ಶ್ರಮಿಕ್ ರೈಲಿನಲ್ಲಿ ಅನೇಕ ಎಡವಟ್ಟುಗಳಿಂದ ಜೀವ ನಾಶವಾದರೂ, ಜವಾಬ್ದಾರಿ ವಹಿಸಿಕೊಳ್ಳದ ಪಿಯೂಷ್ ಗೋಯಲ್; ಇವರಿಗೆ ನೈತಿಕತೆಯೇ ಇಲ್ಲವಾ?

0
79

ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಅತಂತ್ರರಾಗಿದ್ದ ವಲಸೆ ಕಾರ್ಮಿಕರನ್ನು ಅವರವರ ತವರಿಗೆ ತಲುಪಿಸಲು ಕೇಂದ್ರ ಸರ್ಕಾರ ಬಿಟ್ಟಿದ್ದ ಶ್ರಮಿಕ್ ರೈಲಿನಲ್ಲಿ ಈ ವರೆಗೂ 80 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಗೋರಖ್’ಪುರ್’ನಿಂದ ಒಡಿಶಾದ ರೊರ್ಖೆಲಾಗೆ ಹೋಗಬೇಕಿದ್ದ ಶ್ರಮಿಕ್ ರೈಲು ಪೀಟ್ನಾದ ಪುರುಲಿಯಾಕ್ಕೆ ಹೋಗುತ್ತದೆ. 30 ಗಂಟೆ ಪ್ರಯಾಣ 72 ಗಂಟೆಕ್ಕೆ ಹೆಚ್ಚಾಗಿ ಊಟ, ನೀರು ಇಲ್ಲದೆ ಪ್ರಯಾಣಿಕರು ಸತ್ತಿದ್ದಾರೆ. ಶ್ರಮಿಕ್ ರೈಲಿನಲ್ಲಿನ ಅವ್ಯವಸ್ಥೆ ಹಾಗೂ ಸೂಕ್ತ ಸಮಯಕ್ಕೆ ವಲಸಿಗರನ್ನು ಅವರ ಊರುಗಳಿಗೆ ಸೇರಿಸಲು ನಿರ್ಲಕ್ಷ್ಯ ವಹಿಸಿದ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಏನು ಮಾಡುತ್ತಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿದೆ.

ದೇಶದ ವಿವಿಧೆಡೆ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರು ತವರು ಗ್ರಾಮಗಳಿಗೆ ಮರಳಲು ಅನುಕೂಲ ಕಲ್ಪಿಸುವ ಸಲುವಾಗಿ ಶ್ರಮಿಕ್ ರೈಲುಗಳನ್ನು ಬಿಡಲಾಗಿದೆ. ಇದರಲ್ಲಿ ಪ್ರಯಾಣಿಸಿದವರಲ್ಲಿ ಒಟ್ಟು 80 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಶ್ರಮಿಕ್ ರೈಲು ಸೇವೆಯನ್ನು ಮೇ ಒಂದರಿಂದ ಆರಂಭಿಸಲಾಗಿತ್ತು. ಅಂದಾಜು 3,840 ರೈಲುಗಳು ಸುಮಾರು 50 ಲಕ್ಷ ವಲಸೆ ಕಾರ್ಮಿಕರು ಪ್ರಯಾಣ ಮಾಡಿದ್ದಾರೆ. ಈ ಪೈಕಿ 80 ಮಂದಿ ಪ್ರಯಾಣಿಕರು ವಿವಿಧ ಕಾರಣಗಳಿಂದಾಗಿ ಸಾವನ್ನಪ್ಪಿದ್ದಾರೆ. ಆದರೆ ಮೃತಪಟ್ಟವರ ಪೈಕಿ ಬಹುತೇಕ ಮಂದಿ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ಮೇ27ರಂದು 10 ಮಂದಿ ಸಾವನ್ನಪ್ಪಿದ್ದರೆ, ಮೇ 24 ಮತ್ತು 25ರಂದು ತಲಾ 9 ಮಂದಿ ಸಾವನ್ನಪ್ಪಿದ್ದಾರೆ, ಮೇ 26ರಂದು 13 ಮಂದಿ ಮತ್ತು ಮೇ 27ರಂದು 8 ಮಂದಿ ಸಾವನ್ನಪ್ಪಿದ್ದಾರೆ.

