ಹಾಲಿನ ಕೆನೆಯಂತೆ ತ್ವಚೆಯ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ!

0
4263

ತ್ವಚೆಯ ರಕ್ಷಣೆ ಕಷ್ಟದ ಕೆಲಸ. ಮುಖದ ಮೇಲೆ ಚಿಕ್ಕ ಚಿಕ್ಕ ಕಪ್ಪು ಚುಕ್ಕೆಗಳಾಗುವುದು ಹೆಚ್ಚು. ಆರಂಭದಲ್ಲಿಯೇ ಇದರ ಕುರಿತಾಗಿ ಕಾಳಜಿ ತೆಗೆದುಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ  ಅವು ಮುಖದ ಮೇಲೆ ಶಾಶ್ವತ ಕಲೆಗಳಾಗಿ ಉಳಿದುಬಿಡಬಹುದು. ಆದ್ದರಿಂದ ಮುಖದ ಆರೋಗ್ಯ ಕಾಪಾಡಿಕೊಂಡು, ಸೌಂದರ್ಯ ಹೆಚ್ಚಿಕೊಳ್ಳಲು ಕೆಲವು ಸರಳ ಉಪಾಯಗಳು ಇಲ್ಲಿವೆ.

Milk-bath1

ಇದು ಸಾಮಾನ್ಯವಾದ ತ್ವಚೆಗಾಗಿ ಬಳಸಲಾಗುವ ಫೇಸ್ ಫ್ಯಾಕ್ ಆಗಿರುತ್ತದೆ. ಎರಡು ಟೀ ಚಮಚ ಗಂಧದ ಪುಡಿ. ಒಂದು ಟೀ ಚಮಚ ಕಡಲೆ ಹಿಟ್ಟು ಒಂದು ಚಿಟಿಕಟ ಅರಿಶಿನವನ್ನು ಬೆರೆಸಿಕೊಳ್ಳಿ ಇದರ ಮೇಲೆ ಕೆಲವು ಹನಿಗಳಷ್ಟು ರೋಸ್ ವಾಟೆರ್ ಚಿಮುಕಿಸಿ, ಇವನ್ನೆಲ್ಲ ಸೇರಿಸಿ, ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ, ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆ ಮೇಲೆ ಲೇಪಿಸಿ ಉಜ್ಜಿಕೊಳ್ಳಿ. 10 ನಿಮಿಷ ಬಿಟ್ಟು ಇದನ್ನು ತೊಳೆಯಿರಿ. ನಂತರ ನಿಮ್ಮ ಮುಖ ಹಾಲಿನಂತೆ ಕಂಗೊಳಿಸುತ್ತದೆ.

4

ಒಣ ತ್ವಚೆಯ ಸಮಸ್ಯಯಿಂದ ಬಳಲುತ್ತಿರುವವರು ಈ ಫೇಸ್ ಪ್ಯಾಕ್ ಅನ್ನು ಬಳಸಬಹುದು. ಇದಕ್ಕಾಗಿ ನಾಲ್ಕು ಟೀ ಚಮಚ ಹಾಲಿನ ಕೆನೆಯ ಜೊತೆಗೆ ಎರಡು ಟೀ ಚಮಚ ರೋಸ್ ವಾಟರ್ ಬೆರೆಸಿಕೊಳ್ಳಿ ಇದನ್ನು ಕಾಲುಗಳು ಕೈಗಳು ಮತ್ತು ಮುಖದ ಮೇಲೆ  ಹಚ್ಚಿಕೊಂಡು ನಂತರ ಸ್ನಾನಮಾಡಿ

5

ಒಂದು ಚಿಟಿಕೆ ಕೇಸರಿಯನ್ನು ಒಂದು ಟೀ ಚಮಚ ಜೇನು ತುಪ್ಪ ಮತ್ತು ಒಂದು ಟಿ ಚಮಚ ಹಾಲಿನ ಕೆನೆಯ ಜೊತೆಗೆ ಮಿಶ್ರಣ ಮಾಡಿಕೊಳ್ಳಿ ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು 30 ನಿಮಿಷ ಬಿಟ್ಟು ನಂತರ ತೊಳೆಯಿರಿ ಇದು ಅತ್ಯಮತ ಪರಿಣಾಂಕಾರಿಯಾದ ಫೇಸ್ ಪ್ಯಾಕ್ ಆಗಿದ್ದು ಇದರಿಂದ ತ್ವಚೆ ಸುಂದರವಾಗಿ ಕಾಣುತ್ತದೆ.

3

ಈ ಫೇಸ್ ಪ್ಯಾಕ್ ನಿಮ್ಮ ತ್ವಚೆಯನ್ನು ಸಾದ ಯೌವನದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಮೊಡವೆಗಳಂತವು ನಿಮ್ಮ ತ್ವಚೆಯನ್ನು ಕಾಡದಂತೆ ನೋಡಿಕೊಳ್ಳುತ್ತವೆ, ಇದನ್ನು ತಯಾರಿಸುವುದು ಸುಲಭ, ಒಂದು ಟೀ ಚಮಚ ಜೇನು ತುಪ್ಪಕ್ಕೆ ಒಂದು ಟೀ ಚಮಚ ಹಾಲಿನ ಕೆನೆಯನ್ನು ಬೆರೆಸಿ, ಇದಕ್ಕೆ ಬೇಕಾದಲ್ಲಿ ಲಿಂಬೆರಸವನ್ನು ಬೆರೆಸಿಕೊಳ್ಳಬಹುದು, ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಲೇಪಿಸಿ, 15 ನಿಮಿಷ ಬಿಟ್ಟು ನಂತರ ಮುಖ ತೊಳೆಯಿರಿ.

1

ಒಂದು ಟೀ ಚಮಚ ಹಾಲಿನ ಕೆನೆಯ ಜೊತೆಗೆ, ಒಂದು ಟೀ ಚಮಚ ಓಟ್ಸ್ ಒಂದು ಟೀ, ಚಮಚ ಅರಿಶಿನ ಮತ್ತು ಒಂದು ಟೀ ಚಮಚ  ರೋಸ್ ವಾಟರ್ ಬೆರೆಸಿಕೊಳ್ಳಿ, ಇದನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳಿ ಮತ್ತು ವೃತ್ತಾಕಾರವಾಗಿ ಐದು ನಿಮಿಷಗಳ ಕಾಲ ಉಜ್ಜಿ ಇದನ್ನು 15 ನಿಮಿಷ ಬಿಟ್ಟು ನಂತರ ತೊಳೆಯಿರಿ ನಿಮ್ಮ ಮುಖವನ್ನು  ಹಾಲಿನ ಕೆನೆಯಂತೆ ತ್ವಚೆಯ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ.