ಮೋದಿಯವರ ಮಾತಿಗೆ ದೀದಿ ಪ್ರತಿಕ್ರಿಯೆ; ರಸಗುಲ್ಲಾ, ಕುರ್ತಾ ಕೊಡುತ್ತೇವೆ ಆದ್ರೆ ನಿಮಗೆ ಮತ ನಿಡಲ್ಲ..

0
470

ನರೇಂದ್ರ ಮೋದಿಯವರು ನಿನ್ನೆ ನಡೆದ ಸಂದರ್ಶನಯೊಂದರಲ್ಲಿ ರಾಜಕೀಯ ಜೀವನ ಬಿಟ್ಟು ತಮ್ಮ ವಯಕ್ತಿಕ ಜೀವನದ ಬಗ್ಗೆ ಏಳಿಏಳಿಯಾಗಿ ಬಿಚ್ಚಿಟ್ಟು ತಮ್ಮ ಬಾಲ್ಯದ ಜೀವನದಲ್ಲಿರುವ ಬಡತನದ ಬಗ್ಗೆ ವಿವರಿಸಿ ನನಗೆ ವಿರೋದ್ದ ಪಕ್ಷದಲ್ಲಿ ಆತ್ಮಿಯ ಸ್ನೇಹಿತರು ಇದ್ದಾರೆ. ರಾಜಕೀಯವಾಗಿ ನನ್ನ ಕಟುವಾಗಿ ಟೀಕೆ ಮಾಡುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಲೂ ನನಗೆ ಪ್ರತಿವರ್ಷ ‘ಕುರ್ತಾ’ ಕಳುಹಿಸಿಕೊಡುತ್ತಾರೆ ಎಂದು ಹೇಳಿದ್ದರು ಈ ವಿಷಯಕ್ಕೆ ದೀದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Also read: ಮೊದಲ ಬಾರಿ ರಾಜಕೀಯ ಬಿಟ್ಟು ವಯಕ್ತಿಕ ಜೀವನದ ಬಗ್ಗೆ ನಟ ಅಕ್ಷಯ್ ಕುಮಾರ್ ಅವರ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ..

ಹೌದು ನಟ ಅಕ್ಷಯ್ ಕುಮಾರ್ ನಡೆಸಿದ ರಾಜಕಿಯೇತರ ಸಂದರ್ಶನದ ವೇಳೆ ಮೋದಿಯವರು ತಮ್ಮ ಬಗ್ಗೆ ನೀಡಿದ್ದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ನಾವು ಅತಿಥಿಗಳಿಗೆ ರಸಗುಲ್ಲಾ, ಉಡುಗೊರೆಗಳನ್ನು ನೀಡಿ ಸ್ವಾಗತಿಸುತ್ತೇವೆ. ಆದ್ರೆ ಮತ ಮಾತ್ರ ನೀಡಲ್ಲ ಎಂದು ಪರೋಕ್ಷವಾಗಿ ಮೋದಿ ಅವರಿಗೆ ಟಾಂಗ್ ಕೊಟ್ಟಿದ್ದು ಬಾರಿ ವೈರಲ್ ಆಗಿದೆ. ಇದಕ್ಕೆ ಮೋದಿಯವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಸಂದರ್ಶನದ ವೇಳೆ ಮೋದಿ ಹೇಳಿದ್ದು ಏನು?

ಚುನಾವಣೆ ಸಮಯದಲ್ಲಿ ಇದು ನನಗೆ ಪರಿಣಾಮ ಬೀರಬಹುದು. ಆದರೆ, ಮಮತಾ ಬ್ಯಾನರ್ಜಿ ನನಗೆ ಪ್ರತಿವರ್ಷ ಕುರ್ತಾವನ್ನು ಉಡುಗೊರೆಯಾಗಿ ನೀಡುವ ವಿಷಯವನ್ನು ಮರೆಮಾಚಲಾರೆ. ಬಾಂಗ್ಲಾದೇಶದ ಪ್ರಧಾನಿ ಶೈಕ್​ ಹಸೀನಾ ಅವರು ನನಗೆ ಪ್ರತಿವರ್ಷ ಬೆಂಗಾಲಿ ಸಿಹಿಯನ್ನು ಉಡುಗೊರೆ ನೀಡುವ ವಿಚಾರ ತಿಳಿದ ನಂತರದಿಂದ ಮಮತಾ ಅವರೂ ಉಡುಗೊರೆ ನೀಡಲು ಆರಂಭಿಸಿದರು ಎಂದು ಪ್ರಧಾನಿ ಸಂದರ್ಶನದಲ್ಲಿ ಮುಕ್ತವಾಗಿ ಹೇಳಿದರು.

