ಒಡೆದ ಹಾಲಿನಿಂದ ತಯಾರು ಮಾಡಬಹುದಾದ ರಸಗುಲ್ಲ

0
4090

ಒಡೆದ ಹಾಲನ್ನು ಹಾಗೆ ಚೆಲ್ಲುವ ಬದಲು ಸ್ವಾದಭರಿತ ರಸಗುಲ್ಲ ಮಾಡಿ ಬಾಯಿ ಸಿಹಿ ಮಾಡಿಕೊಳ್ಳಿ.

ಬೇಕಾಗುವ ಪದಾರ್ಥಗಳು

 • ಹಾಲು ೧ ಲೀಟರ್ / ಒಡೆದ ಹಾಲು ಅಥವಾ ಹಾಲಿನ ಕೆನೆ 1 ಕಪ್
 • ನಿಂಬೆರಸ ೫ ತಬಲ್ ಚಮಚ
 • ಸಕ್ಕರೆ 1 ಕಪ್
 • ಮೈದಾ ಹಿಟ್ಟು 2 ಟೀ ಚಮಚ
 • ಎಲಕ್ಕಿ ಪುಡಿ

ಮಾಡುವ ವಿಧಾನ

 • ಮೊದಲು ಒಡೆದ ಹಾಲನ್ನು ತೆಳುವಾದ ಬಟ್ಟೆಯಲ್ಲಿ ಸೋಸಿಕೊಳ್ಳಿ. ಅಥವಾ ಹಾಲನ್ನು ಮೀಡಿಯಂ ಉರಿಯಲ್ಲಿ ಕಾಯಲು ಇಟ್ಟು, ಆಗಾಗ ಕೈಆದಿಸುತ್ತಿರಿ. ಕುದಿಯಲು ಬಂದಾಗ ನಿಂಬೆರಸವನ್ನು ೨ ಟೇಬಲ್ ಚಮಚ ನೀರಿನಲ್ಲಿ ಬೆರೆಸಿ, ಅದನ್ನು ನಿಧಾನವಾಗಿ ಹಾಲಿಗೆ ಸೇರಿಸುತ್ತ ಜೊತೆಯಲ್ಲಿ ಹಾಲನ್ನೂ ಕೈಆದಿಸುತ್ತಿರಿ. ಎಲ್ಲ ಹಾಲು ಒಡೆದ ನಂತರ, ಒಲೆಯಿಂದ ಇಳಿಸಿ. ಈಗ ಒಡೆದ ಹಾಲಿನ ನೀರನ್ನು ಬೇರ್ಪಡಿಸಿ.(ಒಂದು ಬಟ್ಟೆಯಲ್ಲಿ ಒಡೆದ ಹಾಲನ್ನು ಹಾಕಿ, ಮೇಲೆ ತಣ್ಣಿರನ್ನು ಹಾಕಿ (ಆಗ ನಿಂಬೆ ಹಣ್ಣಿನ ರುಚಿ ಹಾಗು ಹುಳಿ ಬರುವುದಿಲ್ಲ ) ಎಲ್ಲ ನೀರನ್ನು ಹಿಂಡಿ ತೆಗೆಯಿರಿ.

step-2

 • ನಂತರ ಸಿಗುವ ಹಾಲಿನ ತಿರುಳಿಗೆ ಮೈದಾ ಹಿಟ್ಟು ಸೇರಿಸಿ ೪-೫ ನಿಮಿಷ ಚೆನ್ನಾಗಿ ನಾದಿ, ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ

step-5

 • 15 ನಿಮಿಷ ಇದನ್ನು ನೆನೆಯಲು ಬಿಡಿ, ಆಮೇಲೆ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಕೊಳ್ಳಿ.
 • ನಂತರ 1 ಕಪ್ ಸಕ್ಕರೆಗೆ 1 ಕಪ್ ನೀರನ್ನು ಬೆರೆಸಿ ಸಕ್ಕರೆ ಪಾಕ ತಯಾರಿಸಿಕೊಳ್ಳಿ.
 • ಕುದಿಯುತ್ತಿರುವ ಪಾಕಕ್ಕೆ ಉಂಡೆಗಳನ್ನು ಹಾಕಿ 5 ನಿಮಿಷ ಬೇಯಿಸಿ.
 • ನಂತರ ಎಲಕ್ಕಿ ಪುಡಿ ಹಾಕಿ ಸ್ವಲ್ಪ ಆರಿದ ನಂತರ ಫ್ರಿಜ್ ನಲ್ಲಿಟ್ಟು ತಣ್ಣಗಾದ ಮೇಲೆ ಬಡಿಸಿ.