ಪುಲ್ವಾಮ ದಾಳಿ ಮಾಡಿಸಿದ್ದು ಬಿ.ಜೆ.ಪಿ. ಸರ್ಕಾರ ಮಾಡಿದ ನಾಟಕ ಎಂದು ಹೇಳಿ ಸೇನೆಗೆ ಅವಮಾನ ಮಾಡಿದ ಕಾಂಗ್ರೆಸ್ ನಾಯಕ ಪರಮೇಶ್ವರ್ ನಾಯಕ್

0
368

ಪುಲ್ವಾಮ ದಾಳಿ ದೇಶದಲ್ಲೇ ಹಲವು ವಿಚಾರಗಳನ್ನು ಹುಟ್ಟುಹಾಕಿ, ಇದೆಲ್ಲ ರಾಜಕೀಯ ಚದುರಂಗದಾಟ ಎಂದು ವಿರೋಧ ಪಕ್ಷಗಳು ನರೇಂದ್ರ ಮೋದಿಯವರಿಗೆ ಟೀಕೆ ಮಾಡಿದ ವಿಷಯಗಳು ಎಲ್ಲೆಡೆ ಹರಿದಾಡುತ್ತಿವೆ. ಅದರಂತೆ ಹಲವು ವಿರೋಧ ಪಕ್ಷದ ನಾಯಕರು ಹೇಳುವ ಹಾಗೆ ಚುನಾವಣಾ ಹತ್ತಿರ ಬಂದ ಹಾಗೆ ಬಿಜೆಪಿ ಪಕ್ಷ ಜನರಿಂದ ಮೆಚ್ಚುಗೆ ಪಡೆಯಲು ಮಾಡಿರುವ ಕುತಂತ್ರ ಎನ್ನುವ ಹಲವು ಮಾತು ಕೇಳಿಬರುತ್ತಿದವು. ಮತ್ತು ಉಗ್ರ ಮಹಿಳೆಯ ಜೊತೆಗೆ ಬಿಜೆಪಿಯ ನಾಯಕರು ಮಾತನಾಡಿದ ಆಡಿಯೋ ಕೂಡ ಹರಿದಾಡುತ್ತಿತು. ಈಗ ಅದೇ ವಿಷಯವಾಗಿ ಕಾಂಗ್ರೆಸ್ ನಾಯಕನೊಬ್ಬ ಪುಲ್ವಾಮಾ ದಾಳಿ ಬಿಜೆಪಿ ನಾಟಕ ಎಂದು ಹೇಳಿಕೆ ನೀಡಿದ್ದಾರೆ.

Also read: ಕೇರಳದಿಂದ ರಾಹುಲ್ ಗಾಂಧಿ ಸ್ಪರ್ಧೆ!! ಉತ್ತರ ಪ್ರದೇಶದಲ್ಲಿ ಸೋಲಿನ ಭೀತಿಯಿಂದ ಈ ರೀತಿ ಮಾಡಿರಬಹುದಾ??

ಹೌದು ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಚಿವ ಪರಮೇಶ್ವರ್ ನಾಯ್ಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಚಿವ ಹೇಳುವ ಹಾಗೆ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕುಸಿದಿದೆ. ಇತ್ತೀಚೆಗೆ ನಡೆದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ ಹಾಗೂ ಮಿಜೋರಾಂ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿತ್ತು. ಹೀಗಾಗಿ ಪುಲ್ವಾಮಾ ದಾಳಿ ನಾಟಕ ನಡೆಯಿತು ಎಂದು ಆರೋಪಿಸಿ ಅವರು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಬಿಜೆಪಿಯ ಕುತಂತ್ರ. 4 ವರ್ಷ 9 ತಿಂಗಳ ಇಲ್ಲದ ದಾಳಿ ಇದೀಗ ಏಕಾಏಕಿ ನಡೆದಿದೆ. ಇದೆಲ್ಲಾ ಬಿಜೆಪಿ ನಾಟಕ ಎಂದು ಸಚಿವ ಪರಮೇಶ್ವರ್ ನಾಯ್ಕ್ ಹೇಳಿದ್ದಾರೆ.

ಪುಲ್ವಾಮ ದಾಳಿಗೆ ಬಿಜೆಪಿಯ ಕೃಪಾ?