Also read: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಭತ್ಯೆಯಲ್ಲಿ 5 ಪಟ್ಟು ಹೆಚ್ಚಳ..

ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ಏನು?

ಮೋದಿ ಅವರು ತಮ್ಮ ಬಗ್ಗೆ ನೀಡಿದ್ದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ನಾವು ಅತಿಥಿಗಳಿಗೆ ರಸಗುಲ್ಲಾ, ಉಡುಗೊರೆಗಳನ್ನು ನೀಡಿ ಸ್ವಾಗತಿಸುತ್ತೇವೆ. ಆದ್ರೆ ಮತ ಮಾತ್ರ ನೀಡಲ್ಲ ಎಂದು ಪರೋಕ್ಷವಾಗಿ ಮೋದಿ ಅವರಿಗೆ ಟಾಂಗ್ ಕೊಟ್ಟಿರುವ ಬ್ಯಾನರ್ಜಿ ಅತಿಥಿಗಳನ್ನು ವಿಶೇಷ ಉಡುಗೊರೆ ಕೊಟ್ಟು ಸ್ವಾಗತಿಸುವುದು ಬಂಗಾಳೀಯರ ಸಂಸ್ಕೃತಿ. ಆದರೆ ಬಿಜೆಪಿಗೆ ನಾವು ಮತ ಹಾಕುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಹಿಂದೆವೂ ಕೂಡ ಅವರು ಚಾಯ್‍ವಾಲಾ ತಮ್ಮ ಆಡಳಿತ ಅವಧಿಯ ಐದು ವರ್ಷಗಳನ್ನು ವಿದೇಶಿ ಪ್ರವಾಸದಲ್ಲಿಯೇ ಕಳೆದಿದ್ದಾರೆ ಎಂದು ದೀದಿ ವ್ಯಂಗ್ಯವಾಡಿದ್ದರು.

ದೀದಿಗೆ ಮೋದಿ ತಿರುಗೇಟು

Also read: ಇದು ದೊಡ್ಡ ಬ್ರೆಕಿಂಗ್ ನ್ಯೂಸ್: “ರಫೇಲ್ ವಿಚಾರದಲ್ಲಿ ನಾನು ಸುಳ್ಳು ಹೇಳಿದ್ದೆ” ಸುಪ್ರಿಂಕೋರ್ಟ್-ನಲ್ಲಿ ತಪ್ಪೊಪ್ಪಿಕೊಂಡ ರಾಹುಲ್ ಗಾಂಧಿ!!

ಚಾಯ್‍ವಾಲಾ ತಮ್ಮ ಆಡಳಿತ ಅವಧಿಯ ಐದು ವರ್ಷಗಳನ್ನು ವಿದೇಶಿ ಪ್ರವಾಸದಲ್ಲಿಯೇ ಕಳೆದಿದ್ದಾರೆ ಎಂದು ದೀದಿ ಹೇಳಿದ್ದಾರೆ. ಇದನ್ನು ನಾನು ಎಲ್ಲಿಯೋ ಓದಿದ್ದೇನೆ. ಆದರೆ ನನ್ನ ವಿದೇಶಗಳ ಭೇಟಿಯಿಂದಾಗಿ ಭಾರತಕ್ಕೆ ಗೌರವ ಸಿಕ್ಕಿದೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ದೀದಿ ಮೇಲೆ ಭರವಸೆ ಇಟ್ಟು ನೀವು ಬೆಂಬಲ ನೀಡಿದ್ದೀರಿ. ಆದರೆ ದೀದಿ ನಿಮಗೆ ಏನು ಕೊಟ್ಟಿದ್ದಾರೆ? ಅವರ ಬಳಿ ಗೂಂಡಾ ತಂತ್ರದ ತಾಕತ್ ಇದೆ. ನಮ್ಮ ಬಳಿ ಜನತಂತ್ರ ಶಕ್ತಿಯಿದೆ. ಪಶ್ಚಿಮ ಬಂಗಾಳದಲ್ಲಿರುವ ತೃಣಮೂಲ ಕಾಂಗ್ರೆಸ್ ಗೂಂಡಾ ಸಂಸ್ಕøತಿಯನ್ನು ಮುಕ್ತಿ ಮಾಡಲು ನನಗೆ ಬೆಂಬಲ ನೀಡಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಕೇಳುವ ಮೂಲಕ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.