ತ್ವಚೆಯ ಹೊಳಪಿಗೆ ಅತ್ಯಗತ್ಯವಾಗಿರುವ ಬದನೆಕಾಯಿ ಪಲ್ಯ ಮಾಡುವ ವಿಧಾನ..!!

0
1049

ತರಕಾರಿಗಳ ರಾಜ ಬದನೆಕಾಯಿ ವರ್ಷದ 12 ತಿಂಗಳು ಬೆಳೆಯಿವ ತರಕಾರಿಯಾಗಿದೆ ಹಾಗೆಯೇ ಎಲ್ಲಾ ದಿನಗಳಲ್ಲಿ ಸಾಮಾನ್ಯ ದರದಲ್ಲಿ ಸಿಗುವುದರಿಂದ ಯಾವುದೇ ಕಾರ್ಯಕ್ರಮ, ಮದುವೆ, ಜಾತ್ರೆ, ಎಲ್ಲದರಲೂ ಬದನೆಕಾಯಿದೇ ಹವಾ..!! ಆರೋಗ್ಯಯುಕ್ತವಾಗಿ ನೋಡಿದರೆ. ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡ ನಿಯಂತ್ರಣ ಮತ್ತು ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತೆ, ಅಂಗೈ ಮತ್ತು ಅಂಗಾಲು ಬೆವರುವಿಕೆಯನ್ನು ಕಡಿಮೆ ಮಾಡುತ್ತೆ, ಮೈಯೆಲ್ಲಿರುವ ತುರಿಕೆಯನ್ನು ಹೋಗಲಾಡಿಸುತ್ತೆ, ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತೆ, ಕಣ್ಣಿನ ತೊಂದರೆಯನ್ನು ದೂರಮಾಡಿ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ, ತ್ವಚೆಯ ಹೊಳಪಿಗೆ ಅತ್ಯಗತ್ಯವಾಗಿರುವ ಅಂಶವನ್ನು ನೀಡಿ ಹೊಳೆಯಿವಂತೆ ಮಾಡುತ್ತೆ,
ಇಷ್ಟೆಲ್ಲಾ ಉಪಯೋಗ ವಿರುವ ಬದನೆಯಿಂದ ಸುಲಭವಾಗಿ ಮತ್ತು ರುಚಿ ರುಚಿಯಾಗಿ ಯಣ್ ಗಾಯಿ ಬದನೆ ಪಲ್ಯ ತಯಾರಿಸುವ ವಿಧಾನ ಇಲ್ಲಿದೆ ನೋಡಿ.

ಬೇಕಾದ ಪದಾರ್ಥಗಳು:

* ಅರ್ಧಕೆಜಿ ಬದನೆಕಾಯಿ
* ಎರಡು ಈರುಳ್ಳಿ
* ಮೂರು ಟೇಬಲ್‌ಸ್ಪೂನ್‌ ಹುರಿದ ಕಡಲೆಕಾಯಿ ಬೀಜದ ಪುಡಿ
* ಒಂದು ಕಪ್ ತೆಂಗಿನ ತುರಿ
* ಒಂದು ಟೇಬಲ್ ಸ್ಪೂನ್ ಖಾರದ ಪುಡಿ
* ಒಂದು ಟೇಬಲ್ ಸ್ಪೂನ್ ಗರಂ ಮಸಾಲ
* ಒಂದು ಟೇಬಲ್ ಸ್ಪೂನ್ ಧನಿಯಾ ಪುಡಿ
* ಒಂದು ಚಮಚ ಸಕ್ಕರೆ
* ಒಂದು ಸ್ಪೂನ್ ಬೆಳ್ಳುಳ್ಳಿ ಶುಂಠಿ ಪೇಸ್ಟ್
* ಒಂದು ಕಪ್ ಗಟ್ಟಿ ಮೊಸರು
* 4/5 ಚಮಚ ಅಡುಗೆ ಎಣ್ಣೆ
* ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ :

1. ಮೊದಲು ಬದನೆಕಾಯಿಯನ್ನು ಚೆನ್ನಾಗಿ ತೊಳೆದು, ಉದ್ದಕ್ಕೆ ಮಧ್ಯಭಾಗದಲ್ಲಿ ಸೀಳಿ. (ತೊಟ್ಟು ಹಾಗೆಯೇ ಇರಲಿ) ಇದನ್ನು ಸ್ವಲ್ಪ ಉಪ್ಪು, ಅರಿಶಿನ ಬೆರೆಸಿದ ತಣ್ಣೀರಿನಲ್ಲಿ ಹಾಕಿಡಿ.
2. ಈರುಳ್ಳಿ ಸಣ್ಣಗೆ ಹೆಚ್ಚಿಕೊಂಡು. ಸ್ವಲ್ಪ ಎಣ್ಣೆಯಲ್ಲಿ ಬಾಡಿಸಿಕೊಳ್ಳಬೇಕು.
3. ನಂತರ ಈರುಳ್ಳಿ, ಕಾಯಿತುರಿ, ಸಕ್ಕರೆ, ಮಸಾಲೆ, ಕಡಲೆ ಹಿಟ್ಟು, ಉಪ್ಪು ಮೊಸರಿನೊಂದಿಗೆ ಬೆರೆಸಿ ಚೆನ್ನಾಗಿ ಕಲಸಿ. ನಂತರ ಅದೆಲ್ಲವನ್ನು ಸೀಳಿದ ಬದನೆಕಾಯಿ ಒಳಗೆ ತುಂಬಿ.
4. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಜೀರಿಗೆ, ಸಾಸಿವೆ, ಇಂಗಿನ ಒಗ್ಗರಣೆ ಹಾಕಿ ಬದನೆಕಾಯಿಗಳನ್ನು ತೊಟ್ಟು ಮೇಲೆ ಬರುವಂತೆ ಉದ್ದುದ್ದಕ್ಕೆ ನಿಲ್ಲಿಸಿ, ಮಿಕ್ಕ ಮಸಾಲೆಯನ್ನೂ ಸುತ್ತಲೂ ಹಾಕಿ ಮುಚ್ಚಳ ಮುಚ್ಚಿ. ಎರಡು ನಿಮಿಷಗಳಿಗೊಮ್ಮೆ ಮಸಾಲೆಯಾಂದಿಗೆ ಬದನೆಕಾಯಿಗಳನ್ನು ಮೆಲ್ಲಗೆ ತಿರುಗಿಸಿ, ಗಟ್ಟಿ ಎನಿಸಿದಲ್ಲಿ ಸ್ವಲ್ಪ ನೀರು ಹಾಕಿ.
5. ನಂತರ ಬದನೆಕಾಯಿ ಮಸಾಲೆಯಾಂದಿಗೆ ಬೆಂದು ಸ್ವಲ್ಪ ಮೃದುವಾದ ನಂತರ ಇಳಿಸಿ. ಕೊತ್ತಂಬರಿ, ಕರಿಬೇವು ಸೇರಿಸಿ.
6. ಈಗ ಬದನೆಕಾಯಿ ಯಣ್ ಗಾಯಿ ಪಲ್ಯ ರೆಡಿ. ಈ ಪಲ್ಯಗೆ ಕಾಯಿತುರಿ ಜಾಸ್ತಿ ಇದ್ದರೆ ಇನೋ ಹೆಚ್ಚಿಗೆ ರುಚಿ ಇರುತ್ತೆ.