ದೇಶದಲ್ಲಿ ಕಾನೂನಿನ ಮುಂದೆ ದೊಡ್ಡವರು ಯಾರಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾವು ಸಹಕಾರ ನೀಡುತ್ತೇವೆ; ಜಮೀರ್‌ಗೆ ಡಿ.ಕೆ. ಶಿವಕುಮಾರ್ ಟಾಂಗ್‌

0
98

ಕೊರೊನಾ ವೈರಸ್ ಬಂದಾಗಿನಿಂದ ಮುಸ್ಲಿಂ ಸಮುದಾಯದ ವಿರುದ್ಧ ಹಲವು ವಿವಾದಗಳು ಕೇಳಿ ಬರುತ್ತಿವೆ, ಏಕೆಂದರೆ ದೇಶದಲ್ಲಿ ಹೆಚ್ಚಿನ ವೈರಸ್ ಹರಡಲು ಮುಸ್ಲಿಂ ಕಾರಣ ಎನ್ನುವ ವಾದ ಶುರುವಾಗಿದೆ. ಅದರಂತೆ ಕೆಲವು ಮುಸ್ಲಿಂರ ವರ್ತನೆ ಕೂಡ ಭಾರಿ ವಿರೋಧಕ್ಕೆ ಕಾರಣವಾಗಿದೆ, ಇದಕ್ಕೆ ಸಾಕ್ಷಿಯಾದ ಘಟನೆ ಎಂದರೆ ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ಬಿಬಿಎಂಪಿ, ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆಗೆ ಪ್ರಯತ್ನ ನಡೆಸಲಾಗಿತ್ತು. ಈ ಘಟನೆ ಸಂಬಂಧ ಇದುವರೆಗೂ 119 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮೂಗು ತೂರಿಸಿಕೊಂಡ ಕೈ ನಾಯಕನ ಜಮೀರ್‌ಗೆ ಡಿ.ಕೆ.ಶಿವಕುಮರ್ ತರಾಟೆಗೆ ತೆಗೆದುಕೊಂಡಿರುವುದು ಭಾರಿ ವೈರಲ್ ಆಗಿದೆ.

ಹೌದು ಪಾದರಾಯನಪುರ ಘಟನೆಗೆ ಸಂಬಂಧ ಶಾಸಕ ಜಮೀರ್ ಅಹಮದ್ ಬಗ್ಗೆ ನಮ್ಮ ಪಕ್ಷದ ಒಟ್ಟಾರೆ ನಾಯಕರ ಜತೆ ಮಾತನಾಡಿ ನಿರ್ಧರಿಸುತ್ತೇವೆ. ಅಲ್ಲೊಬ್ಬ ಇಲ್ಲೊಬ್ಬ ಶಾಸಕರು ಮಾತನಾಡಿದರೆ ಅದು ಪಕ್ಷದ ಅಭಿಪ್ರಾಯ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾನೂನು ಎಲ್ಲರಿಗಿಂತ ದೊಡ್ಡದು. ಇದಕ್ಕಿಂತ ದೊಡ್ಡವರು ಯಾರೂ ಇಲ್ಲ. ಕಾನೂನು ನಿಭಾಯಿಸುವುದು, ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಸರಕಾರದ ಜತೆ ನಾವು ಸದಾ ಇದ್ದೇವೆ ಎಂದು ಜಮೀರ್‌ಗೆ ಟಾಂಗ್ ನೀಡಿದರು.

ಪಾದರಾಯನಪುರದಲ್ಲಿ ಗಲಭೆ ನಡೆಸಿ ಬಂಧಿತರಾದವರನ್ನು ರಾಮನಗರದ ಜೈಲಿಗೆ ಸ್ಥಳಾಂತರಿಸುವ ವಿಚಾರದಲ್ಲಿ ಸರಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನಾನು ಮೊದಲಿನಿಂದಲೂ ಈ ಜೈಲನ್ನು ನೋಡುತ್ತಾ ಬಂದಿದ್ದೇನೆ. ರಾಮನಗರದ ಜೈಲು ತುಂಬಾ ಚಿಕ್ಕದು. ಡಿಸಿ ಕಚೇರಿ ಪಕ್ಕದಲ್ಲೇ ಇದೆ. ಅಲ್ಲಿಗೆ ಕೊರೋನಾ ಶಂಕಿತರನ್ನ ಸ್ಥಳಾಂತರಿಸುವುದಕ್ಕೆ ಹಲವರು ಹೆದರಿದ್ದಾರೆ ಎಂದು ಹೇಳಿದರು. ಆದರೆ, ಸರಕಾರದ ನಿರ್ಧಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಸರಕಾರ ಎಲ್ಲ ರೀತಿ ಯೋಚನೆ ಮಾಡಿ ಈ ನಿರ್ಧಾರ ಕೈಗೊಂಡಿರುತ್ತದೆ. ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ರೆ ಏನು ಆಗುತ್ತೆ ಅಂತಾ ಅವರು ಪರಿಶೀಲನೆ ನಡೆಸಿರುತ್ತಾರೆ. ಎಲ್ಲರನ್ನೂ ರಕ್ಷಣೆ ಮಾಡುವ ಜವಾಬ್ದಾ ರಿ ಸರಕಾರದ ಮೇಲಿದೆ ಎಂದರು.

