ಬಾಯಲ್ಲಿ ಇಟ್ಟರೆ ಕರಗುವ ಮಿಲ್ಕ್ ಪೌಡರ್ ಬರ್ಫಿ ಮಾಡುವ ವಿಧಾನ

0
5161

ಬಾಯಲ್ಲಿ ಇಟ್ಟರೆ ಕರಗುವ ಮಿಲ್ಕ್ ಪೌಡರ್ ಬರ್ಫಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು:

  1. ಮುಕ್ಕಾಲು ಕಪ್ ತುಪ್ಪ
  2. ಒಂದು ಕಪ್ ಹಾಲು
  3. ಒಂದು ಕಪ್ ಹಾಲಿನ ಪುಡಿ
  4. ಎರಡುವರೆ ಕಪ್ ಸಕ್ಕರೆ

ಮಾಡುವ ವಿಧಾನ:

1. ಒಂದು ಪ್ಯಾನ್ ಗೆ ಸ್ವಲ್ಪ ತುಪ್ಪ, ಹಾಲು, ಒಂದು ಕಪ್ ಹಾಲಿನ ಪುಡಿ ಮತ್ತು ಸಕ್ಕರೆಯನ್ನು ಹಾಕಿ ಅದನ್ನು ಚೆನ್ನಾಗಿ ಕಲಸಿ ಒಲೆಯ ಮೇಲೆ ಹದ ಉರಿಯಲ್ಲಿ ಇಡಿ..

2. ಸಣ್ಣ ಉರಿಯಲ್ಲಿ ಉಂಡೆಯಾಗದಂತೆ ಮಿಶ್ರಣವನ್ನು ತಿರುಗಿಸಬೇಕು. ಸ್ವಲ್ಪಸ್ವಲ್ಪವೇ ತುಪ್ಪ ಸೇರಿಸುತ್ತಿರಿ.

3. ಸುಮಾರು 10 ನಿಮಿಷದ ಬಳಿಕ ನೀರಲ್ಲಿ ಅದ್ದಿದ ಬೆರಳಿನಿಂದ ಮಿಶ್ರಣವನ್ನು ಮುಟ್ಟಿ ನೋಡಿ. ಅದು ಬೆರಳಿಗೆ ಅಂಟಿಕೊಳ್ಳುತ್ತಿಲ್ಲವೆಂದರೆ ಬೆಂದಿದೆ ಎಂದರ್ಥ.

4. ಅದು ಹಲ್ವಾದಂತೆ ಗಟ್ಟಿಯಾಗುತ್ತಾ ಬಂದಾಗ ಕೆಳಗಿಳಿಸಿ.

5. ಈಗ ಒಂದು ಬಟ್ಟಲಲ್ಲಿ ತುಂಪವನ್ನು ಸವರಿ. ಹೀಗೆ ತುಪ್ಪ ಸವರಿದ ಬಟ್ಟಲಿಗೆ ಅದನ್ನು ಹರವಿ. ಅದರ ಮೇಲೆ ಗೋಡಂಬಿಯಿಂದ ಅಲಂಕರಿಸಿ. ಸ್ವಲ್ಪ ಹೊತ್ತು ಕೂಲ್ ಆಗಲು ಬಿಡಿ.

6. ನಂತರ ನಿಮಗೆ ಬೇಕಾದ ಆಕಾರದಲ್ಲಿ ಚೆಂದನೆಯ ತುಂಡುಗಳಾಗಿ ಕತ್ತರಿಸಿ. ಹಾಲಿನ ಬರ್ಫಿ ಸಿದ್ಧ.