ರೈಲಿನಲ್ಲಿ ಉಸಿರುಗಟ್ಟಿ, ಉಷ್ಣಾಂಶ ಹಾಗೂ ಹಸಿವಿನಿಂದ ಮೃತಪಟ್ಟಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯೆಯಾಗಿ ಆರ್‌ಪಿಎಫ್ ಈ ಹೇಳಿಕೆ ನೀಡಿದ್ದು, ಹಲವು ಮಂದಿ ವೈದ್ಯಕೀಯ ಚಿಕಿತ್ಸೆಗಾಗಿಯೇ ನಗರಗಳಿಗೆ ಬಂದಿದ್ದವರು ಎಂದೂ ಇಲಾಖೆ ಸಮರ್ಥಿಸಿಕೊಂಡಿದೆ. ಅಂತೆಯೇ ರಾಜ್ಯಗಳ ಜತೆ ಸಮನ್ವಯದೊಂದಿಗೆ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಆದರೆ ಇದು ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಲಾಕ್’ಡೌನ್ ಅವಧಿಯಲ್ಲಿ 560 ಮಂದಿ ಹಸಿವು ಮತ್ತಿತರ ಕಾರಣದಿಂದ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ವಲಸಿಗರು ಹಾಗೂ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇದಕ್ಕೆಲ್ಲಾ ಕೇಂದ್ರ ಸರ್ಕಾರವೇ ನೇರ ಹೊಣೆಯನ್ನು ಹೊರಬೇಕಾಗಿದೆ. ಕೊರೋನಾದಿಂದ ಇಡೀ ದೇಶ ಅಲ್ಲೋಲ ಕಲ್ಲೋಲವಾಗಿದೆ. ದೇಶದಲ್ಲಿ ಕಡಿಮೆ ಸೋಂಕು ಇದ್ದಾಗ ಲಾಕ್’ಡೌನ್ ಮಾಡಿ ಸೋಂಕು ತೀವ್ರವಾಗಿ ಹರಡಿದ ಬಳಿಕ ಲಾಕ್’ಡೌನ್ ತೆರವು ಮಾಡಿದ್ದಾರೆ. ದೇಶದಲ್ಲಿ 13 ಸಾವಿರ ಪ್ಯಾಸೆಂಜರ್ ರೈಲುಗಳಿದ್ದು 2.30 ಕೋಟಿ ಮಂದಿ ನಿತ್ಯ ಸಂಚರಿಸುತ್ತಿದ್ದರು. ದೇಶದ ವಿವಿದೆಡೆ ಸಿಲುಕಿದ್ದ 5-6 ಕೋಟಿ ಜನ ವಲಸಿಗರನ್ನು ಪ್ಯಾಸೆಂಜರ್ ರೈಲಿನಲ್ಲಿ ನಾಲ್ಕೇ ದಿನದಲ್ಲಿ ಅವರವರ ಊರು ತಲುಪಿಸಬಹುದಿತ್ತು. ಲಾಕ್’ಡೌನ್’ಗೂ ಮೊದಲು ಅವರನ್ನು ಅವರ ಸ್ಥಳಗಳಿಗೆ ತಲಪಿಸಬೇಕಿತ್ತು. ಆ ರೀತಿ ಮಾಡದೆ ಬೀದಿ-ಬೀದಿಯಲ್ಲಿ ಜನ ಸಾಯುವಂತೆ ಮಾಡಿದ್ದಾರೆ. ರಸ್ತೆಗಳಲ್ಲಿ ಹೆರಿಗೆ ಆಗುವುದು, ರೈಲ್ವೆ ಹಳಿಗಳ ಮೇಲೆ ಮಲಗಿ ಸಾಯುವುದು. ಅನ್ನ ಹಾಗೂ ನೀರಿಲ್ಲದೆ ಸಾಯುವುದನ್ನು ಕೇಂದ್ರ ತಪ್ಪಿಸಬಹುದಿತ್ತು.

ಆದರೆ ಶ್ರಮಿಕ್ ರೈಲಿನ ಚಾಲಕರು ಎತ್ತ ಸಾಗುತ್ತಿದ್ದಾರೆ ಎಂಬ ಸುಳಿವೂ ಸಿಗುತ್ತಿಲ್ಲ.. ಎಲ್ಲೋ ಹೋಗಬೇಕಿರುವ ರೈಲು ಮತ್ತೇಲ್ಲೋ ಹೋಗುತ್ತಿದೆ. ಇದರಿಂದ ಪ್ರಯಾಣಿಕರು ನಲುಗಿ ಹೋಗಿದ್ದಾರೆ. ಆದರೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮಾತ್ರ ಜಾಣ ಕುರುಡರಂತೆ ನಟಿಸುತ್ತಿರುವಂತೆ ಗೋಚರಿಸುತ್ತಿದೆ.

Also read: ಕರೋನಾ ಕಿಟ್ ಹಾಗೂ ವೈದ್ಯಕೀಯ ಉಪಕರಣ ಖರೀದಿಯಲ್ಲೂ ಹಗರಣ ಬಯಲು!! ಇಂಥಾ ಸಮಯದಲ್ಲೂ ನೀಚ ಭ್ರಷ್ಟತನ ಮಾಡುವವರಿಗೆ ಏನು ಮಾಡಬೇಕು??