ಮನಸ್ಸು ಉಲ್ಲಾಸದಿಂದಿದ್ದರೆ ಮಾತ್ರ ದೈಹಿಕ ಅರೋಗ್ಯ ಸಾಧ್ಯ!!!

0
1197

ಹೊಸ ವರ್ಷಕ್ಕಾಗಿ ಹಲವು ನಿರ್ಣಯ ಕೈಗೊಳ್ಳುವುದು ಸಹಜ. ಬರೆಯುತ್ತಿದ್ದ ಪುಸ್ತಕ ಪೂರ್ಣಗೊಳಿಸುತ್ತೇನೆ, ದೇಹದ ತೂಕ ಕಡಿಮೆ ಮಾಡಿಕೊಳ್ಳುತ್ತೇನೆ, ಸಿಗರೇಟು ಸೇದುವುದನ್ನು ತ್ಯಜಿಸತ್ತೇನೆ ಎಂಬೆಲ್ಲಾ ನಿರ್ಣಯ ಕೈಗೊಳ್ಳುವುದು ಸಾಮಾನ್ಯ. ಇದೆಲ್ಲದರ ಮಧ್ಯೆ ನಮಗೆ ಅಗತ್ಯವಾದ ಪ್ರಮುಖ ಅಂಶಗಳನ್ನೇ ನಾವು ಮರೆತು ಬಿಟ್ಟಿರುತ್ತೇವೆ.

Image result for yoga

ಹೌದು ಹೊಸ ವರ್ಷದ ಆರಂಭದಲ್ಲಿ ಜೀವನ ಶೈಲಿಯ ಬದಲಾವಣೆ ಬಗ್ಗೆ ಗಮನ ನೀಡುತ್ತೇವೆ, ಹೊರತು ನಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕೊಂಚವು ಯೋಚನೆ ಮಾಡುವುದಿಲ್ಲ. ದೇಹದ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ ಎನ್ನುವುದನ್ನು ನಾವು ಮರೆತೇ ಬಿಟ್ಟಿರುತ್ತೇವೆ.

ಸಹಜವಾಗಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಮದ್ಯಸೇವನೆ ಮತ್ತು ಮಾದಕ ದ್ರವ್ಯಗಳಿಂದ, ಆದರೆ ಒಂಟಿತನ ಮತ್ತು ತಿರಸ್ಕಾರಗಳು ಕೂಡ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು.

ಸಾಮಾಜಿಕ ಒಂಟಿತನ ನಮ್ಮ ಭಾವನೆಗಳ ಮೇಲೆ ಹೆಚ್ಚು ಪರಿಣಾಮ ಬೀರಿ, ಮಾನಸಿಕ ದೈಹಿಕ ಆರೋಗ್ಯವನ್ನು ಹಾಳು ಮಾಡುತ್ತದೆ ಎಂಬ ಯೋಚನೆಯೂ ನಮ್ಮಲ್ಲಿರುವುದಿಲ್ಲ.ಹೊಸ ವರ್ಷಾರಂಭದ ನಮಗಾಗಿ ಏನು ತರುತ್ತದೆ ಎಂಬುದು ಮುಖ್ಯವಲ್ಲ, ಮಾನಸಿಕ ಆರೋಗ್ಯವನ್ನು ನಾವು ಎಷ್ಟು ಕಾಪಾಡಿಕೊಳ್ಳುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಆದ್ದರಿಂದ ದೈಹಿಕ, ಆರೋಗ್ಯ, ಜೀವನ ಶೈಲಿ ಬದಲಾವಣೆ ಮಾಡುವ ಜತೆಗೆ ಮನಸ್ಸನ್ನು ಉಲ್ಲಾಸವಾಗಿಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ.

Image result for mind and body
ಇದು ನಮ್ಮನ್ನು ನಾವು ಶಿಕ್ಷಿಸಿಕೊಂಡಂತೆ. ಬೇರೆಯವರ ಜೊತೆ ಹೋಲಿಕೆ ಮಾಡುವುದನ್ನು ಮೊದಲು ನಿಲ್ಲಿಸಿ. ಜೀವನದ ಒತ್ತಡಗಳನ್ನು ಬಿಟ್ಟು, ಸದಾ ಲವಲವಿಕೆಯಿಂದ ಕಾಲ ಕಳೆದರೆ, ಮಾನಸಿಕ ಆರೋಗ್ಯ ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ.