ದೇಶದಲ್ಲಿ ಆಟೋಮೊಬೈಲ್ ವಲಯ ಕುಸಿಯಲು ಯುವಪೀಳಿಗೆ ಓಲಾ, ಉಬರ್, ಮೆಟ್ರೋ ಬಳಸುವುದೇ ಕಾರಣವೆಂದ ನಿರ್ಮಲಾ ಸೀತಾರಾಮನ್.!

0
146

ದೇಶದ ಆರ್ಥಿಕತೆ ಕುಸಿಯುತ್ತಿದ್ದು, ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ಕಳೆದುಕೊಳ್ಳುವ ಆತಂಕ ಶುರುವಾಗಿದೆ. ಈಗಾಗಲೇ ಆಟೋಮೊಬೈಲ್ ವಲಯ ನೆಲಕಚ್ಚಿದ್ದು, ಇದಕ್ಕೆ ಸರಿಯಾದ ಕಾರಣವನ್ನು ಹುಡುಕುವಲ್ಲಿ ಸರ್ಕಾರ ಬದ್ದವಾಗಿದ್ದು. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಲವಾದ ಕಾರಣವನ್ನು ತಿಳಿಸಿದ್ದು. ಓಲಾ, ಉಬರ್ ಹಾಗೂ ಮೆಟ್ರೋ ಪ್ರಯಾಣ ಆಟೋಮೊಬೈಲ್ ವಲಯದಲ್ಲಿ ವಾಹನ ಮಾರಾಟ ಕುಸಿಯಲು ಕಾರಣವಾಗಿದೆ ಎಂದು ಹೇಳಿದ್ದಾರೆ.

Also read: ಮಹಿಳಾ ಪೌರ ಕಾರ್ಮಿಕರೊಂದಿಗೆ ಸೇರಿ ಪ್ಲ್ಯಾಸ್ಟಿಕ್ ಕಸ ಬೇರ್ಪಡಿಸಿದ ಪ್ರಧಾನಿ ಮೋದಿ; ಮುಂದೇನು ಮಾಡಿದರು ನೋಡಿ..!

ವಾಹನ ಮಾರಾಟ ಕುಸಿಯಲು ಟ್ಯಾಕ್ಸಿಗಳು ಕಾರಣವಂತೆ;

ಹೌದು ಹೊಸ ಪೀಳಿಗೆಯ ಜನತೆ ಓಲಾ, ಉಬರ್ ಮೆಟ್ರೋ ನಂತಹ ಸೇವೆಗಳಿಗೆ ಮುಖಮಾಡಿದ್ದು ದೇಶದ ಅಟೋಮೊಬೈಲ್ ಉದ್ಯಮ ಕುಸಿತಕ್ಕೆ ಕಾರಣವಾಗಿದೆ. ಎಂದು ಕೇಂದ್ರ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೀತಾರಾಮಾನ್ ಅವರು, ಎರಡು ವರ್ಷಗಳ ಹಿಂದೆ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತಮ ಅವಕಾಶ ಇತ್ತು. ಆದರೆ ಈಗ ದೇಶದ ಲಕ್ಷಾಂತರ ಜನರು ತಮ್ಮ ಇಎಂಐ ಉಳಿಸಲು ಓಲಾ ಮತ್ತು ಉಬರ್ ಕಾರುಗಳಲ್ಲಿ ಓಡಾಡುತ್ತಾರೆ. ಇದೇ ಕಾರಣಕ್ಕೆ ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಕಂಡಿದೆ ಎಂದು ಹೇಳಿದ್ದಾರೆ.

Also read: ಇನ್ಮುಂದೆ ಚಪ್ಪಲಿ, ಲುಂಗಿ ಹಾಕ್ಕೊಂಡು ಗಾಡಿ ಓಡ್ಸಿದ್ರೂ ಬಿಳ್ಳುತ್ತೆ ದಂಡದ ಜೊತೆಗೆ ಜೈಲು ವಾಸ; ಮೊದಲು ಸಂಪೂರ್ಣ ನಿಯಮ ತಿಳಿದು ವಾಹನ ಹತ್ತಿ..!

