸಬೇಕು. ಪ್ರಾರಂಭದಲ್ಲಿ ೨-೩ ನಿಮಿಷಗಳವರೆಗೆ ಹಾಲು ಕುಡಿಸಬೇಕು. ಕ್ರಮೇಣ ಪ್ರತಿ ಮೊಲೆಯನ್ನು ೧೦ ನಿಮಿಷಗಳ ವರೆಗೂ ಉಣಿಸಬಹುದು. ಪ್ರತಿ ಸಾರಿಯೂ ಮೊಲೆಯನ್ನು ಬದಲಿಸುತ್ತಿದ್ದಲ್ಲಿ ಹಾಲು ಸ್ರವಿಸುವುದು ಸರಾಗವಾಗುತ್ತದೆ.
 • ಮೊಲೆಯುಣಿಸುವ ತಾಯಂದಿರು ಯಾವುದೇ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ತೆಗೆದು ಕೊಳ್ಳಬಾರದು.ಕೆಲವು ಔಷಧಿಗಳು ಹಾಲಿನಲ್ಲಿ ಸ್ರವಿಸಲ್ಪಟ್ಟು ಮಗುವಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು, ಇನ್ನು ಕೆಲವು ಹಾಲಿನ ಸ್ರವಿಕೆಯನ್ನು ಕಡಿಮೆ ಮಾಡುತ್ತವೆ.
 • ಮಗು ಹಾಲು ಕುಡಿದ ಸುಮಾರು ಎರಡೂವರೆಯಿಂದ ಮೂರುಗಂಟೆಯವರೆಗೂ ಸಮಾಧಾನದಿಂದಿದ್ದರೆ, ದಿನಕ್ಕೆ ೬-೭ ಸಾರಿ ಅಥವಾ ಅದಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆ ಮಾಡುತ್ತಿದ್ದಲ್ಲಿ ಹಾಲು ಸಾಕಾಗುತ್ತಿದೆ ಎಂದರ್ಥ.
 • ಮಗುವಿಗೆ ಅವಶ್ಯವಿದ್ದಾಗ, ಹಸಿವಾದಾಗ ಹಾಲು ನೀಡದೆ ಸ್ವಲ್ಪ ಸಮಯದ ನಂತರ ಹಾಲು ಕೊಟ್ಟಲ್ಲಿ ಮಗು ಗಡಿಬಿಡಿಯಲ್ಲಿ ಹಾಲು ಕುಡಿಯುವುದರಿಂದ ತೊಟ್ಟಿಗೆ ಗಾಯವಾಗಬಹುದು.
 • ಪ್ರತಿ ಮೊಲೆಯಿಂದ ೧೫ ನಿಮಿಷಗಳಿಗಿಂತ ಹೆಚ್ಚು ಸಮಯ ಹಾಲು ಕುಡಿಯುತ್ತಿದ್ದರೆ ಅಥವಾ ಪ್ರತಿ ಸಾರಿ ಕೇವಲ ಒಂದೇ ಮೊಲೆಯಿಂದ ಹಾಲು ಕುಡಿಯುತ್ತಿದ್ದರೆ ತೊಟ್ಟಿಗೆ ಗಾಯವಾಗಬಹುದು.
 • ತೊಟ್ಟು ಬಿರುಕು ಬಿಟ್ಟಲ್ಲಿ, ನೋವಿದ್ದಲ್ಲಿ ಕ್ರೀಮ್ ಗಳ ಬಳಕೆ ಸೂಕ್ತ.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840