‘ದಿ ವಿಲನ್’ ಚಿತ್ರಕ್ಕೆ ಬಾಲಿವುಡ್ ದಿಗ್ಗಜ ಮಿಥುನ್ ಚಕ್ರವರ್ತಿ

0
814

ಜೋಗಿ ಪ್ರೇಮ್ ತಮ್ಮ ನಿರ್ದೇಶನದ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ದಿ ವಿಲನ್ ಚಿತ್ರಕ್ಕೆ ಇದೀಗ ಬಾಲಿವುಡ್ ದಿಗ್ಗಜ ಮಿಥುನ್ ಚಕ್ರವರ್ತಿ ಎಂಟ್ರಿಕೊಟ್ಟಿದ್ದಾರೆ.

ಜೋಗಿ ಪ್ರೇಮ್ ತಮ್ಮ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ದಿ ವಿಲನ್ ಗೆ ಬಾಲಿವುಡ್ ನಟನನ್ನು ಕರೆದಿದ್ದಾರೆ. ಸುಮಾರು 350 ಚಿತ್ರಗಳಲ್ಲಿ ಅಭಿನಯಿಸಿರುವ ಮಿಥುನ್ ಚಕ್ರವರ್ತಿ ಸಹ ದಿ ವಿಲನ್ ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ. ಇನ್ನು ಮುಂದಿನ ವಾರ ಬೆಳಗಾವಿಯಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಮಿಥುನ್ ಕಿಚ್ಚ ಸುದೀಪ್ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ.
ಸುದೀಪ್ ಮತ್ತು ಮಿಥುನ್ ಚಕ್ರವರ್ತಿ ನಡುವಿನ ಚಿತ್ರೀಕರಣಕ್ಕೆ ನಿರ್ದೇಶಕ ಪ್ರೇಮ್ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ.