“ನಮ್ಮ ಮೆಟ್ರೋ ಕನ್ನಡ” ಸಾಕು “ನಮ್ಮ ಮೆಟ್ರೋ ಹಿಂದಿ” ಬೇಡ ಎನ್ನುವ ಕೂಗು ಜೋರಾಗಿದೆ…!

0
506

ಪ್ರಾದೇಶಿಕ ಭಾಷಾ ನೀತಿ ಗಾಳಿಗೆ ತೂರಿ ರಾಜಧಾನಿ ಬೆಂಗಳೂರಿನ ‘ನಮ್ಮ ಮೆಟ್ರೋ’ ರೈಲಿನಲ್ಲಿ ಅನಗತ್ಯವಾಗಿ ಹಿಂದಿ ಹೇರಿಕೆ ಮಾಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Image result for metro news bangalore in protest

ಕೇವಲ 600 ವರ್ಷ ಇತಿಹಾಸವಿರುವ ಸಾಂವಿ ಧಾನಿಕವಾಗಿ ರಾಷ್ಟ್ರಭಾಷೆ ಎಂಬ ಮಾನ್ಯತೆಯೂ ಇಲ್ಲದ ಹಿಂದಿ ಭಾಷೆಯನ್ನು ರಾಜ್ಯದಲ್ಲಿ ಅನಗತ್ಯವಾಗಿ ತುರುಕಲಾಗುತ್ತಿದೆ. ಇದರಿಂದ 2,300 ವರ್ಷದ ಭವ್ಯ ಇತಿಹಾಸವಿರುವ ಕನ್ನಡ ಭಾಷೆಯನ್ನು ತುಳಿಯಲು ನಮ್ಮ ಮೆಟ್ರೋ ಅಧಿಕಾರಿಗಳು ಕುತಂತ್ರ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related image

ಅನಿವಾಸಿ ಬಳಗ ಸೇರಿದಂತೆ ಹಲವು ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ‘ನಮ್ಮ ಮೆಟ್ರೋ’ ಕ್ರಮದ ವಿರುದ್ಧ ಅಭಿಯಾನ ರೂಪಿಸಿದ್ದರೆ, ಹಿಂದಿ ಹೇರಿಕೆ ಕ್ರಮ ಖಂಡಿಸಿ ಕನ್ನಡಪರ ಸಂಘಟನೆಗಳು ಹೋರಾಟ ನೆಡೆಸುತ್ತಿವೆ.

ಈಗಾಗಲೇ ನಮ್ಮ ಮೆಟ್ರೋದ ಕೆಲವು ರೈಲು ನಿಲ್ದಾಣಗಳಲ್ಲಿ ಇಂಗ್ಲಿಷ್‌ ಭಾಷೆಯನ್ನೂ ಅಳಿಸಿ ಹಿಂದಿ ಹೇರಿಕೆ ಮಾಡುತ್ತಿರುವ ಹಾಗೂ ಹಿಂದಿಗೆ ಎರಡನೇ ಪ್ರಧಾನ ಭಾಷಾ ಸ್ಥಾನಮಾನ ನೀಡುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಹ ನಮ್ಮ ಮೆಟ್ರೋಗೆ ನೋಟಿಸ್‌ ಜಾರಿ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೂಚನೆ ಇಲ್ಲದಿದ್ದರೂ ಅನಗತ್ಯವಾಗಿ ಹಿಂದಿ ಬಳಕೆ ಮಾಡುತ್ತಿರುವುದರ ಬಗ್ಗೆ ಕಾರಣ ಕೇಳಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ದರಾಮಯ್ಯ ನೋಟಿಸ್‌ ಜಾರಿ ಮಾಡಿದ್ದರು.
ಇಂದು ಹಲವು ಕನ್ನಡಪರ ಸಂಘಟನೆಗಳು ಮೆಟ್ರೋ ಕಚೇರಿ ಮುಂದೆ ಪ್ರತಿಭಟನೆ ನೆಡೆಸಿವೆ.