ಅಟೋಮೊಬೈಲ್ ಕಂಪನಿಗಳು ಈಗ ವಿಧಿಸುವ ಶೇ.28 ಜಿಎಸ್‍ಟಿಯನ್ನು ಶೇ.18ಕ್ಕೆ ಇಳಿಸುವ ಬೇಡಿಕೆಯನ್ನು ಮುಂದಿಟ್ಟಿವೆ. ಈ ಬಗ್ಗೆ ಗೋವಾದಲ್ಲಿ ನಡೆಯಲಿರುವ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳು ಶೇ.18ಕ್ಕೆ ಜಿಎಸ್‍ಟಿ ಇಳಿಕೆಯಾಗುತ್ತಾ ಎಂದು ಪ್ರಶ್ನಿಸಿದ್ದಕ್ಕೆ, ಈ ಸಂದರ್ಭದಲ್ಲಿ ನಾನೊಬ್ಬಳೇ ಜಿಎಸ್‍ಟಿ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಉತ್ತರಿಸಿ ಆರ್ಥಿಕತೆ ಕುಸಿಯುತ್ತಿರುವ ಬೆನ್ನಲ್ಲೇ ಜುಲೈ ತಿಂಗಳಿನಲ್ಲಿ ದೇಶದಲ್ಲಿನ ವಿವಿಧ ಕ್ಷೇತ್ರದ ಉದ್ಯಮಿಗಳ ಜೊತೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿದ್ದೇವೆ.

ಭಾರತ್ ಸ್ಟೇಜ್ ನ ಮುಂದಿನ ಹಂತದ ವಾಹನಕ್ಕಾಗಿಯೇ ದೊಡ್ಡ ಪ್ರಮಾಣದಲ್ಲಿ ಕಾಯ್ದುಕೊಂಡಿದ್ದಾರೆ. ಈಗಲೇ ವಾಹನ ಖರೀದಿ ಮಾಡುವುದಕ್ಕಿಂತ ಹೊಸ ಎಂಜಿನ್ ಬಳಸಿದ ವಾಹನಗಳು ಬರಲಿ. ಅಲ್ಲಿಯವರೆಗೆ ಓಲಾ, ಉಬರ್ ನಲ್ಲಿ ಸಂಚರಿಸೋಣ ಎಂಬ ಆಲೋಚನೆಯಲ್ಲಿ ಇದ್ದಾರೆ ಎಂದು ಅವರು ಹೇಳಿದರು. ಇನ್ನು ಅಶೋಕ್ ಲೇಲ್ಯಾಂಡ್ ವಾಹನಗಳ ಮಾರಾಟದಲ್ಲೂ ಭಾರೀ ಕಡಿಮೆ ಆಗಿದೆ. ವಾಹನ ಮಾರಾಟ ಕ್ಷೇತ್ರ ಸುಧಾರಣೆಗೆ ಸಾಕಷ್ಟು ಶ್ರಮಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. ಇದಕ್ಕೆ ಕಾಂಗ್ರೆಸ್ ಪಕ್ಷವು ಟ್ವಿಟ್ ಮಾಡಿ ಬಸ್, ಟ್ರಕ್ ಗಳ ಮಾರಾಟ ಇಳಿಕೆಗೆ ಓಲಾ, ಉಬರ್ ಕಾರಣವೆ ಎಂದು ಪ್ರಶ್ನಿಸಿದೆ.

Also read: ಓಎಲ್‌ಎಕ್ಸ್‌ನಲ್ಲಿ ಮೊಬೈಲ್ ಮಾರಲು ಸ್ವಿಗ್ಗಿ ಗೋ ಆ್ಯಪ್ ಸಹಾಯ ಪಡೆದು 95 ಸಾವಿರ ಕಳೆದುಕೊಂಡ ಮಹಿಳೆ..!

ಅದರಂತೆ ಸತತ 8 ತಿಂಗಳಿನಿಂದ ಅಟೋಮೊಬೈಲ್ ಕ್ಷೇತ್ರದ ಬೆಳವಣಿಗೆ ಇಳಿಕೆ ಆಗುತ್ತಿದ್ದು ಆಗಸ್ಟ್ ತಿಂಗಳಿನಲ್ಲೂ ಮುಂದುವರಿದಿದೆ. ಆಗಸ್ಟ್ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಭಾರೀ ಇಳಿಕೆಯಾಗಿದ್ದು 1997-98ರ ನಂತರ ಅತಿ ಕಡಿಮೆ ಪ್ರಯಾಣಿಕ ವಾಹನ ಮಾರಾಟವಾದ ತಿಂಗಳು ಎಂಬ ಕೆಟ್ಟ ಇತಿಹಾಸವನ್ನು ಬರೆದಿದೆ. 2018ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಪ್ರಯಾಣಿಕ ವಾಹನಗಳ ಮಾರಾಟ ಶೇ.31.57 ಕುಸಿತ ದಾಖಲಿಸಿದೆ. 2018ರ ಆಗಸ್ಟ್ ತಿಂಗಳಿನಲ್ಲಿ 2,87,198 ಪ್ರಯಾಣಿಕ ವಾಹನಗಳು ಮಾರಾಟಗೊಂಡರೆ ಕಳೆದ ತಿಂಗಳು ಒಟ್ಟು 1,96,524 ವಾಹನಗಳು ಮಾರಾಟಗೊಂಡಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ(ಎಸ್‍ಐಎಎಂ) ತನ್ನ ತಿಂಗಳ ವರದಿಯಲ್ಲಿ ತಿಳಿಸಿದೆ.