ಏ.20ರಿಂದ ಲಾಕ್‌ಡೌನ್‌ ತೆರವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಸರಕಾರ ಕೂಡ ಅದೇ ನಿಟ್ಟಿನಲ್ಲಿ ಕೆಲ ಘೋಷಣೆ ಮಾಡಿತ್ತು. ಅದನ್ನು ನಂತರ ವಾಪಸ್ ಪಡೆದಿದ್ದಾರೆ. ಸರಕಾರ ಯಾವ ತೀರ್ಮಾನ ತೆಗೆದುಕೊಂಡರು ಅದಕ್ಕೆ ಬದ್ಧವಾಗಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಸಹಕಾರ ನೀಡುತ್ತೇವೆಂದು ಮಾತು ಕೊಟ್ಟಿದ್ದೇನೆ. ನಾವು ಕೆಲ ಸಲಹೆ ನೀಡಿದ್ದೇವೆ. ಅದರಲ್ಲಿ ಎಷ್ಟನ್ನು ಸ್ವೀಕರಿಸುವುದು, ಬಿಡುವುದು ಅವರಿಗೆ ಬಿಟ್ಟದ್ದು ಎಂದು ಅವರು ತಿಳಿಸಿದರು. ಆದರೆ, ರಾಜ್ಯದ ಜನರ ರಕ್ಷಣೆ, ಪಾರದರ್ಶಕತೆ ಉಳಿಸುವುದು, ಎಲ್ಲರಿಗೂ ಸೌಲಭ್ಯ ಕಲ್ಪಿಸುವುದು, ಎಲ್ಲಾ ವರ್ಗದ ಜನರ ರಕ್ಷಣೆ ಮಾಡಬೇಕು, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಆರೋಗ್ಯ, ಆರ್ಥಿಕತೆಯನ್ನು ಕಾಪಾಡುವುದು ಸರಕಾರದ ಕರ್ತವ್ಯ. ಜನರ ಪರವಾಗಿ ಇದಕ್ಕೆ ಬದ್ಧವಾಗಿರುವಂತೆ ಮನವಿ ಮಾಡುತ್ತೇನೆ.

ರಾಜ್ಯ ಹಾಗೂ ರಾಷ್ಟ್ರ ಒಂದೊಂದು ಘೋಷಣೆ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ, ಎಲ್ಲರೂ ಒಂದಾಗಿ ರಾಷ್ಟ್ರ ರಕ್ಷಿಸಿಕೊಳ್ಳುವ ಅವಶ್ಯಕತೆ ಇದೆ. ಪಾದರಾಯನಪುರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ ಎಂದು ನಂಬಲು ನನ್ನಿಂದ ಸಾಧ್ಯವಾಗುತ್ತಿಲ್ಲ. ತಮ್ಮನ್ನು ಉಳಿಸಲು ಬಂದವರ ಮೇಲೆ ಜನ ಹಲ್ಲೆಗೆ ಮುಂದಾಗಿರುವುದು ಅತ್ಯಂತ ನೋವಿನ ಸಂಗತಿ. ನಾನು ಯಾರಿಗೂ ನನ್ನ ಅಪ್ಪಣೆ ಪಡೆದು ಚಾಮರಾಜಪೇಟೆಗೆ ಬರಬೇಕು ಎಂದು ಎಲ್ಲಿಯೂ ನಾನು ಹೇಳಿಲ್ಲ ಎಂದು ಹೇಳಿದ್ದಾರೆ.

Also read: ದೇಶದಲ್ಲಿ ಮೇ 3 ಕ್ಕೆ ಮುಗಿಯಲ್ಲ ಲಾಕ್ ಡೌನ್; ಮುಂದಿನ ವಾರದೊಳಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆಯೇ ಪ್ರಧಾನಿ ಮೋದಿ.!