ಅದೇ ವಿಷಯವಾಗಿ ಮಾತನಾಡಿದ ಸಚಿವರು ಪುಲ್ವಾಮಾ ದಾಳಿಯು ಬಿಜೆಪಿಯ ಕೃಪಾ ಪೋಷಿತ ನಾಟಕವಾಗಿದೆ. ಏಕೆಂದರೆ ಭಾರತೀಯ ವಾಯು ಪಡೆಯ ಪೈಲಟ್ ಅಭಿನಂದನ್ ಅವರನ್ನು ಪಾಕಿಸ್ತಾನ ಬಂಧನದಿಂದ ಬಿಡಿಸಿಕೊಂಡು ಬಂದಿದದ್ದನ್ನು ಸ್ವಾಗತಿಸುತ್ತೇನೆ. ಆದರೆ ಸುಮಾರು ವರ್ಷಗಳಿಂದ ಪಾಕಿಸ್ತಾನದ ಬಂಧನದಲ್ಲಿರುವ ಕುಲಭೂಷಣ್ ಜಾಧವ್ ಅವರನ್ನು ಯಾಕೆ ಬಿಡಿಸಿಕೊಂಡು ಬಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ ಅವರು ಬಿಜೆಪಿಯ ನಾಯಕರು 2014ರ ಲೋಕಸಭಾ ಚುನಾವಣೆಯಲ್ಲಿ ಅನೇಕ ಭರವಸೆಗಳನ್ನು ನೀಡಿದ್ದರು. ಕಾಂಗ್ರೆಸ್ ನಾಯಕರು ಸ್ವೀಸ್ ಬ್ಯಾಂಕ್‍ನಲ್ಲಿ ಹಣ ಇಟ್ಟಿದ್ದಾರೆ.

Also read: ಯಾರು ನರೇಂದ್ರ ಮೋದಿಯವರನ್ನು ವಿರೋಧಿಸುತ್ತಾರೆ, ಯಾರು ದೇಶದ ಉತ್ತಮ ಬದಲಾವಣೆಯನ್ನು ಮೆಚ್ಚುವುದಿಲ್ಲವೂ ಅವರೆಲ್ಲರೂ ದೇಶ ವಿರೋಧಿಗಳು : ತೇಜಸ್ವಿ ಸೂರ್ಯ, ಇದು ನಿಜ ಅನ್ಸುತ್ತಾ??

ಆ ಕಪ್ಪು ಹಣವನ್ನು ಭಾರತಕ್ಕೆ ವಾಪಾಸ್ ತರುತ್ತೇವೆ. ಸಾರ್ವಜನಿಕರ ಖಾತೆಗೆ ಹಣ ಹಾಕುವ ಭರವಸೆ ನೀಡಿದ್ದರು. ಆದರೆ ಯಾರಿಗೂ ಒಂದು ರೂಪಾಯಿ ಕೂಡ ಹಾಕಲಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು ದೇಶದಲ್ಲಿ ಉದ್ಯೋಗ ಸೃಷ್ಟಿ, ಮಹಿಳೆಯರು ಹಾಗೂ ರೈತರ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಲಿಲ್ಲ. ಬರಗಾಲ ಎದುರಿಸುತ್ತಿದ್ದ ಜಿಲ್ಲೆಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಲಿಲ್ಲ. ರೈತರ ಸಮಸ್ಯೆ ಕೇಳಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಹಕಾರಿ ಸಂಘಗಳ ರೈತರ ಸಾಲವನ್ನು ಮನ್ನಾ ಮಾಡಿದೆ.

Also read:

ಅಷ್ಟೇ ಅಲ್ಲದೆ ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲಮನ್ನಾ ಮಾಡುತ್ತಿದೆ. ಇದು ಕಾಂಗ್ರೆಸ್ ಅವರ ಅಭಿವೃದ್ದಿ ಕೆಲಸವಾಗಿದೆ. ಈ ಬಾರಿ ಏನಾದರು ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ನಾಟಕವನ್ನು ಜನರ ಮುಂದೆ ತೆರೆದಿಡುವ ಕೆಲಸ ಮಾಡುತ್ತೇವೆ. ಹೀಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿಸಲು ನಾವೆಲ್ಲರೂ ಶ್ರಮಿಸಬೇಕಿದೆ. ಎಂದು ಸಚಿವ ಪರಮೇಶ್ವರ್ ನಾಯ್ಕ್ ಹೇಳಿದ್ದಾರೆ.